ಅಪಘಾತ
ಪ್ರಕರಣ
- ಉಡುಪಿ: ದಿನಾಂಕ 07.01.2015 ರಂದು ಸಂಜೆ 6.30 ಗಂಟೆ ಸಮಯಕ್ಕೆ ಪಿರ್ಯಾದಿ ವಿಕ್ಟೋರಿಯಾ ಆನಂದಿ ಇವರು ತನ್ನ ಮಗಳಾದ ಡಯಾನರವರೊಂದಿಗೆ ಕಡಿಯಾಳಿಯ ನೇತ್ರಾ ಓಪ್ಟಿಕಲ್ಸ್‌ಗೆ ಹೋಗಿ ಕನ್ನಡಕ ಮಾಡುವರೇ ಕೊಟ್ಟು ವಾಪಾಸು ಹೋಗುವರೇ ನೇತ್ರಾ ಓಪ್ಟಿಕಲ್ಸ್ ಎದುರು ಗಡೆ ರಸ್ತೆಯ ಬದಿಯ ಮಣ್ಣು ರಸ್ತೆಯಲ್ಲಿ ನಿಂತು ಕೊಂಡಿರುವಾಗ ಕೆಎ 20 ಸಿ 7519 ನೇ ಟಾಟಾ ಏಸ್ ಟೆಂಪೋ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ತೀರ ಎಡ ಬದಿಗೆ ಬಂದು ರಸ್ತೆ ಬದಿ ನಿಂತು ಕೊಂಡಿದ್ದು ಪಿರ್ಯಾದಿ ಹಾಗು ಅವರ ಮಗಳಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ಪಿರ್ಯಾದಿಯ ಬಲ ಕಾಲಿಗೆ ತೀವ್ರ ಸ್ವರೂಪದ ಒಳ ಜಖಂ, ಎಡ ಕಾಲಿಗೆ ರಕ್ತ ಗಾಯವಾಗಿರುತ್ತದೆ. ಡಯಾನಳಿಗೆ ಸಣ್ಣ ಪುಟ್ಟ ಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಠಾಣೆಯಲ್ಲಿ ಅಪರಾಧ ಕ್ರಮಾಂಕ 03/2015 ಕಲಂ. 279, 337,338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ
ಮರಣ ಪ್ರಕರಣ
- ಕಾಪು: ದಿನಾಂಕ 9-01-2015 ರಂದು ಪಿರ್ಯಾದಿ ಮೊಂತು ಕೋಡ್ರಾಸ್ ಇವರು 3-00 ಗಂಟೆಗೆ ಮನೆಯಲ್ಲಿರುತ್ತಾ ಪಿರ್ಯಾದಿದಾರರ ಪರಿಚಯದ ಶಂಶುದ್ದೀನ ಹಾಗೂ ಪಿರ್ಯಾದಿದಾರರ ಅಣ್ಣ ಡಾಲ್ಫಿ ಪರಿಚಯದ ಜಲಜಾ ಎಂಬುವವರು ಪಿರ್ಯಾದಿದಾರರ ಮನೆಗೆ ಬಂದು ಡಾಲ್ಫಿ ಕೊಡ್ರಾಸ್ ಬುಕ್ಕಾ ಕಂಪೌಂಡ ಒಳಗೆ ಬಿದ್ದಿದು ಮೃತಪಟ್ಟಿರುವುದಾಗಿ ತಿಳಿಸಿದ ಮೇರೆಗೆ ಪಿರ್ಯಾದಿದಾರರು ಬುಕ್ಕಾ ಕಂಪೌಂಡಗೆ ಹೋಗಿ ನೋಡಲಾಗಿ ಮೃತ ದೇಹವು ಪಿರ್ಯಾದಿದಾರರ ಅಣ್ಣ ಡಾಲ್ಫಿ ಯದೇ ಆಗಿದ್ದು ದಿನಾಂಕ 09-01-2015 ರಂದು ಪಿರ್ಯಾದಿದಾರರ ತಾಯಿಯವರ ಪುಣ್ಯತಿಥಿ ಇದ್ದುದರಿಂದ ಬೆಳಿಗ್ಗೆಯಿಂದಲೇ ಪಿರ್ಯಾದಿದಾರರ ಅಣ್ಣ ಡಾಲ್ಫಿ ದುಖ: ವ್ಯಕ್ತ ಪಡಿಸುತ್ತಿದ್ದು ಸದ್ರಿ ವಿಷಯದಿಂದ ಗಾಸಿಕೊಂಡು ಬುಕ್ಕ ಕಂಪೌಂಡ ಮೇಲೆ ಕುಳಿತ್ತಿದ್ದಾಗ ಕಂಪೌಂಡ ಗೋಡೆ ಮೇಲಿಂದ ಅಕಸ್ಮಿಕವಾಗಿ ಜಾರಿ ಬಿದ್ದು ತಲೆಗೆ ಪೆಟ್ಟಾಗಿ ಮೃತಪಟ್ಟಿರುವುದಾಗಿರುತ್ತದೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ 02/2015 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಬ್ರಹ್ಮಾವರ: ತಾರಾ ಶೆಡ್ತಿ (78) ಇವರು ದಿನಾಂಕ: 04/01/2015 ರಂದು 21:00 ಗಂಟೆಗೆ ಊಟದ ಬಳಿಕ ಹಲ್ಲುಜ್ಜುವಾಗ ಆಕಸ್ಮಿಕವಾಗಿ ಇಲಿಪಾಷಾಣದ ಪೇಸ್ಟ್ ನ್ನು ಬ್ರಶ್ ಗೆ ಹಾಕಿ ಹಲ್ಲುಜ್ಜಿದ್ದು ಅದು ಹೊಟ್ಟೆಗೆ ಹೋಗಿ ವಾಂತಿಯಾಗಿ ಆಸ್ವಸ್ತಗೊಂಡವರನ್ನು ದಿನಾಂಕ 05/01/2015 ರಂದು ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ನಂತರ ದಿನಾಂಕ 07/01/15 ರಂದು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆಗೆ ಸ್ಪಂದಿಸದೆ ದಿನಾಂಕ 09/01/2015 ರಂದು 16:00 ಗಂಟೆಗೆ ಮೃತ ಪಟ್ಟಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ 01/2015 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment