ಮಟ್ಕಾ ದಾಳಿ ಪ್ರಕರಣ
- ಗಂಗೊಳ್ಳಿ: ದಿನಾಂಕ 09/01/2015 ರಂದು ಹಕ್ಲಾಡಿ ಗ್ರಾಮದ ಬಗ್ವಾಡಿ ಕ್ರಾಸ್ ಬಳಿ ಅಂತಯ್ಯ ಪೂಜಾರಿರವರ ಶೇಂದಿ ಅಂಗಡಿಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕ ಜುಗಾರಿ ನಡೆಯುತ್ತಿರುವುದಾಗಿ ಗಂಗೊಳ್ಳಿ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಸುಬ್ಬಣ್ಣ ಬಿ. ರವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಅವರು 15:00 ಗಂಟೆಗೆ ಸಿಬ್ಬಂದಿಯವರೊಂದಿಗೆ ಧಾಳಿ ನಡೆಸಿ ಆಪಾದಿತರಾದ ಅಂತಯ್ಯ ಪೂಜಾರಿ ತಂದೆ: ದಿ: ರಾಮ ಪೂಜಾರಿ ವಾಸ: ಹಟ್ಟಿ ಕುದ್ರು ದೊಡ್ಮನೆ ಬಸ್ರೂರು ಗ್ರಾಮ ಕುಂದಾಪುರ ತಾಲೂಕು ಮತ್ತು ಮಟ್ಕ ಜುಗಾರಿಯ ಹಣ ಲೈನ್ ಕಲೆಕ್ಷನ್ ಮಾಡುವ ನವೀನ ಬಿಲ್ಲವ ತಂದೆ: ವಾಸು ದೇವ ಬಿಲ್ಲವ ವಾಸ: ನಾಯಕವಾಡಿ ಗುಜ್ಜಾಡಿ ಗ್ರಾಮ ಎಂಬವರನ್ನು ದಸ್ತಗಿರಿ ಮಾಡಿ ಮಟ್ಕ ಜುಗಾರಿ ಆಟದಿಂದ ಸಂಗ್ರಹಿಸಿದ ನಗದು ಹಣ 5640/- ರೂಪಾಯಿ ಮತ್ತು ಮಟ್ಕಾ ಚೀಟಿ, ಬಾಲ್ ಪೆನ್ನು, KA 20 EG 8400 HONDA ಮೋಟಾರು ಸೈಕಲ್, ನೋಕಿಯೋ ಮೊಬೈಲ್ ಸೆಟ್-2 ನ್ನು ಸ್ವಾಧೀನಪಡಿಸಿಕೊಂಡು ಮಟ್ಕಾ ಬಿಡ್ಡರ್ ಮಂಜುನಾಥ ಭಂಢಾರಿ ತಂದೆ: ದಿ: ನಾರಾಯಾಣ ಭಂಡಾರಿ ವಾಸ: ಸನ್ನಿಧಿ, ತ್ರಾಸಿ, ಕುಂದಾಪುರ ತಾಲೂಕು ಮತ್ತು ಮೇಲಿನ ಆಪಾದಿತರ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 04/2015 ಕಲಂ 78(1)(111) ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿರುವುದಾಗಿದೆ
ಅಪಘಾತ ಪ್ರಕರಣ
- ಪಡುಬಿದ್ರಿ: ಪಿರ್ಯಾದಿದಾರರಾದ ಪಿ.ಎಸ್. ಲಕ್ಷ್ಮೀಶ 44 ವರ್ಷ, ತಂದೆ ಪಿ.ವಿ. ಸುಬ್ಬರಾವ್, ವಾಸ:-ಅಡ್ವೆ, ನಂದಿಕೂರು ಪೋಸ್ಟ್, ಉಡುಪಿ ತಾಲೂಕು ಮತ್ತು ಜಿಲ್ಲೆ ರವರು ನಂದಿಕೂರು ಗ್ರಾಮದ ಅಡ್ವೆ ನಿವಾಸಿಯಾಗಿದ್ದು, ಅವರ ಮನೆಯಲ್ಲಿ ದಯಾನಂದ ಎಂಬವರು ಕೂಡಾ ವಾಸ ಮಾಡಿಕೊಂಡಿದ್ದರು. ದಯಾನಂದ ರವರು ದಿನಾಂಕ 09/01/2015 ರಂದು ಬೆಳಿಗ್ಗೆ ಎಂದಿನಂತೆ ಅಡ್ವೆ ಪೇಟೆಗೆ ಹೋಗುವುದಾಗಿ ಹೇಳಿ ಹೋಗಿದ್ದರು. ಪಿರ್ಯಾದಿದಾರರು ಪಲಿಮಾರು ಮಠದಲ್ಲಿ ಅಧ್ಯಾಪಕರಾಗಿದ್ದು ದಿನಾಂಕ: 09.01.2015 ರಂದು ಬೆಳಿಗ್ಗೆ 8.00 ಗಂಟೆಗೆ ಪಲಿಮಾರು ಮಠಕ್ಕೆ ಹೋಗುವರೇ ಪಲಿಮಾರು ಕ್ರಾಸ್ ಬಳಿ ನಿಂತಿದ್ದಾಗ ಪಡುಬಿದ್ರಿ ಕಡೆಯಿಂದ ಕಾರ್ಕಳ ಕಡೆಗೆ ಒಂದು ವ್ಯಾನ್‌ನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಾಜ್ಯ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಬಂದು ಅಡ್ವೆ ಆನಂದಿ ಕಾಂಪ್ಲೆಕ್ಸ್ ಎದುರು ರಸ್ತೆ ಬದಿ ನಿಂತಿದ್ದ ಒಬ್ಬ ವ್ಯಕ್ತಿಗೆ ಡಿಕ್ಕಿ ಹೊಡೆದು ಮುಂದೆ ಹೋಗಿ ನಿಂತಿತು. ಕೂಡಲೇ ಪಿರ್ಯಾದಿದಾರರು ಹಾಗೂ ಅಲ್ಲಿದ್ದವರು ಹತ್ತಿರ ಹೋಗಿ ನೋಡಿದಾಗ ಆ ವ್ಯಕ್ತಿಯು ಪಿರ್ಯಾದಿದಾರರ ಮನೆಯಲ್ಲಿದ್ದ ದಯಾನಂದ ಆಗಿದ್ದು ಅವರನ್ನು ಕೂಡಲೇ ಪಿರ್ಯಾದಿದಾರರು ಒಂದು ಖಾಸಗಿ ವಾಹನದಲ್ಲಿ ಅವರ ಪರಿಚಯದ ಗೋಪಾಲರೊಂದಿಗೆ ಆಸ್ಪತ್ರೆಗೆ ಕಳುಹಿಸಿಕೊಟ್ಟು ಬಳಿಕ ಮಠಕ್ಕೆ ಹೋಗಿದ್ದು, ದಯಾನಂದರವರ ಮನೆಯವರಿಗೆ ವಿಷಯ ತಿಳಿಸಿರುತ್ತಾರೆ. ಆ ವೇಳೆಗೆ ದಯಾನಂದರವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುವುದಾಗಿ ಮಾಹಿತಿ ಬಂದಿರುತ್ತದೆ. ಈ ಅಪಘಾತಕ್ಕೆ ವ್ಯಾನ್ ನಂಬ್ರ ಕೆಎ 25 ಬಿ 5633 ನೇದರ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ ಎಂಬುದಾಗಿ ಪಿ.ಎಸ್. ಲಕ್ಷ್ಮೀಶ ರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 07/15 ಕಲಂ: ಕಲಂ: 279, 304 (ಎ) ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment