ಅಪಘಾತ ಪ್ರಕರಣ
- ಉಡುಪಿ: ದಿನಾಂಕ: 21/01/2015 ರಂದು ಬೆಳಿಗ್ಗೆ 10.00 ಗಂಟೆಗೆ ಪಿರ್ಯಾದಿದಾರರಾದ ತಿಮ್ಮಮ್ಮ (55) ಗಂಡ:ಚೆನ್ನಪ್ಪಗೌಡ ವಾಸ: ಪ್ರಕಾಶ್ ನಿಲಯ ಕುಂಜಿಬೆಟ್ಟು ಪೋಸ್ಟ್ ಶಿವಳ್ಳಿ ಗ್ರಾಮ ಉಡುಪಿ ತಾಲೂಕು ರವರು ತನ್ನ ಮೊಮ್ಮಗಳಾದ ವೈಷ್ಣವಿ (2) ಳನ್ನು ಕರೆದುಕೊಂಡು ತನ್ನ ಮನೆಯಿಂದ ಹೊರಟು ಅಂಬಾಗಿಲು ಬಳಿ ತನ್ನ ಸಂಬಂಧಿಕರ ಮನೆಗೆ ಹೋಗುವರೇ ಅಂಬಾಗಿಲು ಜಂಕ್ಷನ್ ನಿಂದ ಹಿಂದೆ ಇರುವ ಮೀನು ಮಾರ್ಕೆಟ್ ಬಳಿ ರಾ.ಹೆ. 66 ರ ಪೂರ್ವ ಬದಿಯ ರಸ್ತೆ ಬದಿಯ ಮಣ್ಣು ರಸ್ತೆಯಲ್ಲಿ ಪಶ್ಚಿಮ ಬದಿಯ ರಸ್ತೆ ದಾಟುವರೇ ನಿಂತುಕೊಂಡಿರುವಾಗ ರಾ.ಹೆ. 66 ರಲ್ಲಿ ಸಂತೆಕಟ್ಟೆ ಕಡೆಯಿಂದ ಉಡುಪಿ ಕರಾವಳಿ ಜಂಕ್ಷನ್ ಕಡೆಗೆ ಕೆಎ 20 ಡಬ್ಲ್ಯೂ 6061 ನೇ ಮೋಟಾರು ಸೈಕಲ್ ಸವಾರನು ತನ್ನ ಮೋಟಾರು ಸೈಕಲನ್ನು ಅತೀ ವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ಕೊಂಡು ಬಂದು ಪಿರ್ಯಾಧಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಬಲಕಾಲಿನ ತೊಡೆಗೆ ಒಳ ಜಖಂ ಆಗಿದ್ದಲ್ಲದೇ ಹಣೆಗೆ ಮತ್ತು ಎಡಕಾಲಿಗೆ ರಕ್ತಗಾಯವಾಗಿರುತ್ತದೆ. ವೈಷ್ಣವಿಗೆ ಯಾವುದೇ ಗಾಯವಾಗಿರುವುದಿಲ್ಲ. ಪಿರ್ಯಾದಿದಾರರನ್ನು ಡಿಕ್ಕಿ ಹೊಡೆದ ಮೋಟಾರು ಸೈಕಲ್ ಸವಾರ ಧನುಷ್ ಹಾಗೂ ಅಲ್ಲಿ ಸೇರಿದವರು ಚಿಕಿತ್ಸೆ ಬಗ್ಗೆ ಉಡುಪಿ ಹೈಟೆಕ್ ಅಸ್ಪತ್ರೆಗೆ ದಾಖಲಿಸಿದ್ದಾಗಿದೆ ಎಂಬುದಾಗಿ ತಿಮ್ಮಮ್ಮ ರವರು ನೀಡಿದ ದೂರಿನಂತೆ ಉಡುಪಿ ಸಂಚಾರ ಪೋಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 06/2015 ಕಲಂ: ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
- ಬ್ರಹ್ಮಾವರ: ದಿನಾಂಕ: 16/01/2015 ರಂದು ಸಮಯ ಮಧ್ಯಾಹ್ನ ಸುಮಾರು 2:00 ಗಂಟೆಯಿಂದ 3:15 ಗಂಟೆಯ ಮಧ್ಯದ ಅವಧಿಯಲ್ಲಿ ಉಡುಪಿ ತಾಲೂಕು, ಯಡ್ತಾಡಿ ಗ್ರಾಮದ, ಅಲ್ತಾರು ಕೇದಿಕೆರೆ ಎಂಬಲ್ಲಿ ಪಿರ್ಯಾದಿದಾರರಾದ ದೇವಣ್ಣ ನಾಯ್ಕ(43) ತಂದೆ ಬೆಳ್ಳ ನಾಯ್ಕ ವಾಸ; ಕೇದಿಕೆರೆ ಅಲ್ತಾರು ಯಡ್ತಾಡಿ ಎಂಬವರ ಅಣ್ಣನ ಮಗನಾದ ಸತೀಶ (25)ಎಂಬವರು ಮನೆಯಲ್ಲಿ ಯಾರೂ ಇಲ್ಲದ ವೇಳೆ ಯಾವುದೋ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡು, ಪ್ರಜ್ಞಾಹೀನರಾಗಿದ್ದವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ದಾಖಲಿಸಿದ್ದು, ದಿನಾಂಕ 21/01/2015 ರಂದು ಬೆಳಿಗ್ಗೆ 10:05 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದ್ದು, ಮೃತರು ಕೂಲಿ ಕೆಲಸ ಮಾಡಿಕೊಂಡಿದ್ದು, ವಿಪರೀತ ಅಮಲು ಪದಾರ್ಥ ಸೇವಿಸುತ್ತಿದ್ದು, ಸರಿಯಾಗಿ ಕೆಲಸಕ್ಕೆ ಹೋಗದೇ ಇದ್ದು, ಊರಿನಲ್ಲಿ ಕೈಸಾಲ ಮಾಡಿಕೊಂಡಿದ್ದು ಸಾಲ ತಿರಿಸಲಾಗದೇ ಅದೇ ಚಿಂತೆಯಿಂದ ಅಥವಾ ಜೀವನದಲ್ಲಿ ಬೇರೆ ಯಾವುದೊ ವೈಯಕ್ತಿಕ ಕಾರಣದಿಂದ ನೊಂದು ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ದೇವಣ್ಣ ನಾಯ್ಕ ರವರು ನೀಡಿದ ದೂರಿನಂತೆ ಬ್ರಹ್ಮಾವರ ಪೋಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 03/2015 ಕಲಂ: ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment