Monday, January 05, 2015

Daily Crime Reported As On 05/01/2015 At 07:00Hrs

ಅಪಘಾತ ಪ್ರಕರಣಗಳು
  • ಕಾರ್ಕಳ: ಪಿರ್ಯಾದಿದಾರರಾದ ರಾಜ (22) ತಂದೆ ವೆಂಕಟೇಶ್, ವಾಸ ಇಂದಾರು 5 ಸೆಂಟ್ಸ್. ಬೆಳ್ಮಣ್ ಗ್ರಾಮ ಕಾರ್ಕಳ ತಾಲೂಕು ಇವರು ದಿನಾಂಕ 03/01/2015 ರಂದು ರಾತ್ರಿ ಸುಮಾರು 20:15 ಗಂಟೆಗೆ ತನ್ನ ಬಾಬ್ತು ಕೆಎ 20W 8522ನೇ ನಂಬ್ರದ ಮೋಟಾರು ಸೈಕಲಿನಲ್ಲಿ ಕೆಲಸ ಮುಗಿಸಿ ಬೆಳ್ಮಣ್ ನಿಂದ ನಿಟ್ಟೆ ಕಡೆಗೆ ಬರುತ್ತಿರುವಾಗ ನಿಟ್ಟೆ ಜಂಕ್ಷನ್ ಬಳಿ ತನ್ನ ಎದುರುಗಡೆಯಿಂದ ಹೋಗುತ್ತಿದ್ದ ಕೆಎ 51ಬಿ 3141ನಂಬ್ರದ ಬಸ್ ಚಾಲಕನು ಯಾವುದೇ ಮುನ್ಸೂಚನೆ ನೀಡದೇ ಏಕಾ ಏಕಿ ರಸ್ತೆ ಮದ್ಯೆ ಬಸ್ಸನ್ನು ಒಮ್ಮೆಲೆ ಬ್ರೇಕ್ ಹಾಕಿ ನಿಲ್ಲಿಸಿದರಿಂದ ಪಿರ್ಯಾದಿದಾರರು ಬಸ್ಸಿನ ಹಿಂಬಂದಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಕಾಲಿಗೆ, ತಲೆಗೆ ಮತ್ತು ಭುಜಕ್ಕೆ ಗುದ್ದಿದ ಒಳ ಜಖಂ ಹಾಗೂ ಎಡ ಕಾಲಿಗೆ ತೀರ್ವ ಗಾಯವಾಗಿದ್ದು ಈ ಅಪಘಾತಕ್ಕೆ ಬಸ್ಸಿನ ಚಾಲಕನ ಅತೀ ವೇಗದ ಚಾಲನೆ ಹಾಗೂ ನಿರ್ಲಕ್ಷತನ ಕಾರಣವಾಗಿರುತ್ತದೆ. ಎಂಬುದಾಗಿ ರಾಜ ಇವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 02/2014 ಕಲಂ 279, 338  ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
  • ಕಾರ್ಕಳ: ದಿನಾಂಕ 04/01/2015 ರಂದು ಮದ್ಯಾಹ್ನ 2:00 ಗಂಟೆಗೆ ಕಾರ್ಕಳ ತಾಲೂಕು ಮುಡಾರು ಗ್ರಾಮದ ಬಜಗೋಳಿ ಕೂಷ್ಮಾಂಡಿನಿ ಪೆಟ್ರೋಲ್ ಬಂಕ್ ಎದುರು ರಸ್ತೆಯಲ್ಲಿ ಬಜಗೋಳಿ ಕಡೆಯಿಂದ ಕಾರ್ಕಳ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿದ್ದ ಕೆಎ 19ಇಜೆ 6339ನೇ ನಂಬ್ರದ ಸುಜುಕಿ ಆ್ಯಕ್ಸಸ್ ದ್ವಿಚಕ್ರ ವಾಹನ ಸವಾರನು ತನ್ನ ವಾಹನವನ್ನು ಪೆಟ್ರೋಲ್ ಬಂಕ್ ಎದುರುಗಡೆ ಬಲಗಡೆ ತಿರುಗಿಸಲು ಸನ್ನ ಮಾಡಿ ಬಲಕ್ಕೆ ತಿರುಗಿಸುತ್ತಿದ್ದಂತೆ ಬಜಗೋಳಿ ಕಡೆಯಿಂದ ಸದ್ರಿ ವಾಹನದ ಹಿಂದಿನಿಂದ ಬಂದ ಕೆಎ 20ಇಸಿ 422ನೇ ನಂಬ್ರದ ಮೋಟಾರ್ ಸೈಕಲ್ ಸವಾರನು ಆತನ ಮೋಟಾರ್ ಸೈಕಲ್‌ನ್ನು ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿ ಕೆಎ 19ಇಜೆ 6339 ನೇ ನಂಬ್ರದ ಸುಜುಕಿ ಆ್ಯಕ್ಸಸ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 2 ದ್ವಿಚಕ್ರ ವಾಹನಗಳು ಸವಾರ ಮತ್ತು ಸಹಾ ಸವಾರರ ಸಮೇತ ರಸ್ತೆಗೆ ಬಿದ್ದಿದ್ದು ಇದರ ಪರಿಣಾಮ ತೀವೃ ಗಾಯಗೊಂಡ ಸುಜುಕಿ ಆ್ಯಕ್ಸಸ್ ವಾಹನದ ಸವಾರ ನಾರಾಯಣ ಮಲೆಕುಡಿಯಾರವರನ್ನು ಚಿಕಿತ್ಸೆ ಬಗ್ಗೆ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಸಮಯದಲ್ಲಿ ದಾರಿ ಮದ್ಯೆ ಮೃತ ಪಟ್ಟಿರುವುದಾಗಿದೆ. ಅಫಘಾತವೆಸಗಿದ ಕೆ.ಎ 20 ಇ ಸಿ 422 ನೇ ನಂಬ್ರದ ಮೋಟಾರ್ ಸೈಕಲ್ ಸವಾರ ಚಂದ್ರಕಾಂತ ಮತ್ತು ಅದರಲ್ಲಿ ಪ್ರಯಾಣಿಸುತ್ತಿದ್ದ ಸಹಾ ಸವಾರನಿಗೆ ಕೂಡಾ ಜಖಂ ಆಗಿರುವುದಾಗಿದೆ ಎಂಬುದಾಗಿದೆ ಎಂಬುದಾಗಿ ಪುಟ್ಟಣ್ಣ (37) ತಂದೆ ಶಿವಪ್ಪ ಮಲೆಕುಡಿಯಾ, ವಾಸ ಮಾತೃ ಶ್ರೀ ನಿಲಯ, ನಲ್ಲೂರು ಗ್ರಾಮ, ಕಾರ್ಕಳ ತಾಲೂಕು ಇವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 03/2014 ಕಲಂ: 279, 337, 304(ಎ) ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ. 
  • ಬೈಂದೂರು: ದಿನಾಂಕ 02/01/2015ರಂದು ಸಂಜೆ 7:45 ಗಂಟೆ ವೇಳೆಗೆ ಕುಂದಾಪುರ ತಾಲೂಕು ಹೇರೂರು ಗ್ರಾಮದ  ಅರೆಹೊಳೆ ಗಾರ್ಡರ್ ಶೆಡ್ ಎಂಬಲ್ಲಿ ಪಿರ್ಯಾದಿದಾರರಾದ ಶಿವರಾಮ ಮೊಗವೀರ (55) ತಂದೆ ಮಾಚ ಮೊಗವೀರ ವಾಸ: ಆಕಳಬೈಲು ಕಾಲೂನಿ ಅರೆಹೊಳೆ ಕಿರಿಮಂಜೆಶ್ವರ ಗ್ರಾಮ ಇವರು ತನ್ನ ಬಾಬ್ತು ಅಟೋ ರಿಕ್ಷಾದಲ್ಲಿ ಬಾಡಿಗೆ ನಿಮಿತ್ತ  ಅರೆಹೊಳೆ ಕ್ರಾಸ್ ನಿಂದ ಹೇರೂರು ಕಡೆಗೆ ಹೋಗುತ್ತಿರುವಾಗ ಅವರ ಎದುರುಗಡೆಯಿಂದ ಕೆಎ 20ಬಿ 7822  ನೇ ಮೋಟಾರ್ ಸೈಕಲಿನ ಸವಾರನು ಆತನ ಬಾಬ್ತು ಮೋಟಾರ್ ಸೈಕಲಿನಲ್ಲಿ ಹಿಂಬದಿಯಲ್ಲಿ ಸಹ ಸವಾರನೊಬ್ಬನನ್ನು ಕುಳ್ಳಿರಿಸಿಕೊಂಡು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಸವಾರಿ ಮಾಡಿಕೊಂಡು ಹೋಗಿ ರಸ್ತೆ ದಾಟುತ್ತಿದ್ದ ಕಾಡು ಪ್ರಾಣಿಯಾದ ಹಂದಿಗೆ ಡಿಕ್ಕಿ ಹೊಡೆದು ವಾಹನ ಸಮೇತ ರಸ್ತೆಗೆ ಬಿದ್ದ ಪರಿಣಾಮ ಮೋಟಾರ್ ಸೈಕಲಿನ ಹಿಂಬದಿಯಲ್ಲಿದ್ದ ಸಹ ಸವಾರ ಸತೀಶ ಆಚಾರ್ಯ ಎಂಬವರ ತಲೆ, ಮುಖ, ಕೈ, ಕಾಲುಗಳಿಗೆ ತೀವೃ ರೀತಿಯ  ರಕ್ತ ಗಾಯವಾಗಿ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಮೋಟಾರ್  ಸೈಕಲ್ ಸವಾರನಿಗೆ ಸಣ್ಣಪುಟ್ಟ ತರಚಿದ ಗಾಯವಾಗಿರುತ್ತದೆ ಎಂಬುದಾಗಿ ಶಿವರಾಮ ಮೊಗವೀರ ಇವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 03/2015 ಕಲಂ 279, 338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.            

No comments: