ಅಪಘಾತ ಪ್ರಕರಣಗಳು
- ಬ್ರಹ್ಮಾವರ:ದಿನಾಂಕ:10/01/2014 ರಂದು ಬೆಳಗ್ಗೆ 10:00 ಗಂಟೆಗೆ ಪಿರ್ಯಾದಿದಾರರಾದ ಮಹೇಶ್ (32) ತಂದೆ:ಸುಬ್ಬಣ್ಣ ದೇವಾಡಿಗ ವಾಸ:ಮಾತೃಶ್ರೀ ಪಡು ನೀಲಾವರ, ನೀಲಾವರ ಗ್ರಾಮ, ಉಡುಪಿ ತಾಲೂಕುರವರು ಸಾಲಿಗ್ರಾಮದಿಂದ ಬ್ರಹ್ಮಾವರ ಕಡೆಗೆ ಬೈಕ್‌ನಲ್ಲಿ ಬರುತ್ತಿರುವಾಗ ಉಡುಪಿ ತಾಲೂಕು ವಾರಂಬಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಧರ್ಮಾವರಂ ಅಡಿಟೋರಿಯಂ ಬಳಿ ಆರೋಪಿ ಸತೀಶ ಎಂಬವರು ಕೆಎ-05-ಹೆಚ್ಎಫ್-8758 ಮೋಟಾರು ಸೈಕಲನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮಹೇಶ್‌ರವರ ಬೈಕನ್ನು ಓವರ್ ಟೇಕ್ ಮಾಡಿ, ಎದುರಿನಿಂದ ಬರುತ್ತಿದ್ದ ವಾಹನವನ್ನು ನೋಡಿ ಒಮ್ಮೆಲೆ ಗಾಬರಿಗೊಂಡು ಬೈಕನ್ನು ಎಡಕ್ಕೆ ಚಲಾಯಿಸಿದ ಪರಿಣಾಮ ಬೈಕ್ ಮಗುಚಿ ಬಿದ್ದು ಬೈಕಿನ ಹಿಂಬದಿ ಕುಳಿದ್ದ ಸಹಸವಾರ ಪ್ರಕಾಶ್ ಎಂಬವರು ರಸ್ತೆಗೆ ಬಿದ್ದು ಅವರ ತಲೆ ಹಾಗೂ ಭುಜಕ್ಕೆ ತೀವೃತರದ ರಕ್ತಗಾಯವಾಗಿದ್ದಲ್ಲದೆ ಆರೋಪಿ ಬೈಕ್ ಸವಾರನಿಗೂ ಸಣ್ಣ ಪುಟ್ಟ ತರಚಿದ ಗಾಯವಾಗಿರುವುದಾಗಿದೆ. ಈ ಬಗ್ಗೆ ಮಹೇಶ್‌ರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 10/2015 ಕಲಂ:279,337,338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಶಿರ್ವಾ:ಪಿರ್ಯಾದಿದಾರರಾದ ರೇಮಂಡ್ ಈವನ್ ಡಿಸೋಜಾ (58) ತಂದೆ:ಜೇಕಬ್ ಡಿಸೋಜಾ, ವಾಸ:ಹೇನಿಯಲ್ ವಿದ್ಯಾಲೇಔಟ್,ನ್ಯಾರ್ಮ ಶಿರ್ವ ಗ್ರಾಮ, ಉಡುಪಿ ಜಿಲ್ಲೆರವರು ದಿನಾಂಕ:10/01/2015 ರಂದು ಸಂಜೆ 18:00 ಗಂಟೆಗೆ ಕೆಲಸ ಮುಗಿಸಿ ತನ್ನ ಮನೆಗೆ ಹೋಗುವರೇ ಶಿರ್ವ ಸಾರ್ವಜನಿಕ ರಸ್ತೆಯ ನೆಟಿವಿಟಿ ಕಾನ್ವೆಂಟ್ ಬಳಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ಹಿಂದಿನಿಂದ ಅಂದರೆ ಶಿರ್ವ ಕಡೆಯಿಂದ ಶಿರ್ವ ಮಸೀದಿ ಕಡೆಗೆ ಹೋಗುವ ಕೆಎ 20 ಇಸಿ 3627ನೇದರ ಮೋಟಾರ್ ಸೈಕಲ್ ಸವಾರ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರೇಮಂಡ್ ಈವನ್ ಡಿಸೋಜಾರಿಗೆ ಢಿಕ್ಕಿ ಹೊಡೆದು ರಸ್ತೆಗೆ ಬಿದ್ದ ಪರಿಣಾಮ ಬಲ ಭುಜ, ಸೊಂಟದ ಎಲುಬು ತೀವೃ ಜಖಂ, ಬಲಭಾಗದ ಭುಜದ ಬಳಿ ಜಖಂ, ಬಲಕಾಲಿನ ಪಾದದ ಬಳಿ ರಕ್ತ ಗಾಯಆಗಿರುತ್ತದೆ. ಈ ಘಟನಗೆ ಕೆಎ 20 ಇಸಿ 3627ನೇದರ ಮೋಟಾರ್ ಸೈಕಲ್ ಸವಾರನ ಅತೀವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಕಾರಣವಾಗಿದೆ. ಈ ಬಗ್ಗೆ ರೇಮಂಡ್ ಈವನ್ ಡಿಸೋಜಾರವರು ನೀಡಿದ ದೂರಿನಂತೆ ಶಿರ್ವಾ ಠಾಣಾ ಅಪರಾಧ ಕ್ರಮಾಂಕ 02/2015 ಕಲಂ:279,338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಹಿರಿಯಡ್ಕ:ದಿನಾಂಕ:10/01/15 ರಂದು ಸಂಜೆ 04:45 ಗಂಟೆಗೆ ಪಿರ್ಯಾದಿದಾರರಾದ ಕುಮಾರಿ ಸೌಮ್ಯ (20) ತಂದೆ:ಶಿವರಾಮ ಶೆಟ್ಟಿ, ಶಾರದಾ ಕೃಪಾ, ಚಿಮಿಣಿ ಬೆಟ್ಟು, 82 ಕುದಿ ಗ್ರಾಮರವರು ತನ್ನ ತಾಯಿಯ ಕೆಎ 20 W 996 ನೇ ಹೋಂಡಾ ಆಕ್ಟಿವಾ ಸ್ಕೂಟರ್‌ನಲ್ಲಿ ತನ್ನ ತಾಯಿ ಶ್ರೀಮತಿ ಪ್ರೇಮಾ ಶೆಟ್ಟಿ (54) ರವರನ್ನು ಹಿಂಬದಿ ಕುಳ್ಳಿರಿಸಿ ಹಿರಿಯಡ್ಕದಿಂದ ಓಂತಿಬೆಟ್ಟು ಕಡೆಗೆ ಹೋಗುವಾಗ ಅಂಜಾರು ಗ್ರಾಮದ ಅಂಜಾರು ರಿಂಗ್ ರೋಡ್‌ನಿಂದ ಸ್ವಲ್ಪ ಮುಂದೆ ಹೋಗುವಷ್ಟರಲ್ಲಿ, ಆರೋಪಿ ಚಾಲಕ ತಾನು ಚಲಾಯಿಸುತ್ತಿದ್ದ ಕೆಎ 20 ಡಿ 2929 ನೇ ರೇಶ್ಮಾ ಬಸ್ಸನ್ನು ಹಿಂದುಗಡೆ ಯಿಂದ ಅಂದರೆ ಕಾರ್ಕಳ ಕಡೆಯಿಂದ ಉಡುಪಿ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ ಬಂದು ಸ್ಕೂಟರನ್ನು ಓವರ್ ಟೇಕ್ ಮಾಡುವ ಭರದಲ್ಲಿ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಕುಮಾರಿ ಸೌಮ್ಯ ಹಾಗೂ ಹಿಂಬದಿ ಸವಾರರು ಇಬ್ಬರೂ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ರಕ್ತಗಾಯಗೊಂಡು ಮಣಿಪಾಲದ ಕಸ್ತೂರ್ ಬಾ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ.ಈ ಬಗ್ಗೆ ಕುಮಾರಿ ಸೌಮ್ಯರವರು ನೀಡಿದ ದೂರಿನಂತೆ ಹಿರಿಯಡ್ಕ ಠಾಣಾ ಅಪರಾಧ ಕ್ರಮಾಂಕ 02/2015 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment