ಇತರೇ ಪ್ರಕರಣ
- ಕೋಟ : ಸೋಮಶೇಖರ ಎಂ, ಗಣಿ & ಭೂವಿಜ್ಷಾನ ಇಲಾಖೆ ಉಡುಪಿ ಇವರು ದಿನಾಂಕ:21/01/2015 ರಂದು ಬೆಳಿಗ್ಗೆ 09:00 ಗಂಟೆಗೆ ಉಡುಪಿ ತಾಲೂಕು ಐರೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಳ್ಕುದ್ರು ಗ್ರಾಮದ ಮಾಬುಕಳ ಸೇತುವೆ ಪಕ್ಕದಲ್ಲಿರುವ ಸಾಮಾನ್ಯ ಮರಳು ಗಣಿಗಾರಿಕೆ ಮಾಡುತ್ತಿದ್ದ ಜಾಗವನ್ನು ಪರಿಶೀಲನೆ ನಡೆಸಿದಾಗ, ಯಾವುದೇ ಅಧಿಕೃತ ಪರವಾನಿಗೆ ಹೊಂದದೆ, ಮರಳು ಗಣಿಗಾರಿಕೆ ಮಾಡಿ ಸಾಗಾಟ ಮಾಡಿ ಸರ್ಕಾರಕ್ಕೆ ರಾಜಸ್ವ ವಂಚಿಸಿ ಸರಕಾರಿ ಸ್ವತ್ತುಗಳನ್ನು ಕಳ್ಳತನ ಮಾಡಿದ್ದು ಕಂಡುಬಂದಿದ್ದು ಸದ್ರಿ ಮರಳು ಸಾಗಾಣಿಕೆಗೆ ಬಳಸಿದ ಕೆ.ಎ :20 ಎಸಿ:1254 ,ಕೆ.ಎ:20 ಎಬಿ:666 ,ಕೆಎ 20ಡಿ2908, ಕೆಎ20ಬಿ:7115, ಕೆಎ:20ಎ:8201, ಕೆಎ:20ಬಿ:3937 ಟಿಪ್ಪರ್ ಲಾರಿಗಳನ್ನು ಹಾಗೂ ಅದರಲ್ಲಿದ್ದ ಮರಳನ್ನು ಮಹಜರು ಮುಖೇನಾ ಸ್ವಾಧೀನಪಡಿಸಿಕೊಂಡು, ಸದ್ರಿ ವಾಹನಗಳ ಚಾಲಕರಾದ ಸ್ಸ್ಯಾನಿ, ಹನುಮಂತಪ್ಪ, ಸಂತೋಷ ಪೂಜಾರಿ,ಜಾಯ್ ಆಳ್ವ,ಅಂಬರೀಶ್,ರಜನಿ ಕಾಂತ್ ಎಂಬವರನ್ನು ಲಾರಿಗಳ ಸಮೇತ ಠಾಣೆಗೆ ಹಾಜರುಪಡಿಸಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 11/2015 ಕಲಂ 4(1)(ಎ),21 ಎಂ.ಎಂ. (ಡಿ &ಆರ್) ಕಾಯ್ದೆ 1957,ಕಲಂ:3(1),42,44 ಕರ್ನಾಟಕ ಉಪ ಖಜಾನೆ ರಿಯಾಯಿತಿ ನಿಯಮಾವಳಿ-1994, 379 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ
ಮರಣ ಪ್ರಕರಣ
- ಮಣಿಪಾಲ: ನಳಿನಿ ಪೈ(71)ರವರು ಈ ದಿನ ದಿನಾಂಕ 21.01.15ರಂದು ಬೆಳಿಗ್ಗೆ ಸುಮಾರು 07:35ಗಂಟೆಯ ಸಮಯಕ್ಕೆ ವಿಷ ಪದಾರ್ಥ ಸೇವಿಸಿದ್ದವರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೇ ನಳಿನಿ ಪೈರವರು ಸಂಜೆ 3:45ಗಂಟೆ ಸಮಯಕ್ಕೆ ಮೃತಪಟ್ಟಿದ್ದಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ 03/2015 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಳವು ಪ್ರಕರಣ
- ಮಣಿಪಾಲ: ಅರವಿಂದ ಕುಮಾರ್ ಹೆಡ್, Dept. of Geopolitics, Manipal University ಇವರು ತನ್ನ ಕಚೇರಿಯಲ್ಲಿ ದಿನಾಂಕ 20.01.15ರಂದು ಸಂಜೆ 7:30ಗಂಟೆಗೆ ಇಟ್ಟಿದ್ದ ACER ಕಂಪೆನಿಯ ಲ್ಯಾಪ್‌ಟಾಪ್‌ನ್ನು ದಿನಾಂಕ 21.01.15ರಂದು ಸಂಜೆ 19:25ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳವು ಮಾಡಿಕೊಂಡು ಹೋಗಿದ್ದಾಗಿದೆ. ಕಳವಾದ ಲ್ಯಾಪ್‌ಟಾಪ್‌ನ ಅಂದಾಜು ಮೌಲ್ಯ ಸುಮಾರು 20000/- ಆಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 09/15 ಕಲಂ 457, 380 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ
- ಕೊಲ್ಲೂರು: ದಿನಾಂಕ 21/01/2015 ರಂದು ಪಿರ್ಯಾದಿ ರಾಘವೇಂದ್ರ ಶೆಟ್ಟಿ ಇವರು ತನ್ನ ಬಾಬ್ತು ಕೆ.ಎ 20. ಇ.ಎಫ್. 1029 ನೇ ಮೋಟಾರು ಬೈಕ್ ನಲ್ಲಿ ಆವರ ತಮ್ಮ ಸುಕೇತ್ ಶೆಟ್ಟಿರವರನ್ನು ಬೈಕ್ ನ ಹಿಂಬದಿಯಲ್ಲಿ ಕುಳ್ಳಿರಿಸಿಕೊಂಡು ಕುಂದಾಪುರ – ಕೊಲ್ಲೂರು ರಾಜ್ಯ ಹೆದ್ಧಾರಿಯಲ್ಲಿ ಕೊಲ್ಲೂರು ಕಡೆಗೆ ಬರುವಾಗ ಮಧ್ಯಾಹ್ನ ಸುಮಾರು 12.30 ಗಂಟೆಗೆ ಜಡ್ಕಲ್ ಗ್ರಾಮದ ಅನಿಲ್ ಪ್ರಭು ರವರ ರಬ್ಬರ್ ತೋಟದ ಬಳಿ ತಲುಪುವಾಗ ಎದುರಿನಿಂದ ಅಂದರೆ ಕೊಲ್ಲೂರು ಕಡೆಯಿಂದ ಕುಂದಾಪುರ ಕಡೆಗೆ ಕೆ.ಎ 20 ಸಿ. 6963 ನೇ ಬೊಲೆರೋ ಗೂಡ್ಸ್ ವಾಹನ ಚಾಲಕನು ತನ್ನ ಬಾಬ್ತು ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲ ಭಾಗಕ್ಕೆ ಚಲಾಯಿಸಿಕೊಂಡು ಬಂದು ಪಿರ್ಯಾದಿಯು ಸವಾರಿ ಮಾಡುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿ ಬೈಕ್ ಸವಾರ ಹಾಗೂ ಹಿಂಬದಿ ಕುಳಿತ್ತಿದ್ದ ಸುಕೇತ್ ಶೆಟ್ಟಿ ರವರು ಬೈಕ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿಗೆ ಬಲಕಾಲಿನ ಮುಂಗಾಲಿಗೆ ಮೂಳೆ ಮುರಿತದ ಹಾಗೂ ಬಲ ಕೈ ತೋಳಿಗೆ ತರಚಿದ ಗಾಯವಾಗಿರುತ್ತದೆ. ಹಾಗೂ ಹಿಂಬದಿಯ ಸವಾರ ಸುಕೇತ್ ಶೆಟ್ಟಿಯವರಿಗೆ ಯಾವುದೇ ಪೆಟ್ಟಾಗಿರುವುದಿಲ್ಲ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 05/2015 ಕಲಂ :279, 338 ಐಪಿಸಿ & 134 (A) & (B) IMV ACT ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮಟ್ಕಾ ಜುಗಾರಿ ಪ್ರಕರಣ
- ಕೋಟ: ದಿನಾಂಕ:21/01/2015 ರಂದು 20:15 ಗಂಟೆಗೆ ಚಂದ್ರಕಾಂತ ಅಂಚನ್ ಎ.ಎಸ್.ಐ ಕೋಟ ಪೊಲೀಸ್ ಠಾಣೆ ಇವ ರು ರೌಂಡ್ಸ್ ಕರ್ತವ್ಯಲ್ಲಿರುವಾಗ ದೊರೆತ ಖಚಿತ ವರ್ತಮಾನದಂತೆ ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮದ ಮೀನು ಮಾರ್ಕೆಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವನ್ನಾಗಿರಿಸಿ ಮಟ್ಕಾ ಜುಗಾರಿ ಆಟ ನಡೆಸುತ್ತಿದುದ್ದನ್ನು ಖಚಿತ ಪಡಿಸಿ ಕೊಂಡು 20:30 ಗಂಟೆಗೆ ದಾಳಿ ನೆಡೆಸಿ ಮಟ್ಕಾ ಜುಗಾರಿ ಆಟ ನೆಡೆಸುತ್ತಿದ್ದ ಆರೋಪಿ ಜಯರಾಮ ದೇವಾಡಿಗ ಎಂಬವರನ್ನು ದಸ್ತಗಿರಿ ಮಾಡಿ ಆರೋಪಿಯಿಂದ ಮಟ್ಕಾ ಜುಗಾರಿ ಆಟಕ್ಕೆ ಬಳಸುತ್ತಿದ್ದ ಮಟ್ಕಾ ಚೀಟಿ -1, ಬಾಲ್ ಪೆನ್ನು -1 ನಗದು ರೂ-860/-ನ್ನು ಸ್ವಾಧೀನ ಪಡಿಸಿಕೊಂಡಿರುವುದಾಗಿದೆ ಒಂದನೇ ಆರೋಪಿಯು ಮಟ್ಕಾ ಜುಗಾರಿಯಿಂದ ಸಂಗ್ರಹಿಸಿದ ಹಣವನ್ನು ಮಟ್ಕಾ ಬಿಡ್ಡರ್ ತೆಕ್ಕಟ್ಟೆ ಗ್ರಾಮದ ಚಂದ್ರ ಶೇಖರ ಶೆಟ್ಟಿ ಎಂಬವರಿಗೆ ನೀಡುತ್ತಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 12/2015 ಕಲಂ 78(1)(3) ಕರ್ನಾಟಕ ಪೊಲೀಸ್ ಕಾಯ್ದೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment