Sunday, January 11, 2015

ಪತ್ರಿಕಾ ಪ್ರಕಟಣೆ





  • ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ, ಉಡುಪಿ ಜಿಲ್ಲಾಡಳಿತ ಹಾಗೂ ಸಾರಿಗೆ ಇಲಾಖೆ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹ-2015” ಅನ್ನು ದಿನಾಂಕ:11/01/2015 ರಿಂದ 17/01/2015 ರವರೆಗೆ ಹಮ್ಮಿಕೊಂಡಿದ್ದು, ಈ ಬಗ್ಗೆ ಉದ್ಘಾಟನಾ ಸಮಾರಂಭವನ್ನು, ಈ ದಿನ ದಿನಾಂಕ:11/01/2015 ರಂದು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ವಿನಯ ಕುಮಾರ್ ಸೊರಕೆರವರು ಬೆಳಿಗ್ಗೆ 10:00 ಗಂಟೆಗೆ ವಾಕತಾನ್‌ ಮೂಲಕ ಉದ್ಘಾಟಿಸಿದ್ದು, ಈ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರಾದ  ಶ್ರೀ ಪ್ರಮೋದ್‌ ಮದ್ವರಾಜ್‌ ಹಾಗೂ ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಶ್ರೀ ಕೆ.ಅಣ್ಣಾಮಲೈ. ಐಪಿಎಸ್‌, ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಶ್ರೀ ಸಂತೋಷ್‌ಕುಮಾರ್‌, ಪ್ರಾದೇಶಿಕ ಸಾರಿಗೆ ಅಯುಕ್ತರಾದ ಶ್ರೀ ಅರುಣ್‌ ಕುಮಾರ್‌ ಹಾಗೂ ಉಡುಪಿ ವೃತ್ತ ನಿರೀಕ್ಷಕರಾದ ಶ್ರೀ ಶ್ರೀಕಾಂತ್‌ರವರು ಪಾಲ್ಗೊಂಡಿದ್ದು, ಸದ್ರಿ ವಾಕತಾನ್‌ ಉಡುಪಿ ಬೋರ್ಡ್‌ ಹೈಸ್ಕೂಲ್‌ನಿಂದ ಪ್ರಾರಂಭಿಸಿ ಜೋಡುಕಟ್ಟೆಯಲ್ಲಿ ಮುಕ್ತಾಯಗೊಳಿಸಲಾಯಿತು. ನಂತರ 11:00 ಗಂಟೆಗೆ ಉಡುಪಿ ಜಿಲ್ಲಾ ಪೊಲೀಸ್‌ ಇಲಾಖೆ ಹಾಗೂ ಯುನೈಟೆಡ್‌ ರೈಡರ್ಸ್‌ ಉಡುಪಿ ವತಿಯಿಂದ ಮೋಟಾರು ಸೈಕಲ್‌ ರಾಲಿಯು ಉಡುಪಿ ಅಜ್ಜರಕಾಡಿನಿಂದ ಹೊರಟು ಬನ್ನಂಜೆ ಸಿಟಿ ಬಸ್‌ ನಿಲ್ದಾಣ ಮಾರ್ಗವಾಗಿ ಮಣಿಪಾಲದಿಂದ ವಾಪಾಸು ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕರ ಕಚೇರಿ ತಲುಪಿ ಮುಕ್ತಾಯಗೊಳಿಸಲಾಯಿತು.

No comments: