ಅಪಘಾತ ಪ್ರಕರಣ
- ಅಮಾಸೆಬೈಲು: ಪಿರ್ಯಾದಿದಾರರಾದ ರಾಹೀಲ್ ಪ್ರಾಯ (21) ತಂದೆ ಸುಲೈಮಾನ್ ವಾಸ:ಸಂತೆಕಟ್ಟೆ ಸ್ಪಂದನ ಆಪಾರ್ಟ್ ಮೆಂಟ್ ಸಂತೆಕಟ್ಟೆ ಉಡುಪಿ ತಾಲೂಕು ರವರು ದಿನಾಂಕ 08/01/2015 ರಂದು ತಮ್ಮ KA 20 MA 0688 ನೇ ರಿಟ್ಸ್ ಕಾರನ್ನು ಚಲಾಯಿಸಿಕೊಂಡು ಸಿದ್ದಾಪುರದಿಂದ ಅಮಾಸೆಬೈಲು ಕಡೆಗೆ ಬರುತ್ತಿರುವಾಗ ಮಧ್ಯಾಹ್ನ 01:15 ಗಂಟೆ ಸಮಯಕ್ಕೆ ಮಚ್ಚಟ್ಟು ಕ್ರಾಸ್ ಜಂಕ್ಷನ್ ತಲುಪುವಾಗ ಎದುರುಗಡೆಯಿಂದ ಅಂದರೆ ಅಮಾಸೆಬೈಲು ಕಡೆಯಿಂದ ತೊಂಬಟ್ಟು ಕಡೆಗೆ ಹೋಗುವ ರಸ್ತೆಯಲ್ಲಿ KA 20 EF 3863 ನೇ ಬೈಕ್ ಸವಾರ ಸುಕುಮಾರ ಎಂಬಾತನು ತನ್ನ ಬೈಕನ್ನು ರಸ್ತೆಯ ತೀರಾ ಬಲಗಡೆ ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯದಿದಾರರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಹಾಗೂ ಸಹ ಸವಾರನು ರಸ್ತೆಗೆ ಬಿದ್ದಿದ್ದು ಇಬ್ಬರಿಗೂ ತರಚಿದ ಮತ್ತು ರಕ್ತಗಾಯಗಳಾಗಿರುತ್ತವೆ ಹಾಗೂ ಪಿರ್ಯಾದಿದಾರರ ಕಾರಿನ ಎದುರಿನ ಬಂಪರ್, ಹೆಡ್ ಲೈಟ್ ಹಾಗೂ ಇತರ ಭಾಗಗಳು ಜಖಂಗೊಂಡಿರುತ್ತವೆ ಎಂಬುದಾಗಿ ರಾಹೀಲ್ ರವರು ನೀಡಿದ ದೂರಿನಂತೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 01/2015 ಕಲಂ 279, 337, 338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.
ವಂಚನೆ ಪ್ರಕರಣ
- ಕುಂದಾಪುರ: ಪಿರ್ಯಾದುದಾರರಾದ ಉಮೇಶ್ ಪೂಜಾರಿ (32) ತಂದೆ: ಚಂದು ಪೂಜಾರಿ ವಾಸ: ಹೊಸಮನೆ, ಮುದ್ರಾಡಿ ಅಂಚೆ, ಬಲ್ಲಾಡಿ ಗ್ರಾಮ, ಕಾರ್ಕಳ ತಾಲೂಕು ಎಂಬವರ ಕೆಎ 19 ಎ 1405 ನೇ ಲಾರಿಯನ್ನು ಮೋಸ ಹಾಗೂ ಕಪಟತನದಿಂದ ಪಡೆದು ವಂಚಿಸುವ ಉದ್ದೇಶದಿಂದ ಆರೋಪಿತರಾದ ಮಹಮ್ಮದ್ ಹನೀಫ್, ಮಹಮ್ಮದ್ ಆಸೀಫ್, ಅಬ್ದುಲ್ ರಹಿಮಾನ್ ರವರು ಇತರ ಸಹಚರರೊಂದಿಗೆ ಸೇರಿಕೊಂಡು ದಿನಾಂಕ 05.02.2014 ರಂದು ಕುಂದಾಪುರದ ಬಸ್ರೂರು ಮೂರುಕೈ ಪೆಟ್ರೋಲ್ ಬಂಕ್ ಬಳಿ ರೂಪಾಯಿ 50,000/- ಮುಂಗಡ ಹಣ ನೀಡಿ ಲಾರಿಯನ್ನು ವಶಕ್ಕೆ ತೆಗೆದುಕೊಂಡು ದಿನಾಂಕ 07.02.2014 ರಂದು ಬಾಡಿಗೆ ಕರಾರು ಪತ್ರವನ್ನು ತಯಾರಿಸಿ ಬಳಿಕ ಬಾಡಿಗೆ ಹಣವನ್ನು ನೀಡದೆ ಲಾರಿಯನ್ನು ಹಿಂಡಿರುಗಿಸದೆ ಅಪ್ರಾಮಾಣಿಕತನದಿಂದ ದುರುಪಯೋಗಪಡಿಸಿಕೊಂಡಿರುವುದಾಗಿದೆ ಎಂಬುದಾಗಿ ಉಮೇಶ್ ಪೂಜಾರಿ ರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 04/2015 ಕಲಂ 417, 420 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment