ಇತರೇ ಪ್ರಕರಣ
- ಗಂಗೊಳ್ಳಿ: ಗಂಗೊಳ್ಳಿ ಗ್ರಾಮದ ಗಂಗೊಳ್ಳಿ ಮುಖ್ಯ ರಸ್ತೆಯಲ್ಲಿರುವ ಪಿರ್ಯಾದಿ ಜಿ. ವೆಂಕಟೇಶ ಶೆಣೈ ಎಂಬವರು ದಿನಾಂಕ 21/01/2015 ರಂದು ಮಲಗಿರುವಾಗ ಬೆಳಿಗ್ಗೆ ಜಾವ 02-20 ಗಂಟೆಗೆ ಮನೆಯಲ್ಲಿ ಪೆಟ್ರೋಲ್ ವಾಸನೆ ಬಂದು ಎಚ್ಚರಗೊಂಡು ನೋಡಲು ಮನೆಯ ಹೊರಗಡೆ ಬಂದಿದ್ದು ಆ ಸಮಯ ಯಾರೋ ಕಿಡಿಗೇಡಿಗಳಿಬ್ಬರು ಪಿರ್ಯಾದಿದಾರರ ಅಂಗಡಿಯ ಕಂಪೌಂಡಿನ ಗೇಟಿನ ಹೊರಗಡೆ ಪೆಟ್ರೋಲ್ ಸುರಿದು ಪಿರ್ಯಾದಿದಾರರ ಅಂಗಡಿ ಮತ್ತು ಗೋದಾಮಿಗೆ ಬೆಂಕಿಹಚ್ಚಿದ್ದು ಪರಿಣಾಮ ಪಿರ್ಯಾದಿದಾರರ ಅಂಗಡಿ, ಗೋದಾಮು ಮತ್ತು ಕಂಪೌಂಡಿನ ಒಳಗಡೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿಹತ್ತಿ ಅಂಗಡಿ ಮತ್ತು ಗೋದಾಮಿನಲ್ಲಿರುವ ಜೀನಸಿ ಸಾಮಾಗ್ರಿಗಳು ಸುಟ್ಟು ಹೋಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 11/2015 ಕಲಂ 436 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment