ಅಪಘಾತ
ಪ್ರಕರಣ
- ಕುಂದಾಪುರ: ದಿನಾಂಕ 10/01/2015 ರಂದು ಸಮಯ ಸುಮಾರು ಬೆಳಿಗ್ಗೆ 9:10 ಗಂಟೆಗೆ ಕುಂದಾಪುರ ತಾಲೂಕು ಬಳ್ಕೂರು ಗ್ರಾಮದ ಬಳ್ಕೂರು ಶಾಲೆಯ ಬಳಿ ತೇಜು ದೇವಾಡಿಗರವರ ಅಂಗಡಿಯ ಹತ್ತಿರ ರಾಜ್ಯ ರಸ್ತೆಯಲ್ಲಿ ಆಪಾದಿತ ರಾಘವೇಂದ್ರ ಶೆಟ್ಟಿ ಎಂಬವರು KA20-EF-0871 ನೇ ಬೈಕ್ ನ್ನು ಕುಂದಾಪುರ ಕಡೆಯಿಂದ ಕಂಡ್ಲೂರು ಕಡೆಗೆ ಅತೀವೇಗ ಹಾಗೂ ಅಜಾಗರುಕತೆಯಿಂದ ಸವಾರಿ ಮಾಡಿಕೊಂಡು ಬಂದು ಅದೇ ದಿಕ್ಕಿನಲ್ಲಿ ಶಾಲೆಯ ಕಡೆಗೆ ಸೈಕಲ್ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಪ್ರಣೀತ್ ಎಂಬವನಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪ್ರಣೀತ್ ನು ರಸ್ತೆಗೆ ಬಿದ್ದು ಪ್ರಣೀತ್ ನ ಬಲಕಾಲಿನ ಗಂಟಿನ ಕೆಳಗೆ ಒಳನೋವು ಹಾಗೂ ಎಡಕಾಲಿಗೆ ಮತ್ತು ಎಡಕೈಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಕುಂದಾಪುರ ಸಂಚಾರ ಠಾಣೆಯಲ್ಲಿ ಅಪರಾಧ ಕ್ರಮಾಂಕ 04/2014 ಕಲಂ. 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ
ಮರಣ ಪ್ರಕರಣ
- ಬ್ರಹ್ಮಾವರ : ದಿನಾಂಕ: 09/01/2015 ರ ರಾತ್ರಿ 9:00 ಗಂಟೆಯಿಂದ ದಿನಾಂಕ: 10/01/2015 ರ ಬೆಳಿಗ್ಗೆ 06:45 ಗಂಟೆಯ ಮಧ್ಯ ಉಡುಪಿ ತಾಲೂಕು, ಉಪ್ಪೂರು ಗ್ರಾಮದ ಅಮ್ಮುಂಜೆ, ಸರಸ್ವತಿನಗರ ಎಂಬಲ್ಲಿರುವ ಶೀನ ಎಂಬವರು ಮನೆಯ ಮುಂದೆ ಇರುವ ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ 02/2015 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಮಣಿಪಾಲ: ರಾಘವೇಂದ್ರ(23) ಎಂಬವರು ಕೆಲವು ತಿಂಗಳಿಂದ ಮಾನಸಿಕ ಖಿನ್ನತೆಯಿಂದ ಮನೆಯಲ್ಲಿ ಮೌನವಾಗಿ ಇರುತ್ತಿದ್ದು, ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:10/01/2015 ರಂದು ಬೆಳಿಗ್ಗೆ ಮನೆಯಲ್ಲಿ ಯಾರೂ ಇಲ್ಲದ ಸಮಯ ಮರ್ಣೆ ಗ್ರಾಮದ ಕೊಜಪಾಡಿಯ ತನ್ನ ಮನೆಯ ಒಳಗಡೆ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ 02/2015 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment