ಕಳವು ಪ್ರಕರಣಗಳು
- ಮಣಿಪಾಲ:ದಿನಾಂಕ:02/01/15 ರಂದು 9:15 ಗಂಟೆಯಿಂದ ದಿನಾಂಕ:05/01/15 ರ ಬೆಳಿಗ್ಗೆ 08:30 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿದ್ಯಾರತ್ನನಗರದಲ್ಲಿರುವ ಡೋರ್ ನಂಬ್ರ 4-22ಡಿ ಯ ಬಾಗಿಲಿನ ಬೀಗವನ್ನು ಮುರಿದು ಒಳಪ್ರವೇಶಿಸಿ ನಗದು ಹಣ, ಚಿನ್ನದ ಚೈನ್ ಹಾಗೂ ಬೆಳ್ಳಿಯ ಸ್ವತ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸ್ವತ್ತಿನ ಒಟ್ಟು ಮೌಲ್ಯ ರೂಪಾಯಿ 45000/- ಆಗಬಹುದು. ಈ ಬಗ್ಗೆ ಶಿವರಾಮ ಭಟ್ ವಿ.ಎಸ್(50), ತಂದೆ:ವಿ.ಶ್ಯಾಮಭಟ್, ವಾಸ:ಮನೆ ನಂಬ್ರ 4-22ಡಿ, ಪ್ರಶಾಂತಿ ಮನೆ, ವಿದ್ಯಾರತ್ನನಗರ, ಮಣಿಪಾಲ, ಉಡುಪಿರವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 03/2015 ಕಲಂ:454,457,380 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಮಲ್ಪೆ: ದಿನಾಂಕ 01-01-2015 ರಂದು ಬೆಳಿಗ್ಗೆ ಸಮಯ ಸುಮಾರು 01:30 ಗಂಟೆ ಸಮಯಕ್ಕೆ ಪಿರ್ಯಾದಿ ಸತೀಶ್ ಕುಮಾರ್ ತಂದೆ: ಮಹಾಬಲ ಗಾಣಿಗ ವಾಸ: ತಾಳೆಹಿತ್ಲು, ಕೆಮ್ಮಣ್ಣುಪಡುತೋನ್ಸೆ ಇವರಿಗೆ ನೆರೆಮನೆಯ ರಾಮಪ್ಪ ಟಿ ಸುವರ್ಣರವರು ಕರೆ ಮಾಡಿ ಪಕ್ಕದ ಮನೆಯ ಜಯಾನಂದ ಬಂಗೇರಾ ರವರ ಮನೆಗೆ ಕಳ್ಳರು ಬಂದಿರುವ ವಿಚಾರ ತಿಳಿಸಿ ಅವರಿಗೆ ಅಲ್ಲಿಗೆ ಬರುವಂತೆ ಹೇಳಿದ ಮೇರೆಗೆ ಪಿರ್ಯಾದಿದಾರರು ಅವರ ಮನೆಗೆ ಹೋಗಿರುತ್ತಾರೆ, ಅದೇ ದಿನ ರಾತ್ರಿ ಪಿರ್ಯಾದಿದಾರರ ಮಗಳು ಮಲಗಿರುವ ಕೋಣೆಯ ಕಿಟಕಿಯ ಹತ್ತಿರ ಯಾರೋ ಹೋದ ರೀತಿ ಅನಿಸಿದೆ ಎಂದು ಪಿರ್ಯಾದಿದಾರರಿಗೆ ಅವರ ಮಗಳು ತಿಳಿಸಿರುತ್ತಾರೆ ಆದರೆ ಆ ದಿನ ಕೋಣೆಯಲ್ಲಿದ್ದ ವಸ್ತುಗಳು ಯಥಾಸ್ಥಿತಿಯಲ್ಲಿ ಇದ್ದಿರುತ್ತವೆ, ಈ ದಿನ ದಿನಾಂಕ 05-01-2015 ರಂದು ಬೆಳಿಗ್ಗೆ ಕಾರ್ಯಕ್ರಮಕ್ಕೆ ಹೋಗಲು ಪಿರ್ಯಾದಿದಾರ ಹೆಂಡತಿ ಕರಿಮಣೆ ಸರವನ್ನು ಧರಿಸಲು ಕಿಟಕಿಯ ಪಕ್ಕದಲ್ಲಿ ಇಟ್ಟಿದ್ದ ಬ್ಯಾಗನಲ್ಲಿ ಹುಡುಕಿದಾಗ ಕರಿಮಣೆ ಸರ ಸಿಕ್ಕಿರುವುದಿಲ್ಲ ನಂತರ ಮನೆಯ ಎಲ್ಲಾ ಕಡೆ ಹುಡುಕಿದರೂ ಸಿಕ್ಕಿರುವುದಿಲ್ಲ. ಅದೇ ದಿನ ಅಂದರೆ ದಿ.31-12-2014 ರಂದು ಪಿರ್ಯಾದಿದಾರರ ಮನೆಯ ಪಕ್ಕದಲ್ಲಿ ಯಾರೋ ಕಳ್ಳರು ಬಂದು ಹೋಗಿದ್ದರು, ಅದೇ ಕಳ್ಳರು ಪಿರ್ಯಾದಿದಾರರ ಮನೆಯ ಕಿಟಕಿಯ ಬ್ಯಾಗಿನ ಪರ್ಸ್‌ನಲ್ಲಿದ್ದ ಕರಿಮಣೆ ಸರ, 1 ಜೊತೆ ಓಲೆ, ಹಾಗೂ ಕಿವಿಯ ಮಾಟಿಯನ್ನು ತೆಗೆದುಕೊಂಡು ಹೋಗಿರುತ್ತಾರೆ, ಇದರ ಅಂದಾಜು ಮೌಲ್ಯ ರೂಪಾಯಿ 75,000/- ಆಗಬಹುದುದಾಗಿದೆ. ಈ ಬಗ್ಗೆ ಸತೀಶ್ ರವರು ನೀಡಿದ ದೂರಿನಂತೆ 06/2015 ಕಲಂ 380 ಐಪಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಉಡುಪಿ ಸಂಚಾರ: ಪಿರ್ಯಾದಿ ಜಯರಾಜ್ ಪುಜಾರಿ (50) ತಂದೆ: ವಾಸು ಪೂಜಾರಿ ವಾಸ: ಪ್ರೀತಿ ಸಮಪಿಗೆ ನಗರ, ಉದ್ಯಾವರ ಉಡುಪಿ ಇವರು ದಿನಾಂಕ 05/01/2015 ರಂದು ಅಶೋಕ ಎಂಬ ಕೆಎ 20 ಡಿ 1627 ನೇ ನಂಬ್ರದ ಬಸ್ಸಿನಲ್ಲಿ ಚಾಲಕನ ಎಡಬದಿಯ ಸೀಟಿನಲ್ಲಿ ಕುಳಿತು ಮಂಚಿಯಿಂದ ಉಡುಪಿ ಕಡೆಗೆ ಬರುತ್ತಿರುವಾಗ ಚಿಟ್ಪಾಡಿ ಜಂಕ್ಷನ್ ಕಡೆಯಿಂದ ಕೊಳಂಬೆ ಮಾರ್ಗವಾಗಿ ಬರುತ್ತಿರುವಾಗ ಪ್ರಯಾಣಿಕರೊಬ್ಬರು ಮುಂದಿನ ಬಸ್ಸು ನಿಲ್ದಾಣದಲ್ಲಿ ಇಳಿವರೇ ಬಸ್ಸಿನ ಮುಂಭಾಗದ ಪುಟ್‌ಬೋರ್ಡ್‌ನಲ್ಲಿ ನಿಂತುಕೊಂಡಿದ್ದು ಈ ಬಗ್ಗೆ ನಿರ್ವಾಹಕ ನವೀನ್ ಸಾಲ್ಯಾನ್ ಯಾವುದೇ ಸೂಚನೆ ನೀಡಿರುವುದಿಲ್ಲ. ಬಸ್ಸು ಕೊಳಂಬೆ ಸಾಯಿರಾಧ ಎಂಪೈರ್ ಬಳಿ ತಲುಪುವಾಗ ಬಸ್ಸು ಚಾಲಕನು ತನ್ನ ಬಸ್ಸನ್ನು ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೇ ಬಸ್ಸಿಗೆ ಬ್ರೇಕ್ ಹಾಕಿದ ಕಾರಣ ಬಸ್ಸಿನ ಪುಟ್‌ಬೋರ್ಡ್ ನಲ್ಲಿ ನಿಂತಿದ್ದ ಪ್ರಯಾಣಿಕನು ಆಯ ತಪ್ಪಿ ಬಸ್ಸಿನ ಹೊರಗಡೆ ಎಸೆಯಲ್ಪಟ್ಟಿದ್ದರಿಂದ ಸದ್ರಿ ಪ್ರಯಾಣಿಕನ ತಲೆಯ ಎಡಕಿವಿಯ ಬಳಿ ಮತ್ತು ತಲೆಯ ಹಿಂಭಾಗ ತೀವ್ರ ತರಹದ ರಕ್ತಗಾಯವಾಗಿರುತ್ತದೆ. ಈ ಅಪಘಾತ ನಡೆಯುವಾಗ ಬೆಳಿಗ್ಗೆ ಸುಮಾರು 8.25 ಗಂಟೆ ಆಗಬಹುದು. ಸದ್ರಿ ಪ್ರಯಾಣಿಕನ ಹೆಸರು ಕೇರಾಜ್ ಎಂಬುದಾಗಿದ್ದು, ನಂತರ ಪಿರ್ಯಾದಿದಾರರು ಹಾಗೂ ಕೆಎ 20 ಡಿ 1627 ನೇ ಬಸ್ಸಿನ ಚಾಲಕ ಸುಧಾಕರ, ನಿರ್ವಾಹಕ ನವೀನ್ ಸಾಲ್ಯಾನ್ ರವರೊಂದಿಗೆ ಗಾಯಾಳು ಕೇರಾಜ್ ರವರನ್ನು ಒಂದು ವಾಹನದಲ್ಲಿ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಅಪಘಾತಕ್ಕೆ ಕೆಎ 20 ಡಿ 1627 ನೇ ಬಸ್ಸಿನ ಚಾಲಕ ಸುಧಾಕರ ರವರ ಅತೀ ವೇಗ ಮತ್ತು ಬಸ್ ನಿರ್ವಹಕ ನವೀನ್ ಸಲ್ಯಾನ್‌ರವರ ನಿರ್ಲಕ್ಷತನವೇ ಕಾರಣವಾಗಿರುವುದಾಗಿ ಜಯರಾಜ್ ಪೂಜಾರಿರವರು ನೀಡಿದ ದೂರಿನಂತೆ ಉಡುಪಿ ಸಂಚಾರ ಠಾಣೆಯಲ್ಲಿ 02/15 ಕಲಂ:279, 338 ಐಪಿಸಿ ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಕುಂದಾಪುರ:ಪಿರ್ಯಾದಾರರಾದ ರತ್ನ ಡಿ. (63) ವಾಸ:ವೃತ್ತಿ ತರಬೇತಿ ಕೇಂದ್ರ, ನಮ್ಮ ಭೂಮಿ, ಕನ್ಯಾನ, ಹಟ್ಟಿಯಂಗಡಿ ಕ್ರಾಸ್, ಕುಂದಾಪುರ ತಾಲೂಕುರವರು ನಮ್ಮ ಭೂಮಿ ಸಂಸ್ಥೆಯಲ್ಲಿ ಆಪ್ತ ಸಮಾಲೋಚಕರಾಗಿ ಕೆಲಸ ಮಾಡುತ್ತಿದ್ದು, ಕುಂದಾಪುರ ತಾಲೂಕು ಹಟ್ಟಿಯಂಗಡಿ ಕ್ರಾಸ್‌ನಲ್ಲಿರುವ ನಮ್ಮ ಭೂಮಿ ಸಂಸ್ಥೆಯಲ್ಲಿ ವಾಸ್ತವ್ಯವಿದ್ದು, ವಿದ್ಯಾಭ್ಯಾಸ ಮಾಡುತ್ತಿದ್ದ 1) ಅಭಿಷೇಕ (12) ತಂದೆ:ಪರಸಪ್ಪ ವಾಸ: ಮನೆ ನಂಬ್ರ:131, ಮಾರಿಗುಡಿ ಹಿಂಭಾಗ, 3ನೇ ಕ್ರಾಸ್, ಆನಂದ ನಗರ, ಹಳೆ ಹುಬ್ಬಳ್ಳಿ ಮತ್ತು 2) ಚೌಡೇಶ (9) ತಂದೆ:ಚೌಡಪ್ಪ ವಾಸ:ನ್ಯಾಮತಿ, ಶಿವಮೊಗ್ಗ ಜಿಲ್ಲೆರವರುಗಳು ಎಂದಿನಂತೆ ದಿನಾಂಕ:02/01/2015 ರಂದು ಬೆಳಿಗ್ಗೆ 09:00 ಗಂಟೆಗೆ ಹಟ್ಟಿಯಂಗಡಿ ಬಾಚಿನಕೊಡ್ಲು ನಲಂದ ವಿದ್ಯಾಪೀಠ ಶಾಲೆಗೆ ಹೋದವರು ವಾಪಾಸು ನಮ್ಮ ಭೂಮಿ ಸಂಸ್ಥೆಗೆ ಬಾರದೆ ಅವರ ಖಾಯಂ ವಿಳಾಸಕ್ಕೂ ಹೋಗದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ರತ್ನ ಡಿ.ರವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 02/2015 ಕಲಂ: 363 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಮಲ್ಪೆ:ದಿನಾಂಕ:04/01/2015 ರಂದು ಪಿರ್ಯಾದಿ ಹರಿಶ್ಚಂದ್ರ ಮೈಂದನ್ ಇವರು ಹನುಮಾನ ನಗರದ ಕಟ್ಟೆ ಪ್ರೆಂಡ್ಸ್ ಕಟ್ಟೆಯಲ್ಲಿ ಕುಳಿತುಕೊಂಡಾಗ ಸಮಯ ಸುಮಾರು ಮದ್ಯಾಹ್ಹ 02:00 ಗಂಟೆ ಸಮಯದಲ್ಲಿ ಸಾಧು ಮೆಂಡನ್ ಹಾಗೂ ಅವರ ಮಕ್ಕಳಾದ ದೇವದಾಸ ಪುತ್ರನ್, ಅಶೋಕ ಪುತ್ರನ್, ಮೊಮ್ಮಗ ಕಿರಣ ಪುತ್ರನ್, ಹಾಗೂ ಅವರ ಸ್ನೇಹಿತರಾದ ಅವಿನಾಶ ಮತ್ತು ಸಂದೀಪ್ ರವರು ಅಲ್ಲಿಗೆ ಬಂದು ಯಾವುದೇ ಒಂದು ವಿಚಾರ ಕೇಳದೆ ದೇವದಾಸ ಪುತ್ರನ್ ತನ್ನ ಕೈಯಲ್ಲಿದ್ದ ಸೊಂಟೆಯಿಂದ ಪಿರ್ಯಾದಿದಾರರ ಬೆನ್ನಿಗೆ, ಎಡಪಕ್ಕೆಲುಬಿನ ಕೆಳಗೆ ಜೋರಾಗಿ ಹೊಡೆದಿರುತ್ತಾರೆ, ಜೊತೆಯಲ್ಲಿ ಬಂದವರೆಲ್ಲರೂ ಕಾಲಿನಿಂದ ತುಳಿದು, ಕೈಯಿಂದ ಪಿರ್ಯಾದಿದಾರರ ದೇಹದ ಎಲ್ಲಾ ಭಾಗಗಳಿಗೆ ಗುದ್ದಿರುತ್ತಾರೆ, ಅವರ ಪೆಟ್ಟನ್ನು ತಾಳಲಾರದೇ ಪಿರ್ಯಾದಿದಾರರು ಜೋರಾಗಿ ಬೊಬ್ಬೆ ಹೊಡೆದು ಅಲ್ಲಿಯೇ ನೆಲಕ್ಕೆ ಬಿದ್ದಿರುತ್ತಾರೆ ಅಷ್ಟರಲ್ಲಿ ಪಿರ್ಯಾದಿದಾರರ ಪರಿಚಯವರಾದ ಜಗದೀಶ ಹಾಗೂ ಸಂತೋಷರವರು ಬಂದು ಯಾಕೆ ಗಲಾಟೆ ಎಂದು ವಿಚಾರಿಸಿದಾಗ ಅವರೆಲ್ಲಾ ಮುಂದಕ್ಕೆ ಇಲ್ಲಿಗೆ ಬಂದರೆ, ಠಾಣೆಗೆ ದೂರು ನೀಡಿದರೆ ನಿನ್ನುನ್ನು ಕೊಂದು ಹಾಕುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ, ನಂತರ ಸಂತೋಷ ಮತ್ತು ಜಗದೀಶ ರವರು ಪಿರ್ಯಾದಿದಾರರನ್ನು ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿರುತ್ತಾರೆ ವೈದ್ಯರು ಪರಿಕ್ಷೀಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಮಣಿಪಾಲ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ, ಈ ಬಗ್ಗೆ ಮಲ್ಪೆಠಾಣೆಯಲ್ಲಿ ಅಪರಾಧ ಕ್ರಮಾಂಕ:05/2015 ಕಲಂ 506, 143, 147, 148, 323, 324 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment