ಕಳವು ಪ್ರಕರಣ
ಹಲ್ಲೆ ಪ್ರಕರಣ
- ಗಂಗೊಳ್ಳಿ: ದಿನಾಂಕ 31/12/2014ರಂದು ರಾತ್ರಿ ಪಿರ್ಯಾದಿ ಜನಾರ್ದನ ಪೂಜಾರಿ (46), S/o ನೇಮಿ ಪೂಜಾರಿ ಪೆರಾಜೆ ಬಾರ್ & ರೆಷ್ಟೋರೆಂಟ್ ಬಂದರ್ ರೋಡ್ ಗಂಗೊಳ್ಳಿ ಕುಂದಾಪುರ ತಾಲೂಕು ಇವರು ಉಡುಪಿ ಜಿಲ್ಲೆ. ಜನಾರ್ದನ ಪೂಜಾರಿ ರವರು ಗಂಗೊಳ್ಳಿ ಬಂದರ್ ರೋಡ್ ನಲ್ಲಿರುವ ತಮ್ಮ ಪೆರಾಜೆ ಬಾರ್ ಮುಂಭಾಗ ನಿಸಾನ್ ಕಾರು KA 20P 9279ನೇಯದಕ್ಕೆ ಕವರನ್ನು ಮುಚ್ಚಿ ನಿಲ್ಲಿಸಿದ್ದು ರಾತ್ರಿ 01-30 ಗಂಟೆಗೆ ನೋಡುವಾಗ ಯಥಾ ಸ್ಥಿತಿಯಲ್ಲಿ ಇದ್ದಿದ್ದು ಬೆಳಿಗ್ಗೆ 07.00 ಗಂಟೆಗೆ ನೋಡುವಾಗ ಕಾರಿನ ಕವರು ಕಳವಾಗಿರುವುದು ಕಂಡುಬಂದಿರುತ್ತದೆ. ಸಿಸಿ ಕ್ಯಾಮರ ದೃಶ್ಯ ನೋಡುವಾಗ ಕಾರಿನಲ್ಲಿ ಬಂದವರಿಬ್ಬರು ಕಾರಿಗೆ ಮುಚ್ಚಿದ ಕವರನ್ನು ಕಳವುಮಾಡಿಕೊಂಡು ಹೋಗಿರುವುದು ಕಂಡುಬಂದಿದೆ. ಕಳವಾದ ಕವರಿನ ಮೌಲ್ಯ 5000/- ರೂ ಆಗಿರುತ್ತದೆ. ಈ ಬಗ್ಗೆ ಆಪಾದಿತರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ಕಳವಾದ ಸ್ವತ್ತು ಪತ್ತೆಮಾಡಿಕೊಡಬೇಕಾಗಿ ಕೇಳಿಕೊಂಡಿರುತ್ತಾರೆ ಎಂಬುದಾಗಿ ಜನಾರ್ದನ ಪೂಜಾರಿ ಇವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 01/2015 ಕಲಂ 379 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ಹಲ್ಲೆ ಪ್ರಕರಣ
- ಮಲ್ಪೆ: ಪಿರ್ಯಾದಿರರಾದ ಮ್ಯಾನೇಜರ್, ಪ್ಯಾಡೈಸ್ ಬೀಚ್ ಹೊಟೇಲ್ ಮಲ್ಪೆ ಕೊಡವೂರು ಗ್ರಾಮ ಇವರು ದಿನಾಂಕ 31/12/2014ರಂದು ರಾತ್ರಿ ಮಲ್ಪೆಯ ಬೀಚ್ ಬಳಿ ಇರುವ ಪ್ಯಾರಡೈಸ್ ಹೊಟೇಲಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನಡೆಯುತ್ತಿದ್ದ ವೇಳೆ ಸ್ಥಳಿಯರಾದ ಆರೋಪಿತರುಗಳಾದ ಬಾಬು ಸಾಲ್ಯಾನ್, ನವೀನ್ ಸಾಲ್ಯಾನ್ ಹಾಗೂ ಮತ್ತಿತರ 10-18 ಜನರ ತಂಡ ಏಕಾಏಕಿಯಾಗಿ ಸದ್ರಿ ಹೊಟೇಲಿಗೆ ನುಗ್ಗಿ ದಾಂಧಲೆ ಮಾಡಿದ್ದಲ್ಲದೇ ಹೊಟೇಲಿನ ನೌಕರರಾದ ಕಾರ್ತಿಕ್, ಮನೀಷ್ ಮತ್ತು ಕಾರ್ಯಕ್ರಮದ ಆಯೋಜಕರಾದ ಸೂರಿ ,ಮತ್ತು ಇತರರಿಗೆ ಹಲ್ಲೆ ಮಾಡಿರುತ್ತಾರೆ. ನಂತರ ಹೊಟೇಲಿನ ಒಳಗೆ ಇದ್ದ ಅಥಿತಿಯವರ ಮೇಲೂ ಹಲ್ಲೆ ಮಾಡಿರುತ್ತಾರೆ. ಹೊರಗೆ ಬಂದು ಸಿಡಿಯುತ್ತಿದ್ದ ಪಟಾಕಿಯನ್ನು ಅಥಿತಿಗಳ ಮೇಲೆ ಎಸೆದು, ಅಥಿತಿಗಳು ಗಾಯಗೊಂಡಿರುತ್ತಾರೆ. ಸದ್ರಿ ಹೊಟೇಲಿನಲ್ಲಿದ್ದ ವಿದೇಶಿಯರಲ್ಲೂ ಭಯದ ವಾತಾವರಣ ಸೃಷ್ಟಿಸಿರುತ್ತಾರೆ ಎಂಬುದಾಗಿ ಪಿರ್ಯಾದಿರರು ನೀಡಿದ ದೂರಿನಂತೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ 01/2015 ಕಲಂ 143, 147, 323, 286, 448, 504, ಜೊತೆಗೆ 149 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
No comments:
Post a Comment