ಅಪಘಾತ ಪ್ರಕರಣಗಳು
- ಕೊಲ್ಲೂರು:ದಿನಾಂಕ:02/01/2015 ರಂದು ಪಿರ್ಯಾದಿದಾರರಾದ ಸುರೇಶ್ ಶೆಟ್ಟಿ (50)
ತಂದೆ:ಮಂಜುನಾಥ ಶೆಟ್ಟಿ ವಾಸ:ಮೆಲ್‌ಹಾಡಿ ಮನೆ, ಗುಲ್ವಾಡಿ
ಗ್ರಾಮ ಕುಂದಾಪುರ ತಾಲೂಕುರವರು ತಮ್ಮ ಸ್ನೇಹಿತನ
ಬೈಕಿನಲ್ಲಿ ಕೊಲ್ಲುರು ಶ್ರೀ ಮೂಕಾಂಬಿಕಾ ದೇವರ ದರ್ಶನ ಮಾಡಿ ಕೊಲ್ಲೂರಿನಿಂದ ಗುಲ್ವಾಡಿ
ಕಡೆ ಬೈಕಿನಲ್ಲಿ ಹೊರಟು ಕೊಲ್ಲೂರು ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿ ಬರುತ್ತಾ ಜಡ್ಕಲ್
ಗ್ರಾಮದ ಹಾಲ್ಕಲ್ ಬಳಿ ತಲುಪುತ್ತಿರುವಾಗ ಸುಮಾರು 11:30 ಗಂಟೆಗೆ ಎದುರಿನಿಂದ ಕುಂದಾಪುರ
ಕಡೆಯಿಂದ ಕೊಲ್ಲೂರು ಕಡೆಗೆ ಒಂದು ಕಾರನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ
ಚಲಾಯಿಸಿಕೊಂಡು ಬರುತ್ತಾ ಒಮ್ಮೆಲೆ ತಮ್ಮ ಎಡ ಬದಿಗೆ ಚಲಾಯಿಸಿದ ಕಾರಣ ಸದ್ರಿ ಕಾರು ಚಾಲಕನ
ಹತೋಟಿ ತಪ್ಪಿ ಕೆಳಗಿನ ಸುಗ್ಗಿ ಗದ್ದೆಗೆ ಚಕ್ರ ಮೇಲಾಗಿ ಪಲ್ಟಿ ಆಗಿದ್ದು, ಕಾರು ನಂಬ್ರ ನೋಡಲಾಗಿ ಕೆ.ಎ 05 ಎಮ್.ಸಿ
6275 ಹ್ಯುಂಡೈ ಕಾರು ಆಗಿದ್ದು, ಹತ್ತಿರ
ಹೋಗಿ ನೋಡಿದಲ್ಲಿ ಕಾರಿನಲ್ಲಿದ್ದ 4 ಜನರು ಕಾರಿನೊಳಗೆ ಸಿಲುಕಿಕೊಂಡಿದ್ದು, ಅವರನ್ನೆಲ್ಲಾ ಹೊರಗೆ ತೆಗೆದು ನೋಡಲಾಗಿ
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಶಿವರಾಜ,ಅರುಣ ಹಾಗೂ ಉದಯ
ಎಂಬವರಿಗೆ ಗಾಯವಾಗಿದ್ದು ಸದ್ರಿಯವರನ್ನು 108 ಅಂಬುಲೆನ್ಸ್ ವಾಹನದಲ್ಲಿ ಚಿನ್ಮಯಿ
ಆಸ್ಪತ್ರಗೆ ದಾಖಲು ಮಾಡಿರುವುದಾಗಿದೆ. ಈ ಅಪಘಾತಕ್ಕೆ ಕೆ.ಎ 05 ಎಮ್.ಸಿ 6275 ನೇ ಕಾರಿನ
ಚಾಲಕನಾದ ನವೀನ ಆಚಾರಿ ಎಂಬವರ ಅತೀ ವೇಗ ಹಾಗೂ ನಿರ್ಲಕ್ಷತನದ ಚಾಲನೆಯೆ ಕಾರಣವಾಗಿರುತ್ತದೆ.
ಈ ಬಗ್ಗೆ ಸುರೇಶ್ ಶೆಟ್ಟಿರವರು ನೀಡಿದ ದೂರಿನಂತೆ
ಕೊಲ್ಲೂರು ಠಾಣಾ ಅಪರಾಧ ಕ್ರಮಾಂಕ 01/2015 ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಬೈಂದೂರು:ಪಿರ್ಯಾದಿದಾರರಾದ ಭಾಸ್ಕರ್ ಪೂಜಾರಿ (30) ತಂದೆ:ದಿವಂಗತ
ಶೇಷ ಪೂಜಾರಿ ವಾಸ:ದಾರನಮನೆ ರೈಲ್ವೇ ಸ್ಟೇಶನ್ ಹತ್ತಿರ ಶಿರೂರು ಗ್ರಾಮ ಕುಂದಾಪುರ
ತಾಲೂಕುರವರು ದಿನಾಂಕ:02/01/2015 ರಂದು ಸಂಜೆ ಸುಮಾರು 06:00 ಗಂಟೆಗೆ
ಕುಂದಾಪುರ ತಾಲೂಕು ಶಿರೂರು ಗ್ರಾಮದ ಕಮರ್ಶಿಯಲ್ ಚೆಕ್‌ಪೋಸ್ಟ್ ಹತ್ತಿರ ರಾಷ್ಟ್ರೀಯ
ಹೆದ್ದಾರಿ 66 ರ ಬಳಿಯಲ್ಲಿರುವ ಅವರ ಟೀ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಸಮಯ, ಕೆ.ಎ 30 ಬಿ 4786 ನೇ ಲಾರಿಯನ್ನು ಅದರ ಚಾಲಕನು ಭಾಸ್ಕರ್ ಪೂಜಾರಿರವರ ಅಂಗಡಿಯಿಂದ ಸ್ವಲ್ಪ ಮುಂದೆ ರಾಷ್ಟ್ರೀಯ ಹೆದ್ದಾರಿ 66 ರ ಪಶ್ಚಿಮ ಬದಿಯಲ್ಲಿ ಮಣ್ಣಿನ
ರಸ್ತೆಯಲ್ಲಿ ಭಟ್ಕಳ ಕಡೆಗೆ ಮುಖ ಮಾಡಿ ನಿಲ್ಲಿಸಿ ಹೋಗಿದ್ದು, ಅದೇ ಸಮಯದಲ್ಲಿ ಕೆ.ಎ 47 ಇ 1273 ನೇ ಮೋಟಾರ್‌ಸೈಕಲನ್ನು ಅದರ ಸವಾರನು ಶಿರೂರು ಮಾರ್ಕೇಟ್ ಕಡೆಯಿಂದ
ಭಟ್ಕಳ ಕಡೆಗೆ ಅತೀ ವೇಗ ಹಾಗೂ ಅಜಾಕರೂಕತೆಯಿಂದ ಚಲಾಯಿಸಿಕೊಂಡು ಬಂದು ಭಟ್ಕಳ ಕಡೆಗೆ
ಮುಖಮಾಡಿ ನಿಂತಿದ್ದ ಕೆ.ಎ 30 ಬಿ 4786 ಲಾರಿಯ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ಮೋಟರ್ ಸೈಕಲ್ ಸವಾರನು ಮೋಟಾರ್
ಸೈಕಲ್ ಸಮೇತ ರಸ್ತೆಗೆ ಬಿದ್ದು ಮೋಟಾರ್ ಸೈಕಲ್ ಸವಾರನಿಗೆ ತಲೆಗೆ ರಕ್ತ
ಗಾಯವಾಗಿರುತ್ತದೆ.ಈ ಬಗ್ಗೆ ಭಾಸ್ಕರ್ ಪೂಜಾರಿರವರು ನೀಡಿದ
ದೂರಿನಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ ೦1/2015 ಕಲಂ:279,338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಕುಂದಾಪುರ
ಸಂಚಾರ:ದಿನಾಂಕ:01/01/2015 ರಂದು ಸಂಜೆ ಸುಮಾರು 7:00 ಗಂಟೆಗೆ ಕುಂದಾಪುರ ತಾಲೂಕು
ತಲ್ಲೂರು ಗ್ರಾಮದ ಪಾರ್ತಿಕಟ್ಟೆ
ಬಸ್ ಸ್ಟಾಪ್ ಬಳಿ ರಸ್ತೆಯಲ್ಲಿ
ಆಪಾದಿತ ರವೀಂದ್ರ ಎಂಬವರು KA 20 U 9265 ಬೈಕನ್ನು ಹಟ್ಟಿಯಂಗಡಿಯಿಂದ ತಲ್ಲೂರು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ
ಸವಾರಿ ಮಾಡಿಕೊಂಡು ರಸ್ತೆಯ ಬಲಬದಿಗೆ ಹೋಗಿ, ತಲ್ಲೂರು
ಕಡೆಯಿಂದ ಹಟ್ಟಿಯಂಗಡಿ ಕಡೆಗೆ ಸೈಕಲ್ ಸವಾರಿ ಮಾಡಿಕೊಂಡು ಬರುತ್ತಿದ್ದ
ಸುರೇಶ ದೇವಾಡಿಗ ಎಂಬವರಿಗೆ ಎದುರುಗಡೆಯಿಂದ
ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಸುರೇಶ ದೇವಾಡಿಗ ಗಾಯಗೊಂಡು
ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ
ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಬೈಕಿನ ಸಹ ಸವಾರ ಅನಿಲ್ ಹೊರ
ರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ.
ಈ ಬಗ್ಗೆ ಶ್ರೀಧರ ದೇವಾಡಿಗ (31) ತಂದೆ:ಅರ್ಮ ದೇವಾಡಿಗ ವಾಸ:ಮಾರನ ಮನೆ, ತಲ್ಲೂರು, ಕುಂದಾಪುರ ತಾಲೂಕುರವರು ನೀಡಿದ
ದೂರಿನಂತೆ 01/2015 ಕಲಂ 279, 337 ಐಪಿಸಿಯಂತೆ ಪ್ರಕರಣ
ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
- ಮಣಿಪಾಲ:
ಪಿರ್ಯಾದಿದಾರರಾದ ರೋಹಿಣಿ ಗೋಪಾಲ್ (44),
ಗಂಡ ಗೋಪಾಲ ಕೃಷ್ಣ, ವಾಸ 1-19ಎ, ಶ್ರೀರಾಮ ನಿಲಯ, ಕರಂಬಳ್ಳಿ,
ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಇವರ ಗಂಡ:
ಪಿ. ಗೋಪಾಲ ಕೃಷ್ಣ, (52) ಅವರಿಗೆ 30
ವರ್ಷದಿಂದ ಸಕ್ಕರೆ ಖಾಯಿಲೆ ಹಾಗೂ ರಕ್ತದೊತ್ತಡ ಖಾಯಿಲೆಯಿದ್ದು, ಅದೇ
ಖಾಯಿಲೆಯಿಂದ ಎಡಕಾಲು ಈ ಹಿಂದೆ ಮೊಣಗಂಟಿನ ಕೆಳಗಡೆ ಕತ್ತರಿಸಿದ್ದು, ಅವರು ಮನೆಯಲ್ಲಿಯೇ ಇದ್ದವರು ದಿನಾಂಕ 01/01/2015ರಂದು
ಸಂಜೆ 4:00 ಗಂಟೆಗೆ ಬೆನ್ನು ನೋವು ಬರುತ್ತದೆಯೆಂದು ಹೇಳಿದ
ಮೇರೆಗೆ ಪಿರ್ಯಾದಿದಾರರಾದ ರೋಹಿಣಿ ಗೋಪಾಲ್ ಆರೈಕೆ ಮಾಡಿದ್ದು, ಸ್ವಲ್ಪ
ಹೊತ್ತಿನ ಬಳಿಕ ಕುಳಿತ ಕುರ್ಚಿಯಿಂದ ಕೆಳಗೆ ಬಿದ್ದವರನ್ನು ಚಿಕಿತ್ಸೆಗೆ ಎ.ವಿ
ಬಾಳಿಗಾ ಆಸ್ಪತ್ರೆಗೆ ತರುವಾಗ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದು,
ಶವವನ್ನು ಕೂಡಲೇ ಮಣಿಪಾಲ ಆಸ್ಪತ್ರೆಯ ಶವಗಾರಕ್ಕೆ ಸ್ಥಳಾಂತರಿಸಿದ್ದು,
ರಕ್ತದೊತ್ತಡ ಖಾಯಿಲೆಯಿಂದ ಮೃತಪಟ್ಟಿರುವುದಾಗಿದೆ ಎಂಬುದಾಗಿ ರೋಹಿಣಿ
ಗೋಪಾಲ್ ಇವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 01/2015 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ
ತನಿಖೆಯಲ್ಲಿರುತ್ತದೆ.
ಹಲ್ಲೆ ಪ್ರಕರಣ
- ಕಾಪು: ದಿನಾಂಕ 02/01/2015ರಂದು 09:45 ಗಂಟೆಗೆ ಉಡುಪಿ ತಾಲೂಕು ಇನ್ನಂಜೆ ಗ್ರಾಮದ ಶಂಕರಪುರ ಸಾಲ್ಮರ ಎಂಬಲ್ಲಿ ಪಿರ್ಯಾದಿದಾರರಾದ ರಾಬರ್ಟ್ ಮಥಾಯಸ್ (62) ತಂದೆ ದಿ. ಪಾವ್ಲ್ ಮಥಾಯಸ್ ವಾಸ ಸಾಲ್ಮಾರ ಶಂಕರಪುರ ಅಂಚೆ, ಇನ್ನಂಜೆ ಗ್ರಾಮ ಇವರು ತನ್ನ ಬಾಬ್ತು ತೋಟದಲ್ಲಿ ನೀರು ಬಿಡುತ್ತಿದ್ದಾಗ ಅವರ ನೆರೆ ಮನೆಯ ಮ್ಯಾಕ್ಸಿಮ್ ಮಥಾಯಸ್ ಎಂಬವರು ಪಿರ್ಯಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರನ್ನು ಉದ್ಧೇಶಿಸಿ ಅವಾಚ್ಯ ಶಬ್ಧಗಳಿಂದ ಬೈದುದಲ್ಲದೇ, ಪಿರ್ಯಾದಿದಾರರ ಹಣೆಗೆ ಕಲ್ಲಿನಿಂದ ಗುದ್ದಿ ರಕ್ತಗಾಯ ಉಂಟುಮಾಡಿರುವುದಾಗಿದೆ. ಪಿರ್ಯಾದಿದಾರರು ತಮ್ಮ ಜಾಗಕ್ಕೆ ಮ್ಯಾಕ್ಸಿಮ್ ಮಥಾಯಸ್ ರವರು ಬಾರದಂತೆ ಬೇಲಿ ಹಾಕಿರುವುದೇ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ ಎಂಬುದಾಗಿ ರಾಬರ್ಟ್ ಮಥಾಯಸ್ ಇವರು ನೀಡಿದ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ 02/2015 ಕಲಂ 447, 504, 324 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
No comments:
Post a Comment