ಹೆಂಗಸು ಕಾಣೆ ಪ್ರಕರಣ
- ಮಲ್ಪೆ: ಪಿರ್ಯಾದಿದಾರರಾದ ನಾರಾಯಣ (45) ತಂದೆ ಕುರುಂಬಿಲ ವಾಸ ಗಾಂಧಿನಗರ, ಕಪ್ಪೆಟ್ಟು, ಕಿದಿಯೂರು ಗ್ರಾಮ ಇವರ ಹೆಂಡತಿಯಾದ ಸುನಂದಾ (38) ಎಂಬವರು ದಿನಾಂಕ 01/01/2015 ರಾತ್ರಿ 08:00 ಗಂಟೆ ಸುಮಾರಿಗೆ ಮನೆಯಾದ ಕಿದಿಯೂರು ಗ್ರಾಮದ ಕಪ್ಪೆಟ್ಟು, ಗಾಂಧಿ ನಗರ ಎಂಬಲ್ಲಿಂದ ಹೋದವರು ಇಲ್ಲಿವರೆಗೂ ವಾಪಸ್ಸು ಮನೆಗೆ ಬಾರದೇ ಸಂಬಂದಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ ಎಂಬುದಾಗಿ ನಾರಾಯಣ ಇವರು ನೀಡಿದ ದೂರಿನಂತೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ 02/2015 ಕಲಂ ಹೆಂಗಸು ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
- ಕಾಪು: ಪಿರ್ಯಾದುದಾರರಾದ ರಾಜೇಶ್ವರ ಶೆಟ್ಟಿ (38) ತಂದೆ ಭಾಸ್ಕರ್ ಶೆಟ್ಟಿ ವಾಸ ಮೂಡಬೆಟ್ಟು ಇವರ ದೊಡ್ಡಮ್ಮ ಗುಲಾಬಿ ಶೆಡ್ತಿಯವರು ದಿನಾಂಕ 02.01.2015 ರ ರಾತ್ರಿ 10:00 ಗಂಟೆಯಿಂದ ದಿನಾಂಕ 03.01.2015 ರ ಬೆಳಿಗ್ಗೆ 06:00 ಗಂಟೆಯ ಮದ್ಯಾವಧಿಯಲ್ಲಿ ಮೂಡಬೆಟ್ಟು ಗ್ರಾಮದ ಅವರ ಮನೆಯ ಹತ್ತಿರ ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಇವರು ಸಮಾರು 6-7 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ವೈದ್ಯರಿಂದ ಚಿಕಿತ್ಸೆ ಪಡೆದರು ಸಹ ಗುಣಮುಖರಾಗದೆ ಇರುವುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಇವರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲವಾಗಿದೆ ಎಂಬುದಾಗಿ ರಾಜೇಶ್ವರ ಶೆಟ್ಟಿ ಇವರು ನೀಡಿದ ದೂರಿನಂತೆ ಕಾಪು ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 01/2015 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿ ತನಿಖೆಯಲ್ಲಿರುತ್ತದೆ.
- ಹೆಬ್ರಿ: ದಿನಾಂಕ 03/01/2015ರಂದು ಪಿರ್ಯಾದಿದಾರರಾದ ಗೋವಿಂದ ನಾಯ್ಕ್ (52) ಎಂಬುವವರು ಬ್ರಹ್ಮಾವರ ಟೆಲಿಫೋನ್ ಕಛೇರಿಯಲ್ಲಿರುವಾಗ್ಯೆ ಕಳ್ತೂರು ಎಕ್ಸ್ ಚೇಂಜ್ ನಲ್ಲಿ ಗುತ್ತಿಗೆ ಆಧಾರದಲ್ಲಿ ಲೈನ್ ಮ್ಯಾನ್ ಕರ್ತವ್ಯ ಮಾಡುತ್ತಿದ್ದ, ಶಂಕರ್ ನಾಯ್ಕ್ ಎಂಬುವವರು ಪಿರ್ಯಾದಿದಾರರ ಕಛೇರಿ ಪೋನಿಗೆ ಕರೆ ಮಾಡಿ ದಿನಾಂಕ 02-01-2015 ರಂದು ಮಧ್ಯಾಹ್ನ 12:00 ಗಂಟೆಯಿಂದ ಈ ದಿನ ದಿನಾಂಕ 03-01-2015 ರಂದು ಬೆಳಿಗ್ಗೆ 9:00 ಗಂಟೆಯ ಮದ್ಯಾವಧಿಯಲ್ಲಿ ಕಳ್ತೂರು ಗ್ರಾಮದ ಪಾಂಡು ಕಲ್ಲು ರಸ್ತೆ ಬದಿಯಲ್ಲಿದ್ದ 5 ಟೆಲಿಫೋನ್ ಕಂಬದಲ್ಲಿದ್ದ 400 ಮೀಟರ್ 5 ಫೇರ್ ಕೇಬಲ್‌ಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುವುದಾಗಿ ತಿಳಿಸಿದ ಮೇರೆಗೆ ಪಿರ್ಯಾದಿದಾರರು ಸದ್ರಿ ಸ್ಥಳಕ್ಕೆ ಬಂದು ನೋಡಿದ್ದು, 5 ಟೆಲಿಫೋನ್ ಕಂಬದಲ್ಲಿದ್ದ ಓವರ್ ಹೆಡ್ ಕೇಬಲ್ ಕಳುವಾಗಿರುವುದು ಕಂಡು ಬಂದಿತು ಅದರ ಮೌಲ್ಯ ಸುಮಾರು 3,800/- ರೂಪಾಯಿ ಆಗಿರುತ್ತದೆ. ಎಂಬುದಾಗಿ ಗೋವಿಂದ ನಾಯ್ಕ್ ಇವರು ನೀಡಿದ ದೂರಿನಂತೆ ಹೆಬ್ರಿ ಠಾಣಾ ಅಪರಾಧ ಕ್ರಮಾಂಕ 02/15 ಕಲಂ 379, ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
- ಹೆಬ್ರಿ: ದಿನಾಂಕ 02/01/2014 ರಂದು ಪಿರ್ಯಾದಿದಾರರಾದ ಚರಣ್ (19) ತಂದೆ ಹನುಮಂತಪ್ಪ ವಾಸ 337 ನಾರಾಯಣ ನಗರ, 1 ನೇ ಬ್ಲಾಕ್ ದೊಡ್ಡಕಲ್ಲಸಂದ್ರ ಅಂಚೆ, ಕನಕಪುರ ಎಂಬುವವರು ತನ್ನ ಸ್ನೇಹಿತ ದೀಪಕ್ ರವರ ಬಾಬ್ತು ಕಎ 05ಹೆಚ್‌ವೈ 5289ನೇ ಮೋಟಾರ್ ಸೈಕಲ್ ನಲ್ಲಿ ಸಹ ಸವಾರನಾಗಿ ಕುಳಿತುಕೊಂಡು ಮಲ್ಪೆ ಬೀಚ್ ನಿಂದ ಬೆಂಗಳೂರಿಗೆ ಆಗುಂಬೆ ಮಾರ್ಗವಾಗಿ ಹೋಗುವಾಗ ಅಪರಾಹ್ನ ಸುಮಾರು 3:00 ಗಂಟೆಗೆ ಹೆಬ್ರಿಯಿಂದ ಸುಮಾರು 6:00 ಕಿ.ಮೀ ಮುಂದೆ ಸೀತಾನದಿ ಎಂಬಲ್ಲಿಗೆ ತಲುಪುವಾಗ ತಿರುವು ರಸ್ತೆಯಲ್ಲಿ ಮೋಟಾರ್ ಸೈಕಲ್ ಸವಾರ ದೀಪಕ್ ರವರು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿದ ಪರಿಣಾಮ ಮೋಟಾರ್ ಸೈಕಲಿನ ಹಿಂಬದಿಯ ಟಯರ್ ರಸ್ತೆಯ ಮೇಲಿಟ್ಟಿದ್ದ ಕಲ್ಲಿನ ಮೇಲೆ ಹತ್ತಿ ಜಂಪಾಗಿ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರು ಮತ್ತು ಮೋಟಾರ್ ಸೈಕಲ್ ಸವಾರ ದೀಪಕ್ ರವರು ಗಾಯಗೊಂಡಿದ್ದು, ಪಿರ್ಯಾದಿದಾರರು ಉಡುಪಿಯ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ ಎಂಬುದಾಗಿ ಚರಣ್ ಇವರು ನೀಡಿದ ದೂರಿನಂತೆ ಹೆಬ್ರಿ ಠಾಣಾ ಅಪರಾಧ ಕ್ರಮಾಂಕ 01/15 ಕಲಂ 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
No comments:
Post a Comment