Friday, January 09, 2015

Daily Crime Reported As On 09/01/2015 At 17:00Hrs

ಇತರೇ ಪ್ರಕರಣ
  • ಉಡುಪಿ: ದಿನಾಂಕ 08/09-01-2015 ರಂದು ರೊಸಾರಿಯೋ  ಡಿ ಸೋಜಾ, ಸಹಾಯಕ  ಪೊಲೀಸ್ಉಪ ನಿರೀಕ್ಷಕರು, ಉಡುಪಿ ನಗರ ಪೊಲೀಸ್ಠಾಣೆ ಇವರು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿ ಇರುವಾಗ ಸುಮಾರು  03-35 ಗಂಟೆಗೆ  ಸೌತ್  ಶಾಲೆ ಹತ್ತಿರ  ಒಬ್ಬ ವ್ಯಕ್ತಿಯು ರಾತ್ರಿ ಸಮಯದಲ್ಲಿ  ತನ್ನ  ಇರುವಿಕೆಯನ್ನು ಮರೆಮಾಚಿಕೊಂಡು ಓಡಲು  ಪ್ರಯತ್ನಿಸಿದ್ದು  ಹಿಡಿದು ವಿಚಾರಿಸಿದಾಗ ಅವನು ಈ ಸಮಯದಲ್ಲಿ ಸದ್ರಿ ಸ್ತಳದಲ್ಲಿ ಇರುವಿಕೆಯ ಬಗ್ಗೆ ಸಮರ್ಪಕವಾದ ಉತ್ತರವನ್ನು ನೀಡದೇ ತಡವರಿಸಿಕೊಂಡಿದ್ದು ಆತನನ್ನು  ಕೂಲಂಕುಷವಾಗಿ ವಿಚಾರಿಸಿ ಆತನ ಹೆಸರು ವಿಳಾಸ ಕೇಳಿದಾಗ ಆತನು ತನ್ನ  ಹೆಸರು ಅಬ್ದುಲ್ ಜಾಹೀರ್ ಪ್ರಾಯ: 22 ವರ್ಷ ತಂದೆ: ಅಮೀರ ಅಹಮ್ಮದ್ ವಾಸ: ಸೋಡಾ ರಫಿಕ್ ಹೌಸ್ ಇಂದಿರಾ ನಗರ, ಶಿರ್ಸಿ-ಹುಬ್ಬಳ್ಳಿ ರಸ್ತೆ, ಶಿರ್ಸಿ, ಉತ್ತರ ಕನ್ನಡ ಜಿಲ್ಲೆ  ಎಂದು ತಿಳಿಸಿರುತ್ತಾನೆ. ಈತನು  ಯಾವುದೋ  ಬೇವಾರಂಟು ತಕ್ಷೀರು ಮಾಡುವ ಉದ್ದೇಶದಿಂದ  ತನ್ನ   ಇರುವಿಕೆಯನ್ನು ಮರೆಮಾಚಿಕೊಂಡು ಇರುವುದು ಧೃಢಪಟ್ಟಿದ್ದರಿಂದ ಉಡುಪಿ ನಗರ  ಠಾಣೆಯಲ್ಲಿ ಅಪರಾಧ ಕ್ರಮಾಂಕ 04/2015 ಕಲಂ: 109 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಹಿರಿಯಡ್ಕ: ಪ್ರಕಾಶ ನಾಯಕ್ (35) ಎಂಬವರು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಖಾಯಿಲೆ ಗುಣಮುಖವಾಗದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 08.01.2015 ರ ರಾತ್ರಿ 21.00 ಗಂಟೆಯಿಂದ ದಿನಾಂಕ 09.01.2015 ರ ಬೆಳಿಗ್ಗೆ 06.00 ಗಂಟೆಯ ನಡುವೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ  ಕ್ರಮಾಂಕ  02/2015 ಕಲಂ: 174  ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.  

No comments: