ಹಲ್ಲೆ ಪ್ರಕರಣ
-
ಬೈಂದೂರು:ದಿನಾಂಕ:03/01/2015 ರಂದು ಬೆಳಿಗ್ಗೆ 08:30 ಗಂಟೆಗೆ ಪಿರ್ಯಾದಿದಾರರಾದ ನಾಗರಾಜ (40) ತಂದೆ:ರಾಮ ಮೊಗವೀರ, ವಾಸ:ಸೂರ್ಕುಂದ ಬೈರಿಮನೆ, ಬೈಂದೂರು ಗ್ರಾಮರವರು ಬೈಂದೂರು ಗ್ರಾಮದ ಸೂರ್ಕುಂದ ಎಂಬಲ್ಲಿರುವ ತನ್ನ ಮನೆಯ ತೋಟದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆರೋಪಿತರುಗಳಾದ 1)ಶಂಕರ 2)ವನಜ 3)ರಾಜೇಶ 4)ಮದೂಸುದನ್ 5)ಶಶಿದರ್ 6)ನಾಗರಾಜ್ 7)ಬಚ್ಚಮ್ಮ 8)ಲಕ್ಷ್ಮೀ 9)ಮೂಕಾಂಬು ಇವರುಗಳು ಅಕ್ರಮಕೂಟ ಸೇರಿಕೊಂಡು ನಾಗರಾಜರವರನ್ನು ಮುಂದಕ್ಕೆ ಹೋಗದಂತೆ ಅಡ್ಡಗಟ್ಟಿ “ನೀನು, ನಾವು ಹಾಕಿದ ಕೆಂಪುಕಲ್ಲುಗಳ ಬಗ್ಗೆ ಮಾತನಾಡಲು ನೀನು ಯಾರು? ಅದೇ ವಿಚಾರದಲ್ಲಿ ವಿನಾಕಾರಣ ತಕರಾರು ಮಾಡುತ್ತಿದ್ದೀಯಾ” ಎಂದು ಅವಾಚ್ಯ ಶಬ್ದಗಳಿಂದ ಬೈದು ಅವರುಗಳ ಪೈಕಿ ಆರೋಪಿ ಮದೂಸುದನ್‌ರವರು ತನ್ನ ಕೈಯಲ್ಲಿದ್ದ ಮರದ ಸೋಂಟೆಯಿಂದ ನಾಗರಾಜರವರ ಎದೆಯ ಎಡಬದಿಯ ಪಕ್ಕೆಲುಬಿಗೆ ಗುದ್ದಿ, ಬಲಕಾಲಿಗೆ ಹೊಡೆದು, ಆರೋಪಿ ರಾಜೇಶ ಹಾಗೂ ಶಶಿಧರ್ ನಾಗರಾಜರವರಿಗೆ ಬೈದು, ಕೈಗಳಿಂದ ಕೆನ್ನೆಗೆ ಹಾಗೂ ಎದೆಗೆ ಹೊಡದು ಜೀವ ಬೆದರಿಕೆ ಹಾಕಿದ್ದು, ಆಗ ನಾಗರಾಜ್‌ರವರು ನೆಲಕ್ಕೆ ಬಿದ್ದಿದ್ದು ಆಗ ಉಳಿದ ಆರೋಪಿತರು ನಾಗರಾಜರವರಿಗೆ ತುಳಿದಿದ್ದು ಇದರಿಂದ ನಾಗರಾಜರವರ ಎಡ ಕಿಬ್ಬೊಟ್ಟೆ ಹಾಗೂ ಬಲಕಾಲಿಗೆ ಗುದ್ದಿದ ನೋವುಂಟಾಗಿದ್ದು, ಆಗ ನಾಗರಾಜರವರು ಕೂಗಿಕೊಂಡಾಗ ನಾಗರಾಜರವರ ಪಕ್ಕದ ಮನೆಯವರಾದ ಹೆರಿಯಣ್ಣ ಹಾಗೂ ನಿತ್ಯಾನಂದರವರು ಅಲ್ಲಿಗೆ ಓಡಿ ಬಂದಾಗ ಆರೋಪಿತರು ಅಲ್ಲಿಂದ ಓಡಿ ಹೋಗಿರುತ್ತಾರೆ. ನಾಗರಾಜರವರ ಮನೆಯ ಹತ್ತಿರದ ಸಾರ್ವಜನಿಕ ರಸ್ತೆಗೆ ಆರೋಪಿತರು ಕೆಂಪುಕ್ಲಲುಗಳನ್ನು ಅಡ್ಡವಾಗಿ ಕೂಡಿಟ್ಟಿದ್ದು, ಇದಕ್ಕೆ ನಾಗರಾಜರವರು ಆಕ್ಷೇಪಿಸಿರುವುದರಿಂದ ಆರೋಪಿತರು ಈ ಕೃತ್ಯ ಎಸಗಿರುವುದಾಗಿದೆ.ಈ ಬಗ್ಗೆ ನಾಗರಾಜರವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 02/2015 ಕಲಂ:143,147,148, 341, 504, 324, 323, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment