ಅಪಘಾತ ಪ್ರಕರಣಗಳು
- ಕಾಪು: ದಿನಾಂಕ 04-01-2015 ರಂದು ಮಧ್ಯಾಹ್ನ 12:00 ಗಂಟೆಗೆ ಪಿರ್ಯಾದಿದಾರರಾದ ಎಂ ಇರ್ಫಾನ್ ತಂದೆ: ಸಬೀರ್ ಅಬ್ಬಾಸ್ ವಾಸ: ಆರೂರು ತೋಟ ಸಂಪಿಗೆ ನಗರ ಉದ್ಯಾವರ ಗ್ರಾಮ ಎಂಬವರು ಕಾಪು ಕಡೆಯಿಂದ ಉದ್ಯಾವರ ಕಡೆಗೆ ರಾ.ಹೆ. 66 ರಲ್ಲಿ ತಮ್ಮ ಕಾರ್ ನಂಬ್ರ ಕೆ.ಎ. 20 ಎನ್ 2304 ರನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಉಳಿಯಾರಗೋಳಿ ಗ್ರಾಮದ ಪ್ರಂಡ್ಸ್ ಕ್ಲಬ್ ಕಟ್ಟಡ ಹತ್ತಿರ ತಲುಪುವಷ್ಟರಲ್ಲಿ ಹಿಂಬದಿಯಿಂದ ಬಂದ ಬುಲೆಟ್ ನಂಬ್ರ ಕೆ.ಎ. 20 ಇಜಿ 3519 ನೇದರ ಸವಾರನು ತನ್ನ ಬುಲೆಟ್‌ನ್ನು ಅಡ್ಡಾದಿಡ್ಡಿಯಾಗಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಕಾರಿನ ಹಿಂಬದಿ ಗ್ಲಾಸ್ ಪುಡಿಯಾಗಿರುತ್ತದೆ, ಕಾರ್‌ನ ಎಡ ಬದಿ ಬಾಡಿ ಜಖಂಗೊಂಡಿರುತ್ತದೆ ಎಂಬುದಾಗಿ ಎಂ ಇರ್ಫಾನ್ ರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 03/2015 ಕಲಂ 279 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.
- ಕೋಟ: ದಿನಾಂಕ 02/01/2015 ರಂದು ಬೆಳಿಗ್ಗೆ 07:15 ಗಂಟೆಗೆ ಪಿರ್ಯಾದಿದಾರರಾದ ಗೋಪಾಲ ನಾಯಕ್ ಎನ್.ಆರ್ (88) ತಂದೆ:ದಿ.ರಾಮಪ್ಪ ನಾಯಕ್, ವಾಸ ಮಲಿಕಾರ್ಜುನ ಬೀದಿ, ಶೃಂಗೇರಿ, ಉಡುಪಿ ತಾಲೂಕು ರವರು ನಂಚಾರು ಗ್ರಾಮದ ತನ್ನ ಅಣ್ಣನ ಮನೆಯಿಂದ ತನ್ನ ಅಣ್ಣನ ಮೊಮ್ಮಗನಾದ ಆರೋಪಿ ತಿಲಕ್‌ನ ಮೋಟಾರ್ ಸೈಕಲ್ ನಂಬ್ರ ಕೆ.ಎ 20 ಹೆಚ್6665 ನೇ ದರಲ್ಲಿ ಸಹಸವಾರನಾಗಿ ಕುಳಿತು ಕೊಂಡು ಆವರ್ಸೆಗೆ ಕಡೆಗೆ ಹೋಗುವಾಗ ನಂಚಾರು ಗ್ರಾಮದ ಅಂಗನವಾಡಿ ಸಮೀಪ ಕಡಿದಾದ ತಿರುವಿನಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಏಕಾಎಕಿ ಬ್ರೇಕ್ ಹಾಕಿದ ಪರಿಣಾಮ ಮೋಟಾರ್ ಸೈಕಲ್ ಸ್ಕೀಡ್ ಆಗಿ ಮೋಟಾರ್ ಸೈಕಲ್‌ನ ಹಿಂದಿನ ಚಕ್ರಕ್ಕೆ ಪಿರ್ಯಾಧಿದಾರರ ಬಲಕಾಲು ಸಿಕ್ಕಿಕೊಂಡು ಮೋಟಾರ್ ಸೈಕಲ್ ಸಮೇತ ಟಾರು ರಸ್ತೆಯ ಮೇಲೆ ಬಿದ್ದು ಮೂಳೆ ಮುರಿತದ ರಕ್ತಗಾಯವಾಗಿ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೋಗಿ ಬಳಿಕ ವೈದ್ಯರ ಸಲಹೆಯ ಮೆರೆಗೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬುದಾಗಿ ಗೋಪಾಲ ನಾಯಕ್ ರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 01/2015 ಕಲಂ 279, 338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment