ಹುಡುಗ ಕಾಣೆ ಪ್ರಕರಣ
- ಕೋಟ: ಪಿರ್ಯಾದಿದಾರರಾದ ಚಂದ್ರಶೇಖರ ಐತಾಳ (49) ತಂದೆ ರಾಮಚಂದ್ರ ಐತಾಳ ವಾಸ ಬಿಜೂರು ಅಂಚೆ ಕುಂದಾಪುರ ತಾಲೂಕು ಎಂಬವರ ಅಳಿಯ ಕುಮಾರ ಸುಘೋಷ ಪ್ರಾಯ 10 ವರ್ಷ ಎಂಬಾತನು ದಿನಾಂಕ 10/01/2015 ರಂದು 4:30 ಗಂಟೆಗೆ ಉಡುಪಿ ತಾಲೂಕು ಬನ್ನಾಡಿ ಗ್ರಾಮದ ಉಪ್ಲಾಡಿ ಎಂಬಲ್ಲಿನ ತನ್ನ ಮನೆಯಿಂದ ಪಕ್ಕದ ಮನೆಯ ಹುಡುಗನೊಂದಿಗೆ ಆಟವಾಡಲು ಹೋದವನು ಈವರೆಗೂ ವಾಪಾಸು ಮನೆಗೆ ಬಾರದೆ ಕಾಣಿಯಾಗಿರುತ್ತಾನೆ ಎಂಬುದಾಗಿ ಚಂದ್ರಶೇಖರ ಐತಾಳ ರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 04/2015 ಕಲಂ: 363 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣಗಳು
- ಅಜೆಕಾರು: ಪಿರ್ಯಾದಿದಾರರಾದ ಸಂಜೀವ ದೇವಾಡಿಗ (42) ತಂದೆ: ರಾಜು ದೇವಾಡಿಗ ವಾಸ: ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಕೆರ್ವಾಶೆ ಗ್ರಾಮ ಕಾರ್ಕಳ ತಾಲೂಕು ಎಂಬವರ ತಂದೆ ರಾಜು ದೇವಾಡಿಗ (85) ಇವರಿಗೆ ಸುಮಾರು 5 ವರ್ಷಗಳ ಹಿಂದೆ ಮೂತ್ರನಾಳ ಬ್ಲಾಕ್ ಆಗಿ ಚಿಕಿತ್ಸೆ ಮಾಡಿ ಪೈಪು ಅಳವಡಿಸಿದ್ದು ಸದ್ರಿಯವರಿಗೆ ಮೂತ್ರ ವಿಸರ್ಜನೆ ಬಗ್ಗೆ ಸಮಸ್ಯೆ ಇದ್ದು ಅಲ್ಲದೆ ಟಿ.ಬಿ ಕಾಯಿಲೆ ಕೂಡಾ ಇದ್ದು ಅದಕ್ಕಾಗಿ ಮದ್ದು ಮಾಡಿಸುತ್ತಿದ್ದು ತನ್ನ ಕಾಯಿಲೆಯ ವಿಚಾರದಲ್ಲಿ ಮನನೊಂದು ದಿನಾಂಕ 10-01-2015 ರಂದು ಸಂಜೆ 3:30 ಗಂಟೆಯಿಂದ 7:00 ಗಂಟೆಯ ಮಧ್ಯೆ ಅವಧಿಯಲ್ಲಿ ಮನೆ ಬಳಿಯ ಅಂಬುಡಜಾಲು ಎಂಬಲ್ಲಿ ಹಳೆಯ ಬಾವಿಯೊಂದಕ್ಕೆ ಹಾರಿ ಆತ್ಮಹತ್ಯೆ ಮಾಡಿ ಮೃತಪಟ್ಟಿರುವುದಾಗಿದೆ ಎಂಬುದಾಗಿ ಸಂಜೀವ ದೇವಾಡಿಗ ರವರು ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 01/2015 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
- ಹೆಬ್ರಿ: ಜಗನ್ನಾಥ ಕುಲಾಲ (65) ವಾಸ: ಕೆಳಕಿಲ, ಮುದ್ರಾಡಿ ಗ್ರಾಮ, ಕಾರ್ಕಳ ತಾಲೂಕು ಎಂಬವರು ಹೆಂಡತಿ ಸತ್ತ ವಿಷಯವನ್ನು ಮನಸ್ಸಿಗೆ ಬಹಳವಾಗಿ ಹಚ್ಚಿಕೊಂಡು ಜೀವನದಲ್ಲಿ ಜಿಗುಷ್ಸೆಗೊಂಡು ಮನನೊಂದು ದಿನಾಂಕ: 10/01/15 ರಂದು ಸಂಜೆ 4:00 ಗಂಟೆಯಿಂದ ರಾತ್ರಿ 7:00 ಗಂಟೆಯ ಮದ್ಯಾವಧಿಯಲ್ಲಿ ಅವರ ಮನೆಯಾದ ಮುದ್ರಾಡಿಯ ಕೆಲಕಿಲ ಎಂಬಲ್ಲಿ ಮನೆಯ ಚಾವಡಿಯ ಮೇಲಿನ ಪಕ್ಕಾಸಿಗೆ ನೈಲಾನ್ ಹಗ್ಗವನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ಬಿಗಿದು ನೇಣು ಹಾಕಿ ಮೃತ ಪಟ್ಟಿರುವುದಾಗಿದೆ ಎಂಬುದಾಗಿ ರೋಹಿತ್ (30), ತಂದೆ: ಶೀನ ಹಾಂಡ ಹಾಲಿಬೆಟ್ಟು, ಹಲವಳ್ಳಿ ಗ್ರಾಮ, ಉಡುಪಿ ತಾಲೂಕು ರವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 03/2015 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
ಇತರ ಪ್ರಕರಣ
- ಕಾಪು: ದಿನಾಂಕ 09.01.2015 ರಂದು ಪಿರ್ಯಾದಿದಾರರಾದ ಮೊಂತು ಕೋಡ್ರಾಸ್ (45) ತಂದೆ: ದಿ. ಆಂತೋನಿ ಕೋಡ್ರಾಸ್ ವಾಸ: ಸಂಪಿಗೆ ನಗರ ಉದ್ಯಾವರ ಎಂಬವರ ಅಣ್ಣನಾದ ಡಾಲ್ಪಿ ಯಾನೆ ರುಡಾಲ್ಫ್ ಕೊಡ್ದ ಎಂಬವರನ್ನು ಬೆಳಿಗ್ಗೆ 10.00 ಗಂಟೆಗೆ ಆರೋಪಿ ಶರ್ಪುದ್ದೀನ್ ಎಂಬವರು ಯಾವುದೇ ಮುಂಜಾಗ್ರತೆ ತೆಗೆದುಕೊಳ್ಳದೇ ಬುಕ್ಕ ಎಂಬವರ ಜಾಗದಲ್ಲಿ ಇರುವ ತೆಂಗಿನ ಮರಕ್ಕೆ ಹತ್ತಿಸಿ ಟಿಲಿಪೋನ್ ಲೈನನ್ನು ಸರಿ ಮಾಡಿಸುತ್ತಿದ್ದ ವೇಳೆ ಡಾಲ್ಪಿ ಯಾನೆ ರುಡಾಲ್ಫ್ ಕೊಡ್ದ ರವರಿಗೆ ವಿದ್ಯುತ್ ಶಾಕ್ ತಗುಲಿ ತೆಂಗಿನ ಮರದಿಂದ ಕೆಳಗೆ ಬಿದ್ದು ಮೃತಪಟ್ಟಿರುವುದಾಗಿದೆ. ಇದಕ್ಕೆ ಶರ್ಪುದ್ದೀನ್ ರವರ ನಿರ್ಲಕ್ಷತನವೇ ಕಾರಣವಾಗಿರುತ್ತದೆ ಎಂಬುದಾಗಿ ಆರೋಪಿಸಿ ಮೊಂತು ಕೋಡ್ರಾಸ್ ರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 07/2015 ಕಲಂ: 304 (ಎ) ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment