ಅಸ್ವಾಭಾವಿಕ ಮರಣ ಪ್ರಕರಣ :
- ಕೋಟ: ಉಮೇಶ, ತಂದೆ:ತಮ್ಮಯ್ಯ ನಾಯ್ಕ್, ವಾಸ:ಅಂಬಾರಮಕ್ಕಿ, ನಂಚಾರು ಗ್ರಾಮ ಇವರ ತಂಗಿ ಪೂರ್ಣೀಮಾ ಪ್ರಾಯ:16 ವರ್ಷ ಎಂಬವರು ದಿನಾಂಕ 03/01/2015 ಬೆಳಿಗ್ಗೆ 09:00 ಗಂಟೆಯಿಂದ 09:30 ಗಂಟೆಯ ಮಧ್ಯಾವಧಿಯಲ್ಲಿ ನಂಚಾರು ಗ್ರಾಮದ ಬೀರ್ನಾಣೆ ಎಂಬಲ್ಲಿರುವ ಚೌಂಡಾಲ್ ಲಕ್ಷ್ಮೀ ಶೆಡ್ತಿ ಎಂಬವರ ಬಾಬ್ತು ಆವರಣವಿಲ್ಲದ ಬಾವಿಯಲ್ಲಿ ಕೊಡಪಾನದಿಂದ ನೀರನ್ನು ಎತ್ತುವ ಸಮಯ ಆಕಸ್ಮಿಕವಾಗಿ ಕಾಲುಜಾರಿ ಬಾವಿಗೆ ಬಿದ್ದು ಅಸ್ವಸ್ಥಗೊಂಡವಳನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ ಆಸ್ಪತ್ರಗೆ ಕೊಂಡು ಹೋಗುವಾಗ ಬ್ರಹ್ಮಾವರ ಮಹೇಶ ಆಸ್ಪತ್ರೆ ಮಾರ್ಗಮಧ್ಯದಲ್ಲಿ 10:45 ಗಂಟೆಗೆ ಮೃತಪಟ್ಟಿರುವುದಾಗಿದೆ ಎಂಬುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣಾ ಯುಡಿಆರ್ ಕ್ರಮಾಂಕ: 01/2015 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಪಘಾತ ಪ್ರಕರಣ :
- ಕುಂದಾಪುರ ಸಂಚಾರ : ದಿನಾಂಕ 02/01/2015 ರಂದು ಸಮಯ ಸುಮಾರು ಮಧ್ಯ ರಾತ್ರಿ 12:15 ಗಂಟೆಗೆ ಕುಂದಾಪುರ ತಾಲೂಕು ಕೋಣಿ ಗ್ರಾಮದ ಮೂಡ್ಲಕಟ್ಟೆ ಕಿರು ಸೇತುವೆಯ ರಾಜ್ಯ ಹೆದ್ದಾರಿ 52 ರಸ್ತೆಯಲ್ಲಿ ಆಪಾದಿತ ಅಬ್ದುಲ್ ಸಾಹಿದ್ ಎಂಬವರು KA-20 EF-9273 ನೇ ಹೋಂಡಾ ಆಕ್ಟಿವ್ ಸ್ಕೂಟರ್ ನಲ್ಲಿ ಅಬ್ದುಲ್ ಸಮದ್ ಪ್ರಾಯ 20 ವರ್ಷ ತಂದೆ: ಅಬ್ಬಾಸ್ ವಾಸ: ಶಾಹಿದ್ ಮಂಜಿಲ್, ಬೊಲ್ ಕಟ್ಟೆ, ಗುಲ್ವಾಡಿ ಗ್ರಾಮ ಇವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಕೋಡಿಯಿಂದ ಗುಲ್ವಾಡಿ ಮನೆ ಕಡೆಗೆ ಅತೀವೇಗವಾಗಿ ಸವಾರಿ ಮಾಡಿಕೊಂಡು ಬರುತ್ತಿರುವಾಗ ನಾಯಿಯೊಂದು ರಸ್ತೆಗೆ ಅಡ್ಡ ಬಂದಿದ್ದನ್ನು ನೋಡಿ ಒಮ್ಮಲೆ ಬ್ರೇಕ್ ಹಾಕಿದ ಪರಿಣಾಮ ಸ್ಕೂಟರ್ ಸವಾರನ ಹತೋಟಿ ತಪ್ಪಿ ರಸ್ತೆಯಲ್ಲಿ ಅಡ್ಡಬಿದ್ದುಅಬ್ದುಲ್ ಸಮದ್ ಹಾಗೂ ಆಪಾದಿತ ಅಬ್ದುಲ್ ಶಾಹಿದ್ ಗಾಯಗೊಂಡು ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಅಬ್ದುಲ್ ಸಮದ್ ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 02/15 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment