Monday, January 12, 2015

Daily Crime Reports As on 12/01/2015 at 07:00 Hrs

ಅಪಘಾತ ಪ್ರಕರಣಗಳು
  • ಉಡುಪಿ ಸಂಚಾರ : ದಿನಾಂಕ 10.01.2015 ರಂದು 14.00 ಗಂಟೆಗೆ ಶ್ರೀ ನಿಧಿಷ್ (20) ತಂದೆ ದಿ:ಬಿ ತರಂತ ವಾಸ: ಮಂಜುಶ್ರೀ ನಿವಾಸ ಪೈರ್ ಸ್ಟೇಷನ್ ಹತ್ತಿರ ಉಡುಪಿ ಇವರು ತನ್ನ ಅಣ್ಣನ ಬಾಬ್ತು ಕೆಎ.20.ಡಿ. 4527 ನೇ ಪಲ್ಸರ್ ಮೋಟಾರ್ ಸೈಕಲಿನಲ್ಲಿ ಅಲೆವೂರು ತನ್ನ ಮನೆಯಿಂದ ಕುಕ್ಕಿಕಟ್ಟೆ ಕಡೆಗೆ ಹೋಗುತಿರುವಾಗ ಸಮಯ ಸುಮಾರು 14.00 ಗಂಟೆ ಸಮಯಕ್ಕೆ ಎದುರಿನಿಂದ ಅಂದರೆ ಡಯಾನ ಟಾಕೀಸ್ ಕಡೆಯಿಂದ ಕುಕ್ಕಿಕಟ್ಟೆ ಹೋಗುತಿದ್ದ ಕಸ ವಿಲೆವಾರಿ ಮಾಡುವ ಕೆಎ. 20. ಬಿ7862ನೇ ರಿಕ್ಷಾ ಟೆಂಪೋದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಹೋಗುತ್ತಾ ಕುಕ್ಕಿಕಟ್ಟೆಯ ಅಭಿನಂದನ ಮನೆಯ ಹತ್ತಿರ ತಲಪುವಾಗ ರಸ್ತೆಯ ಎಡ ಬದಿಗೆ ಕೊಂಡು ಹೋಗಿ ಒಮ್ಮಲೆ ಯಾವುದೇ ಸೂಚನೆ ನೀಡದೆ ಏಕಾಏಕಿ ಯೂ ಟರ್ನ್‌ ಮಾಡುವರೇ ನಿರ್ಲಕ್ಷ್ಯತನದಿಂದ ಬಲಗಡೆ ತಿರುಗಿಸಿದಾಗ ಶ್ರೀ ನಿಧಿಷ್ ರವರು ಸವಾರಿ ಮಾಡುತಿದ್ದ ಮೊಟಾರು ಸೈಕಲ್ ರಿಕ್ಷಾ ಟೆಂಪೋದ ಮುಂಬಾಗದ ಬಲ ಬದಿಗೆ ಡಿಕ್ಕಿ ಹೊಡೆದ ಪರಿಣಾಮ ಇವರು ರಸ್ತೆಗೆ ಬಿದ್ದು ಎರಡೂ ಭುಜಗಳಿಗೆ, ಬಲಕೈ ತೋಳು ಮತ್ತು ಮೊಣ ಕೈ ಬಳಿ ರಕ್ತಗಾವಾಗಿರುತದೆ ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ಸಂಚಾರ ಠಾಣಾ ಅಪರಾಧ ಕ್ರಮಾಂಕ : 04/2015 ಕಲಂ. 279, 337 ಐಪಿಸಿ ಯಂತೆ ಪ್ರಕ ರಣ ದಾಖಲಿಸಲಾಗಿದೆ.
  • ಮಲ್ಪೆ: ದಿನಾಂಕ 09/01/2015 ರಂದು ಮದ್ಯಾಹ್ನ 12:30 ಗಂಟೆಗೆ ಮೂಡುತೋನ್ಸೆ ಗ್ರಾಮದ ಕಲ್ಯಾಣಪುರ ಪಂಚಾಯತ್ ಕಛೇರಿಯ ಎದುರು ಸ್ವಲ್ಪ ಮುಂದೆ ಡಾಂಬರು ರಸ್ತೆಯ ಪೂರ್ವಬದಿಯ ಮಣ್ಣು ರಸ್ತೆಯಲ್ಲಿ ಶ್ರೀಮತಿ ಸುಂದರಿ ಬೆಳ್ಚಡ (70) ಗಂಡ: ದಿ. ಬಾಬು ಬೆಳ್ಚಡ ವಾಸ: ಹೊನ್ನಪ್ಪ ಕುದ್ರು, ಕಲ್ಯಾಣಪುರ ಅಂಚೆ, ಮೂಡುತೋನ್ಸೆ ಗ್ರಾಮ ಇವರು ಹಾಗೂ ಅವರ ಜೊತೆಯಲ್ಲಿದ್ದ ಅಪ್ಪಿ, ಜಲಜ, ಕಲ್ಯಾಣಿಯವರು ಕಲ್ಯಾಣಪುರ ಕಡೆಗೆ ನಡೆದುಕೊಂಡು ಹೋಗುವಾಗ ಸಂತೆಕಟ್ಟೆ ಕಡೆಯಿಂದ ಕಲ್ಯಾಣಪುರ ಕಡೆಗೆ ಕೆಎ 20 ಇಡಿ 7356 ನೇ ಮೋಟಾರು ಸೈಕಲ್ ಸವಾರ ಆಲ್ಡ್ರಿನ್ ಎಂಬಾತನು ತನ್ನ ಬಾಬ್ತು ಮೋಟಾರು ಸೈಕಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಲ್ಯಾಣಿಯವರಿಗೆ ಡಿಕ್ಕಿ ಹೊಡೆದ ಪರಿಣಾಮ ಕಲ್ಯಾಣಿಯವರು ರಸ್ತೆಗೆ ಬಿದ್ದು ತಲೆಯ ಹಿಂದೆ ರಕ್ತಗಾಯವಾಗಿದ್ದು ಮಣಿಪಾಲ ಕೆಎಮ್‌ಸಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ. ಬೈಕ್ ಸವಾರನಿಗೂ ರಕ್ತಗಾಯವಾಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 09/2015 ಕಲಂ 279, 337, 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಗಣೇಶ ಅಮೀನ್, ತಂದೆ:ರಾಜು ಮೊಗವೀರ, ವಾಸ:ಉಪ್ಲಾಡಿ ಬಡಾಬೆಟ್ಟು,ಬನ್ನಾಡಿ ಗ್ರಾಮ, ಉಡುಪಿ ಇವರು ದಿನಾಂಕ:11/01/2015 ರಂದು ಸಂಜೆ 7:15 ಗಂಟೆಗೆ ಬನ್ನಾಡಿ ಗ್ರಾಮದ ಉಪ್ಲಾಡಿ ರಮೇಶ ಶೆಟ್ಟಿಯವರ ಇಟ್ಟಿಗೆ ಕಾರ್ಖಾನೆ ಸಮೀಪ ನಿಂತು ಕೊಂಡಿರುವಾಗ ಶಂಕರ ಮರಕಾಲ ಎಂಬವರು ತನ್ನ ಬಾಬ್ತು ಕೆ.ಎ 20 ಸಿ 9762 ನೇ ನಂಬ್ರದ ಆಟೋ ರಿಕ್ಷಾವನ್ನು ಸ್ಯಾಬ್ರಕಟ್ಟೆ ಕಡೆಯಿಂದ ಕೋಟ ಹೈಸ್ಕೂಲ್ ಕಡೆಗೆ ಚಲಾಯಿಸಿ ಕೊಂಡು ಹೋಗುವಾಗ ಕೋಟ ಹೈಸ್ಕೂಲ್ ಕಡೆಯಿಂದ ಆರೋಪಿಯು ಬಿಳಿ ಬಣ್ಣದ ನಂಬ್ರ ಪ್ಲೇಟ್ ಅಳವಡಿಸದ ಬೊಲೇರೊ ವಾಹನವನ್ನು ಅತೀ ವೇಗ ಹಾಗೂ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಬಂದು ರಸ್ತೆಯ ತೀರ ಬಲಭಾಗಕ್ಕೆ ಚಲಾಯಿಸಿ ಕೆಎ 20 ಸಿ 9762 ನೇ ನಂಬ್ರದ ಆಟೋ ರಿಕ್ಷಾಕ್ಕೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಮಗುಚಿ ಬಿದ್ದು ಸದ್ರಿ ಆಟೋ ರಿಕ್ಷಾ ಚಾಲಕ ಶಂಕರ ಮರಕಾಲ ಎಂಬವರು ತೀವ್ರ ಸ್ವರೂಪದ ಗಾಯ ಗೊಂಡಿದ್ದು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ ಆಸ್ಪತ್ರೆಗೆ ಕೊಂಡು ಹೋದಲ್ಲಿ ಪರೀಕ್ಷಿಸಿದ ವೈದ್ಯರು ಶಂಕರ ಮರಕಾಲ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ, ಈ ಬಗ್ಗೆ ಗಣೇಶ್‌ ಅಮೀನ್‌ರವರು ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 05/2015 ಕಲಂ 279,304(ಎ) ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಕೋಟ : ದಿನಾಂಕ:11/01/2015 ರಂದು ಸಂಜೆ 5:45 ಗಂಟೆಗೆ ವೆಂಕಟರಮಣ ಸೂರ್ಯ, ತಂದೆ:ಸುಬ್ರಾಯ ಸೂರ್ಯ, ವಾಸ:ಬಿಂದು ನಿಲಯ ,ಶಾಂತಿ ನಗರ,6ನೇ ಅಡ್ಡ ರಸ್ತೆ,ಬಿರ್ತಿ,ವಾರಂಬಳ್ಳಿ ಗ್ರಾಮ ಇವರು ಕೆ.ಎ:20 ಇಸಿ:6893 ಬಜಾಜ್ ಮೋಟಾರ್ ಸೈಕಲ್‌ನಲ್ಲಿ ಸುಮನ ಅಡಿಗ ಎಂಬವರನ್ನು ಸಹಸವಾರನ್ನಾಗಿ ಕುಳ್ಳಿಸಿರಿ ಕೊಂಡು ಬನ್ನಾಡಿ ಗ್ರಾಮದ ಉಪ್ಲಾಡಿಗೆ ಬರುವರೇ ಬ್ರಹ್ಮಾವರದಿಂದ ಕೋಟ ಕಡೆಗೆ ಬರುವಾಗ ಸಾಲಿಗ್ರಾಮ ರಥಬೀದಿಯ ಸಮೀಪ ರಾ.ಹೆ.66 ಟಾರು ರಸ್ತೆಯಲ್ಲಿ  ತೀರಾ ಎಡಕ್ಕೆ ಮೋಟಾರ್ ಸೈಕಲ್‌ನ್ನು ಸವಾರಿ ಮಾಡಿಕೊಂಡು ಬರುವಾಗ ಉಡುಪಿ ಕಡೆಯಿಂದ ಕೋಟಾ ಕಡೆಗೆ ಆರೋಪಿಯು ಕೆ.ಎ:19 ಎಇ:8101 ನೇ ನಂಬ್ರದ ಟ್ಯಾಂಕರ್ ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ವೆಂಕಟರಮಣ ಸೂರ್ಯ ಇವರ ಬಾಬ್ತು ಕೆ.ಎ:20 ಇಸಿ:6893 ಮೋಟಾರ್ ಸೈಕಲ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸಮೇತ ಟಾರು ರಸ್ತೆಯ ಮೇಲೆ ಬಿದ್ದ ಪರಿಣಾಮ ವೆಂಕಟರಮಣ ಸೂರ್ಯರವರಿಗೆ  ಎಡಕಾಲಿನ ಹೆಬ್ಬೆರಳಿಗೆ ರಕ್ತಗಾಯ ಹಾಗೂ ಮೋಟಾರ್ ಸೈಕಲ್‌ನ ಸಹಸವಾರರಾದ ಸುಮನ ಅಡಿಗರು ರಾ.ಹೆ 66ರ ಪೂರ್ವ ಬದಿಯ ಟಾರು ರಸ್ತೆಯ ಮೇಲೆ ಬಿದ್ದ ಪರಿಣಾಮ ಟ್ಯಾಂಕರ್ ಲಾರಿ ತಾಗಿ ತೀವ್ರ ಸ್ವರೂಪದ ರಕ್ತಗಾಯಗೊಂಡು ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ 9:45 ಗಂಟೆಗೆ ಮೃತ ಪಟ್ಟಿರುತ್ತಾರೆ ಎಂದು ವೆಂಕಟರಮಣ ಸೂರ್ಯ ರವರು ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 06/2015 ಕಲಂ 279,337,304(ಎ) ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: