ಅಪಘಾತ ಪ್ರಕರಣ
- ಉಡುಪಿ: ಪಿರ್ಯಾದುದಾರರಾದ ಡಾ. ವಿನೀತ್ ಜಾರ್ಜ್ (29) ತಂದೆ ಡಾ. ಡಿ ಜಾರ್ಜ್ ವಾಸ ಐಶ್ವರ್ಯ ಎಸ್.ಡಿ.ಎಮ್ ಕಾಲೇಜ್ ಹತ್ತಿರ ಉದ್ಯಾವರ ಉಡುಪಿ ಇವರು ದಿನಾಂಕ 03/01/2015ರಂದು ರಾತ್ರಿ ಸಮಯ 09:00 ಗಂಟೆಗೆ ತಮ್ಮ ಬಾಬ್ತು ಕಾರ್ ನಂಬ್ರ ಕೆಎಲ್ 13ವಿ 9341ನೇದರಲ್ಲಿ ಉಡುಪಿಯಿಂದ ಕಿನ್ನಿಮುಲ್ಕಿ ಒಳರಸ್ತೆಯಲ್ಲಿ ಬಲಾಯಿಪಾದೆ ಕಡೆಗೆ ಹೋಗುತ್ತಿರುವಾಗ ಗ್ಯಾಸ್ ಗೋಡೌನ್ ಬಳಿ ತಲುಪುವಾಗ ಪಿರ್ಯಾದುದಾರರ ಎದುರಿನಿಂದ ಅಂದರೆ ಬಲಾಯಿಪಾದೆ ಕಡೆಯಿಂದ ಟೊಯೋಟಾ ಇಟಿಯೋಸ್ ಕಾರ್ ನಂಬ್ರ ಕೆಎ 20ಪಿ 9787ನೇದನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ಪಿರ್ಯಾದುದಾರರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರ ಹಣೆಗೆ ರಕ್ತಗಾಯವಾಗಿದ್ದು, ಕಾರು ಜಖಂಗೊಂಡಿರುತ್ತದೆ. ನಂತರ ಪಿರ್ಯಾದುದಾರರು ಅವರ ಮಿತ್ರ ಟೋನಿಯವರ ಸಹಾಯದಿಂದ ಉಡುಪಿ ಆದರ್ಶ ಆಸ್ಪತ್ರೆಗೆ ಹೋಗಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುವುದಾಗಿದೆ. ಸದ್ರಿ ಅಪಘಾತಕ್ಕೆ ಟೊಯೋಟಾ ಇಟಿಯೋಸ್ ಕಾರ್ ನಂಬ್ರ ಕೆಎ 20ಪಿ 9787ನೇದರ ಚಾಲಕನ ಅತೀವೇಗ ಹಾಗೂ ನಿರ್ಲಕ್ಷ್ಯತನದ ಚಾಲನೆಯೇ ಕಾರಣವಾಗಿದ್ದು ಡಾ. ವಿನೀತ್ ಜಾರ್ಜ್ ಇವರು ನೀಡಿದ ದೂರಿನಂತೆ ಉಡುಪಿ ಸಂಚಾರ ಠಾಣಾ ಅಪರಾಧ ಕ್ರಮಾಂಕ 01/2015 ಕಲಂ 279, 337 ಐ.ಪಿ.ಸಿ ಕಾಯ್ದೆ ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
No comments:
Post a Comment