Thursday, January 08, 2015

Daily Crime Reported As On 08/01/2015 At 17:00Hrs

ಸುಲಿಗೆ ಪ್ರಕರಣ
  • ಮಲ್ಪೆ: ಪಿರ್ಯಾದಿ ಶ್ರೀಮತಿ ಸುಶೀಲ ಇವರು ದಿನಾಂಕ 07/01/2015 ರಂದು ತಾಯಿಯೊಂದಿಗೆ ಮನೆಯಲ್ಲಿರುವಾಗ ರಾತ್ರಿ ಸುಮಾರು 10:30 ಗಂಟೆಗೆ ಯಾರೋ ಮುಸುಕು ಹಾಕಿದ ಒಬ್ಬ ವ್ಯಕ್ತಿ ಅಡುಗೆ ಮನೆಯ ಒಳಗಡೆ ಬಂದು ಪಿರ್ಯಾದಿದಾರರ  ಬಾಯಿಗೆ ಕೈಯಿಂದ ಮುಚ್ಚಿ ಪಿರ್ಯಾದಿದಾರರ  ಕುತ್ತಿಗೆಯಲ್ಲಿದ್ದ ಸುಮಾರು ಅರ್ಧ ಪಾವನ್ ಚಿನ್ನದ ಸರವನ್ನು ಎಳೆದು ಕೊಂಡು ಬೊಬ್ಬೆ ಹಾಕಬಾರದಾಗಿ  ಚೂರಿ ತೋರಿಸಿ ಬೆದರಿಕೆ ಹಾಕಿದ್ದಲ್ಲದೇ ಪಿರ್ಯಾದಿದಾರರ  ತಾಯಿ ಸಂಪರವರಿಗೆ ಮುಸುಕು ಹಾಕಿದ ಇನ್ನೊಬ್ಬ ವ್ಯಕ್ತಿ ಬಾಯಿಗೆ ಕೈ ಕಾಲುಗಳಿಗೆ ಬಟ್ಟೆ ಕಟ್ಟಿ ಹಾಕಿ ಹೋಗಿದ್ದು, ಪಿರ್ಯಾದಿದಾರರಿಂದ ಎಳೆದುಕೊಂಡು ಹೋದ  ಚಿನ್ನದ ಸರದ ಮೌಲ್ಯ ರೂಪಾಯಿ 8,000/- ಆಗಬಹುದು ಎಂಬಿತ್ಯಾದಿ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 07/15 ಕಲಂ 394 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. 
ಹಲ್ಲೆ ಪ್ರಕರಣ 
  • ಬ್ರಹ್ಮಾವರ: ದಿನಾಂಕ: 08/01/2015 ರಂದು ಬೆಳಿಗ್ಗೆ 07.30 ಗಂಟೆಗೆ ಉಡುಪಿ ತಾಲೂಕು ಉಪ್ಪೂರು ಗ್ರಾಮದ ಕೊಳಲಗಿರಿ ಹಳೆ ಅಂಚೆ ಕಛೇರಿಯ ಬಳಿ ಆರೋಪಿ ರವಿ @ ಶುಕ್ರ ಎಂಬವನು ಕೈಯಲ್ಲಿ ಚೂರಿಯನ್ನು ಹಿಡಿದುಕೊಂಡು ಪಿರ್ಯಾದಿ ಶ್ರೀನಿವಾಸ ಇವರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದದಿಂದ ಬೈದು ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುವುದಲ್ಲದೆ ಕೈಯಿಂದ ಹೊಡೆದಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಕ್ರಮಾಂಕ 07/2015 ಕಲಂ: 323,341, 504.506 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಮನುಷ್ಯ ಕಾಣೆ ಪ್ರಕರಣ
  • ಕಾರ್ಕಳ : ದಿಲೀಪ್  ಎಂಬವರು ದಿನಾಂಕ: 31/12/2014 ರಂದು ಬೆಳಿಗ್ಗೆ 8:00 ಗಂಟೆಯ ಸಮಯಕ್ಕೆ ಕಾರ್ಕಳ ತಾಲೂಕು ಸಾಣೂರು ಗ್ರಾಮದ ಮುರತ್ತಂಗಡಿ ಎಂಬಲ್ಲಿ ವಾಸ್ತವ್ಯದ ಮನೆಯಿಂದ ಉಡುಪಿ ನಗರಕ್ಕೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದು ಈವರೆಗೂ ಮನೆಗೂ ಬಾರದೇ  ಎಲ್ಲಿಯೋ ಕಾಣೆಯಾಗಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ  ಠಾಣೆಯಲ್ಲಿ ಅಪರಾಧ ಕ್ರಮಾಂಕ 05/2015 ಕಲಂ ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಕಳವು ಪ್ರಕರಣ
  • ಶಿರ್ವಾ: ಪಿರ್ಯಾದಿ ಶಂಕರ ಪಾನಾರ ಇವರು  ದಿನಾಂಕ: 07.01.2015 ರಂದು  ಸಮಯ 3:30 ಗಂಟೆಗೆ   ಮನೆಗೆ  ಬೀಗ  ಹಾಕಿ ಮೂಡುಬೆಳ್ಳೆ  ಚರ್ಚ್‌  ಸಾಂತ್‌ಮಾರಿ ಹಬ್ಬಕ್ಕೆ  ಹೋಗಿದ್ದು  ಹಬ್ಬ  ಮುಗಿಸಿ  ವಾಪಾಸು   6:00  ಗಂಟೆಗೆ  ಮನೆಗೆ  ಬಂದು  ನೋಡಿದಾಗ  ಮನೆಯಲ್ಲಿ  ವಸ್ತುಗಳು  ಚೆಲ್ಲಾಪಿಲ್ಲಿಯಾಗಿ  ಬಿದ್ದಿದ್ದುಲ್ಲದೆ  ಟಿವಿ ಇಡುವ  ಕಪಾಟಿನಲ್ಲಿ   ಇಟ್ಟಿದ್ದ   ರೂಪಾಯಿ 20,000/-  ಹಣ  ಇಲ್ಲದೇ  ಇದ್ದು  ಈ ಬಗ್ಗೆ  ಮನೆ  ಮಾಲೀಕರಾದ  ಎವುಜಿನ್‌  ಮೆನೆಜಸ್‌  ಇವರ  ಸೊಸೆ  ಕರ್ಮಿನಾ  ಮೆನೆಜಸ್‌  ಇವರಲ್ಲಿ  ವಿಷಯ  ತಿಳಿಸಿದಾಗ     ಬದಿ  ಮನೆಯ  ಗುರುಪ್ರಸಾದ್‌  ಎಂಬಾತನು  ಸ್ವಲ್ಪ  ಸಮಯದ  ಹಿಂದೆ  ಬೀಗದ  ಕೀ    ನಿಮ್ಮ  ರೂಮ್‌ಗೆ ಬಿದ್ದಿದೆ   ಕೀ  ತೆಗೆಯಲು  ಏಣಿ  ಬೇಕು  ಎಂದು  ಕೇಳಿ  ಏಣಿಯನ್ನು  ಕೊಂಡು  ಹೋಗಿರುತ್ತಾನೆ.  ಎಂಬುದಾಗಿ  ತಿಳಿಸಿದ್ದು  ತದ ನಂತರ  ಗುರುಪ್ರಸಾದ್‌  ಈತನಲ್ಲಿ  ವಿಚಾರಿಸುವರೇ  ಆತನು ಮನೆಯಲ್ಲಿ  ಇಲ್ಲದೇ  ಇದ್ದು  ಗುರು ಪ್ರಸಾದ್‌   ಈತನು  ಏಣಿಯ  ಸಹಾಯದಿಂದ  ಅಟ್ಟದಿಂದ  ಇಳಿದು   ಮನೆಯ  ಒಳಗೆ  ಪ್ರವೇಶಿಸಿ  ರೂಪಾಯಿ  20,000/- ಹಣ ವನ್ನು  ಕಳವು  ಮಾಡಿಕೊಂಡು  ಹೋಗಿರುತ್ತಾನೆ. ಈ ಬಗ್ಗೆ ಶಿರ್ವಾ ಠಾಣೆಯಲ್ಲಿ ಅಪರಾಧ ಕ್ರಮಾಂಕ 01/2015  ಕಲಂ 454, 380 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಜುಗಾರಿ ಪ್ರಕರಣ
  • ದಿನಾಂಕ 08/01/2015 ರಂದು ಮಧು ಟಿ.ಎಸ್‌, ಪೊಲೀಸ್‌ ಉಪ ನಿರೀಕ್ಷಕರು ಉಡುಪಿ ನಗರ ಠಾಣೆ ಉಡುಪಿ ಇವರಿಗೆ ಉಡುಪಿ ತಾಲೂಕು ಅಂಬಲಪಾಡಿ ಗ್ರಾಮದ ಆದಿಉಡುಪಿ ಅಂಬೇಡ್ಕರ್‌ ಸಭಾ ಭವನದ ಹೊರಗೆ ಅಂಗಳದಲ್ಲಿ ಐದು ಜನರು ಸೇರಿ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಸದ್ರಿ ಸ್ಥಳಕ್ಕೆ ದಾಳಿ ನಡೆಸಿ ಜುಗಾರಿ ಆಟ ಆಡುತ್ತಿದ್ದ 1) ನಿಂಗಪ್ಪ ಬಿದ್ದಳಪ್ಪ ಹವಳಿ (26), ತಂದೆ: ಬಿದ್ದಳಪ್ಪ ಹವಳಿ, ವಾಸ: ಹೊನ್ನೇವಾಡ, ಹಾವನೂರು ಗ್ರಾಮ, ಹಾವೇರಿ ತಾಲೂಕು ಮತ್ತು ಜಿಲ್ಲೆ 2) ಮಾಲತೇಶ್‌ (26), ತಂದೆ: ನಿಂಗಪ್ಪ ವಾಸ: ಹೊನ್ನತ್ತಿ ಗ್ರಾಮ ರಾಣೆಬೆನ್ನೂರು ತಾಲೂಕು ಹಾವೇರಿ ಜಿಲ್ಲೆ 3)ಗುಡ್ಡಪ್ಪ ಬಿದ್ದಳಪ್ಪ ಮಟ್ಟಿ (35), ತಂದೆ: ಬಿದ್ದಳಪ್ಪ ಮಟ್ಟಿ, ವಾಸ: ಗದ್ದಲ, ಹಾವನೂರು ಗ್ರಾಮ, ಹಾವೇರಿ ತಾಲೂಕು ಮತ್ತು ಜಿಲ್ಲೆ 4) ಕರಿಯಪ್ಪ ಹಿರೆಬಿದರಿ (27), ತಂದೆ: ಫಕೀರಪ್ಪ ಹಿರೆಬಿದರಿ, ವಾಸ: 3 ನೇ ವಾರ್ಡ್‌, ಬೇಲೂರು ಗ್ರಾಮ, ರಾಣೆಬೆನ್ನೂರು ತಾಲೂಕು, ಹಾವೇರಿ ಜಿಲ್ಲೆ 5) ರವಿ @ ಪ್ರಶಾಂತ್‌ (24), ತಂದೆ: ನಸಪ್ಪ, ವಾಸ: ಬಂಕವಳ್ಳಿ, ಸೊರಬ ತಾಲೂಕು, ಶಿವಮೊಗ್ಗ ಜಿಲ್ಲೆ ಇವ ರನ್ನು ವಶಕ್ಕೆ ಪಡೆದು ಆಟಕ್ಕೆ ಬಳಸಿದ ನಗದು 2,107/- 52 ಇಸ್ಪೀಟ್ ಎಲೆಗಳು, ಆಡಲು ಉಪಯೋಗಿಸಿದ ಪೇಪರ್ ಶೀಟ್‌ ಒಂದನ್ನು ಮಹಜರು ಮುಖೇನ ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 03/2015 ಕಲಂ 87 ಕೆಪಿ ಕಾಯಿದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

No comments: