ಅಪಘಾತ ಪ್ರಕರಣಗಳು
- ಬ್ರಹ್ಮಾವರ: ದಿನಾಂಕ 08/01/2015 ರಂದು ಬೆಳಿಗ್ಗೆ 07:30 ಗಂಟೆಗೆ ಉಡುಪಿ ತಾಲೂಕು ಉಪ್ಪೂರು ಗ್ರಾಮದ ಅಮ್ಮುಂಜೆ ಬಬ್ಬುಸ್ವಾಮಿ ದೇವಸ್ಥಾನದ ಬಳಿ ಅಪಾದಿತ ಉದಯ ಎಂಬವರು ಮೋಟಾರ್ ಸೈಕಲ್ ನಂಬ್ರ ಕೆಎ-20-ಇಫ್-7748 ನೇದರ ಹಿಂಬದಿಯಲ್ಲಿ ಸುರೇಶ್ ಎಂಬವರನ್ನು ಕುಳ್ಳಿರಿಸಿಕೊಂಡು ಅಮ್ಮುಂಜೆಯಿಂದ ಉಡುಪಿ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಮೋಟಾರ್ ಸೈಕಲ್ ಸ್ಕೀಡ್ ಆಗಿ ರಸ್ತಗೆ ಮಗುಚಿ ಬಿದ್ದು ಹಿಂಬದಿ ಕುಳಿತಿದ್ದ ಸುರೇಶ ರವರ ತಲೆಗೆ ಮತ್ತು ಎರಡು ಕಾಲುಗಳಿಗೆ ಗಾಯಗಳಾಗಿರುತ್ತದೆ ಎಂಬುದಾಗಿ ಕುಸುಮ (43) ಗಂಡ: ಸುರೇಶ ವಾಸ: ಅಮ್ಮುಂಜೆ ತೆಂಕಬೆಟ್ಟು ಅಂಚೆ, ಉಪ್ಪೂರು ಗ್ರಾಮ ಉಡುಪಿ ತಾಲೂಕು ರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 08/2015 ಕಲಂ: ಕಲಂ:279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
- ಕಾರ್ಕಳ: ದಿನಾಂಕ 10/01/2015 ರಂದು 13:45 ಗಂಟೆಗೆ ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಬೈಪಾಸು ರಸ್ತೆಯಿಂದ ಬಂಗ್ಲೆಗುಡ್ಡೆ ಕಡೆಗೆ ಬರುವ ರಾಜ್ಯ ಹೆದ್ದಾರಿಯಲ್ಲಿ ಫಿರ್ಯಾಧಿದಾರರಾದ ವಿಜಯ (25), ತಂದೆ ಮುತ್ತು ದೇವಾಡಿಗ, ವಾಸ: ಕೊಡ್ಲು ಮನೆ ಹಾಲಾಡಿ ಕುಂದಾಪುರ ತಾಲೂಕು ಎಂಬವರು ತನ್ನ KA 20 C 9951 ನೇ ನಂಬ್ರದ ಬಾಡಿಗೆ ಕಾರಿನಲ್ಲಿ ಚಂದ್ರಶೇಖರ ಶೆಟ್ಟಿಯವರೊಂದಿಗೆ ಪ್ರಯಾಣಿಸಿಕೊಂಡು ಬರುತ್ತಾ ಕಾಬೆಟ್ಟು ಬಳಿ ತಲುಪುವಾಗ ಮಂಜುನಾಥ ಪೈ ಕಾಲೇಜು ರಸ್ತೆ ಕಡೆಯಿಂದ ಬೈಪಾಸ್ ಕಡೆಗೆ KA 20 EG 5283 ನೇ ನಂಬ್ರದ ಮೋಟಾರ್ ಸೈಕಲ್ ನ್ನು ಅದರ ಸವಾರ ಜಗನ್ನಾಥ ಎಂಬಾತನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾಧಿದಾರರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಮೋಟಾರ್ ಸೈಕಲ್ ಸವಾರ ಕಾರಿನ ಮುಂದಿನ ಗ್ಲಾಸಿಗೆ ಬಿದ್ದು ಆತನ ತಲೆಗೆ ಸಾಮಾನ್ಯ ಸ್ವರೂಪದ ಗಾಯವಾಗಿರುತ್ತದೆ. ಗಾಯಾಳು ಮೋಟಾರ್ ಸೈಕಲ್ ಸವಾರ ಚಿಕಿತ್ಸೆ ಬಗ್ಗೆ ನಿಟ್ಟೆ ಗಾಜ್ರಿಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗಿದೆ ಎಂಬುದಾಗಿ ವಿಜಯ ರವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 06/2015 ಕಲಂ: ಕಲ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
- ಉಡುಪಿ: ಫಿರ್ಯಾದಿದಾರರಾದ ಕೃಷ್ಣ ನಾಯಕ್ (39) ತಂದೆ ತನಿಯ ನಾಯಕ್ ವಾಸ: ಸರಳೇ ಬೆಟ್ಟು ವಿಜಯನಗರ ಮಣಿಪಾಲ ಉಡುಪಿ ತಾಲೂಕು ರವರು ಉಡುಪಿ ಸಿಟಿ ಬಸ್ ನಿಲ್ದಾಣದ ಹತ್ತಿರ ಇರುವ ರಾಜ್ ಟವರ್ಸ್‌ನಲ್ಲಿರುವ ಅಗ್ರಿಗೋಲ್ಡ್ ಕನ್ಸ್ಟ್ರಕ್ಶನ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ದಿನಾಂಕ 21-03-2011 ರಂದು ತನ್ನ ಹೆಸರಿನಲ್ಲಿ ಮತ್ತು ತನ್ನ ತಂಗಿ ಅಶ್ವಿನಿ ಎಂಬವರ ಹೆಸರಿನಲ್ಲಿ ಹಣವನ್ನು ಹೂಡಿದ್ದು ದಿನಾಂಕ 16-05-2014 ರಂದು ಅವಧಿ ಮುಕ್ತಾಯಗೊಂಡರೂ ಹೂಡಿಕೆಯ ಹಣವನ್ನು ವಾಪಾಸು ನೀಡದೇ ಈ ಬಗ್ಗೆ ಉಡುಪಿಯ ನಿರ್ದೇಶಕರಾದ ಪ್ರಕಾಶ ದೇವಾಡಿಗ ಇವರನ್ನು ವಿಚಾರಿಸಿದಾಗ ಸರಿಯಾಗಿ ಮಾಹಿತಿಯನ್ನು ನೀಡಿರುವುದಿಲ್ಲ ಮತ್ತು ಅಗ್ರಿಗೋಲ್ಡ್ ಕನ್ಸ್ಟ್ರಕ್ಶನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯವರು ಮತ್ತು ಇದರ ಉಡುಪಿಯ ನಿರ್ದೇಶಕರಾದ ಪ್ರಕಾಶ ದೇವಾಡಿಗರವರು ಹೂಡಿಕೆಯ ಹಣವನ್ನು ವಾಪಾಸು ನೀಡದೇ ವಂಚನೆ ಮಾಡಿರುತ್ತಾರೆ ಎಂಬುದಾಗಿ ಕೃಷ್ಣ ನಾಯಕ್ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 06/2015 ಕಲಂ: ಕಲಂ 420 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment