ಅಸ್ವಾಭಾವಿಕ ಮರಣ ಪ್ರಕರಣ
- ಉಡುಪಿ ನಗರ:ದಿನಾಂಕ:08/01/2015 ರಂದು ಪಿರ್ಯಾದಿದಾರರಾದ ಡಿ.ಬಾಲಕೃಷ್ಣ ಶೆಟ್ಟಿ (38) ತಂದೆ:ಸುಂದರ ಶೆಟ್ಟಿ ವಾಸ:ಗುಂಡಿಬೈಲು ಶಾಲೆಯ ಬಳಿ ಕುಂಜಿಬೆಟ್ಟು ದೊಡ್ಡಣಗುಡ್ಡೆ ಉಡುಪಿರವರು ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಐ.ಸಿ.ಯುನಲ್ಲಿ ಒಳ ರೋಗಿಯಾಗಿ ದಾಖಲಾಗಿ ಮೃತಪಟ್ಟ 60 ವರ್ಷ ವಯಸ್ಸಿನ ಅಪರಿಚಿತ ಗಂಡಸನ್ನು ನೋಡಿ, ಆತನ ಹೆಸರು ವಿಳಾಸ ಪತ್ತೆಯಾಗದೆ ಇರುವ ಬಗ್ಗೆ ವಿಚಾರಿಸಿದ್ದು, ಮೃತರು ದಿನಾಂಕ:08/01/2015 ರಂದು ಉಡುಪಿ ಭುಜಂಗ ಪಾರ್ಕ್‌ನ ಬಳಿ ಅಸ್ಪಸ್ಧಗೊಂಡು ಬಿದ್ದವರನ್ನು ಯಾರೋ ಒಬ್ಬರು ಬೆಳಿಗ್ಗೆ 11:15 ಗಂಟೆಗೆ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಿದ್ದು, ವೈದ್ಯರು ಪರೀಕ್ಷಿಸಿ ತೀವ್ರ ನಿಗಾ ಘಟಕಕ್ಕೆ ದಾಖಲಿಸಿರುತ್ತಾರೆ.ಸದ್ರಿಯವರು ಚಿಕಿತ್ಸೆಗೆ ಸ್ಪಂದಿಸದೇ ಮಧ್ಯಾಹ್ನ 1:10 ಗಂಟೆಗೆ ಮೃತಪಟ್ಟಿರುತ್ತಾರೆ. ಮೃತರು ಯಾವುದೋ ಖಾಯಿಲೆಯಿಂದ ಅಸ್ವಸ್ಧಗೊಂಡು ಬಳಲುತ್ತಿದ್ದು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುವುದಾಗಿದೆ ಎಂಬುದಾಗಿ ಡಿ.ಬಾಲಕೃಷ್ಣ ಶೆಟ್ಟಿರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 01/2015 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವಂಚನೆ ಪ್ರಕರಣ
- ಕೊಲ್ಲೂರು:ಪಿರ್ಯಾದಿದಾರರಾದ ಎನ್.ಎಮ್. ಅಬ್ದುಲ್ ಮಜೀದ್ (62) ತಂದೆ:ದಿವಂಗತ ಎನ್.ಎಮ್. ಮಹಮದ್ ಹಾಜಿ ವಾಸ: ಹಿದಾಯತ್ ರಬ್ಬರ್ ಎಸ್ಟೇಟ್ ಮುದೂರು ಗ್ರಾಮ ಕುಂದಾಪುರ ತಾಲೂಕು, ಉಡುಪಿ ಜಿಲ್ಲೆರವರು ಕುಂದಾಪುರ ತಾಲೂಕು ಮುದೂರು ಗ್ರಾಮದಲ್ಲಿ 110 ಎಕ್ರೆ ರಬ್ಬರ್ ಎಸ್ಟೇಟ್ ಹೊಂದಿರುತ್ತಾರೆ. ಸದ್ರಿ ಎಸ್ಟೇಟನ್ನು ಎಮ್.ಪಿ ವಿನ್ಸೆಂಟ್ ಎಂಬವರು ಜವಾಬ್ದಾರಿಯಿಂದ ನೋಡಿಕೊಳ್ಳುತ್ತಿದ್ದುದ್ದಾಗಿದೆ. ಸದ್ರಿ ಜಾಗದ ಅಳತೆಗಾಗಿ ಎನ್.ಎಮ್. ಅಬ್ದುಲ್ ಮಜೀದ್‌ರವರು ಆರೋಪಿ ಬ್ರೋಕರ್ ರಂಜಿತ್‌ನನ್ನು ನೇಮಿಸಿದ್ದು, ಆ ಸಮಯ ರಂಜಿತ್‌ನು ಅಳತೆಯ ಅಪ್ಲಿಕೇಷನ್‌ಗೆ ಎನ್.ಎಮ್. ಅಬ್ದುಲ್ ಮಜೀದ್ ಹಾಗೂ ಅವರ ತಾಯಿಯ ಭಾವಚಿತ್ರದ ಅಗತ್ಯತೆ ಇದೆ ಎಂದು ಹೇಳಿ ಅದನ್ನು ಅವರಿಂದ ಸುಳ್ಳು ಹೇಳಿ ಪಡೆದಿದ್ದು, ನಂತರ 2013 ನೇ ನವೆಂಬರ್ ತಿಂಗಳಲ್ಲಿ ಆರೋಪಿ ರಂಜಿತ್ ಮತ್ತು ಕೆ.ಕೆ ಮ್ಯಾಥ್ಯೂ (37) ತಂದೆ:ಕುರಿಯನ್ ವಾಸ: ಮುದೂರು ಗ್ರಾಮ ಕುಂದಾಪುರ ತಾಲೂಕು ಆರೋಪಿ ಸಿಜೋ ಥೋಮಸ್ (31) ತಂದೆ:ಥೋಮಸ್ ವಾಸ:ಹಲಿವಾಸ ಮುದೂರು ಗ್ರಾಮ ಕುಂದಾಪುರ ತಾಲೂಕುರವರ ಜತೆಗೂಡಿ ಒಂದು ಫೋರ್ಜರಿ ಜನರಲ್ ಆಫ್ ಅಟಾರ್ನಿ ತಯಾರು ಮಾಡಿ ಅದಕ್ಕೆ ಎನ್.ಎಮ್. ಅಬ್ದುಲ್ ಮಜೀದ್ ಹಾಗೂ ಅವರ ತಾಯಿಯ ಭಾವ ಚಿತ್ರ ಅಂಟಿಸಿ, ಆರೋಪಿ ಹೆಚ್. ಉದಯ ಕುಮಾರ್ ಶೆಟ್ಟಿ ನೋಟರಿ & ಅಡ್ವಕೇಟ್ ಕುಂದಾಪುರರವರಿಂದ ಧೃಡಿಕರಿಸಿ, ಅದರಲ್ಲಿ ಎನ್.ಎಮ್. ಅಬ್ದುಲ್ ಮಜೀದ್‌ರವರ ಏಜೆಂಟ್ ಆಗಿ ಆರೋಪಿ ಸಿಜೋ ಥೋಮಸ್ (31) ತಂದೆ:ಥೋಮಸ್ ವಾಸ:ಹಲಿವಾಸ ಮುದೂರು ಗ್ರಾಮ ಕುಂದಾಪುರ ತಾಲೂಕುರವರು ಅಪರಾದಿ ಕೃತ್ಯಗೈದಿದ್ದು, ಸದ್ರಿ ಫೋರ್ಜರಿ ದಾಖಲಾತಿಗೆ ಆರೋಪಿ ಎಮ್.ವಿ ರಂಜೀತ್ (44) ತಂದೆ:ಎಮ್.ಆರ್.ವಿ. ಪಿಲಾಲಿ ವಾಸ: ಮುದೂರು ಗ್ರಾಮ ಕುಂದಾಪುರ ತಾಲೂಕು ಮತ್ತು ಕೆ.ಕೆ ಮ್ಯಾಥ್ಯೂ (37) ತಂದೆ:ಕುರಿಯನ್ ವಾಸ:ಮುದೂರು ಗ್ರಾಮ ಕುಂದಾಪುರ ತಾಲೂಕುರವರು ಫೋರ್ಜರಿ ಮಾಡಿದ್ದಾಗಿದೆ. ನಂತರ ಡಿಸೆಂಬರ್ 2 ನೇ ತಾರೀಕಿನಲ್ಲಿ ಆರೋಪಿ ಸಿಜೋ ಥೋಮಸ್, ಎನ್.ಎಮ್. ಅಬ್ದುಲ್ ಮಜೀದ್‌ರವರ ಮುದೂರಿನ ಸರ್ವೆ ನಂಬ್ರ:26/74 ರ 4.15 ಎಕ್ರೆ ಜಾಗವನ್ನು ಸದ್ರಿ ಸುಳ್ಳು G.P.A ಉಪಯೋಗಿಸಿ ಶಂಕರನಾರಾಯಣ ರಿಜಿಸ್ಟ್ರೇಷನ್ ಕಛೇರಿಯಲ್ಲಿ ರಿಜಿಸ್ಟ್ರೇಷನ್ ಮಾಡಿಸಿದ್ದು, ಸದ್ರಿ ದಾಖಲಾತಿ 1439/2014/15 ರಲ್ಲಿ 28,00,000/- ರೂಪಾಯಿಗೆ ರಿಜಿಸ್ಟ್ರೇಷನ್ ಆಗಿದ್ದಾಗಿದೆ. ಆರೋಪಿ ಸಿಜೋ ಥೋಮಸ್ ಆರೋಪಿತ ಕೆ.ಕೆ ಮ್ಯಾಥ್ಯೂರವರ ಸಂಬಂಧಿಯಾಗಿದ್ದು, ಆತನೊಂದಿಗೆ 5-6 ತಿಂಗಳು ವಾಸವಿದ್ದನು. ಆ ಮಾರಾಟದ ದಾಖಲಾತಿಯಲ್ಲಿ ಆರೋಪಿ ರಂಜಿತ್ ಹಾಗೂ ಕೆ.ಕೆ. ಮ್ಯಾಥ್ಯೂರವರು ಸುಳ್ಳು ಸಾಕ್ಷಿ ಹಾಕಿದ್ದರು. ಅದೇ ದಿನ ಆರೋಪಿತ ಶ್ರೀಮತಿ ಕವಿತಾ (35) ಗಂಡ:ಎಮ್.ವಿ ರಂಜಿತ್ ವಾಸ:ಮುದೂರು ಗ್ರಾಮ, ಕುಂದಾಪುರ ತಾಲೂಕುರವರು 25,00,000/- ರೂಪಾಯಿ ಲೋನನ್ನು ಕುಂದಾಪುರ ಕರ್ನಾಟಕ ಬ್ಯಾಂಕಿನಿಂದ ಸದ್ರಿ ಜಾಗ ಖರೀದಿಗಾಗಿ ಸದ್ರಿ ಜಾಗದ ದಾಖಲಾತಿ ನೀಡಿ ಪಡೆದಿದ್ದಾಗಿದೆ. ಎನ್.ಎಮ್. ಅಬ್ದುಲ್ ಮಜೀದ್‌ರವರು ಕೇರಳ ನಿವಾಸಿಯಾಗಿದ್ದು, ಈ ವಿಚಾರ ಇವರಿಗೆ ಇತ್ತೀಚಿಗೆ ಜಡ್ಕಲ್ ಪಂಚಾತಿಗೆ ಹೋದಾಗ ಅವರ ಜವಾಬ್ದಾರಿ ಸೇವಕ ವಿನ್ಸೆಂಟ್‌ರವರಿಂದ ತಿಳಿದು ಬಂದಿರುತ್ತದೆ.ಈ ರೀತಿಯಾಗಿ ಆರೋಪಿತರುಗಳು ಎನ್.ಎಮ್. ಅಬ್ದುಲ್ ಮಜೀದ್‌ರವರ ಜಾಗದ ಬಗ್ಗೆ ಸುಳ್ಳು G.P.A ದಾಖಲಾತಿ ಸೃಷ್ಟಿಸಿ ಅದನ್ನು ನೈಜವಾದುದೆಂದು ಬಳಸಿ ಅದನ್ನು ಶಂಕರನಾರಾಯಣ ರಿಜಿಸ್ಟ್ರೇಷನ್ ಕಛೇರಿಯಲ್ಲಿ ರಿಜಿಸ್ಟ್ರೇಷನ್ ಮಾಡಿಸಿ ಸದ್ರಿ ಜಾಗವನ್ನು ಅವರೊಳಗೆ ಮಾರಾಟ ಮಾಡಿಕೊಂಡು ಸದ್ರಿ ಜಾಗದ ಸುಳ್ಳು ದಾಖಲಾತಿ ಕುಂದಾಪುರ ಕರ್ನಾಟಕ ಬ್ಯಾಂಕಿಗೆ ನೀಡಿ 25,00,000/- ರೂಪಾಯಿ ಲೋನ್ ಹಣ ಪಡೆದು ದುರುಪಯೋಗ ಮಾಡಿ ಮೋಸ ಮಾಡಿದ್ದಾಗಿದೆ.ಈ ಬಗ್ಗೆ ಎನ್.ಎಮ್. ಅಬ್ದುಲ್ ಮಜೀದ್‌ರವರು ನೀಡಿದ ದೂರಿನಂತೆ ಕೊಲ್ಲೂರು ಠಾಣಾ ಅಪರಾಧ ಕ್ರಮಾಂಕ 02/2015 ಕಲಂ:468, 471, 420 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment