ಹಲ್ಲೆ
ಪ್ರಕರಣ
- ಉಡುಪಿ: ಪಿರ್ಯಾದಿ ಸುಧೀರ್ ಇವರು ದಿನಾಂಕ 19/01/2015 ರಂದು ರಾತ್ರಿ ಸುಮಾರು 09:30 ಗಂಟೆ ಸಮಯಕ್ಕೆ ಪಂದುಬೆಟ್ಟು ಬಾರ್‌ನ ಬಳಿ ಇರುವಾಗ ಸುನೀಲ್, ಪುನೀತ್, ಗಣೇಶ ಪಂದುಬೆಟ್ಟು ಹಾಗೂ ಆತನ 4 ತಮ್ಮಂದಿರು ಅಲ್ಲಿಗೆ ಬಂದು ಪಿರ್ಯಾದಿದಾರನ್ನು ಉದ್ದೇಶಿಸಿ ದಿನಾಂಕ 18/01/2015 ರಂದು ನಡೆದ ಬೆಟ್ಟಿಂಗ್‌ನಲ್ಲಿ ಹಣಕೊಡದಿದ್ದರೆ ಏನು ಮಾಡುತ್ತಿ ಎಂದು ಹೇಳಿ ಪಿರ್ಯಾದಿದಾರರ ಕೈಯಲ್ಲಿ ಇದ್ದ ಹೆಲ್ಮೆಟ್‌ನ್ನು ಗಣೇಶ ಎಂಬವರು ಎಳೆದುಕೊಂಡು ಪಿರ್ಯಾದಿದಾರರ ತಲೆಗೆ ಹೊಡೆದಿದ್ದು ಅಲ್ಲದೇ ಉಳಿದವರು ಕೈಯಿಂದ ಪಿರ್ಯಾದಿದಾರರ ಬೆನ್ನಿಗೆ ಎದೆಗೆ ಹಲ್ಲೆ ಮಾಡುತ್ತಾ ಪಿರ್ಯಾದಿದಾರರ ಸ್ನೇಹಿತನಾದ ರಾಜೇಶ ಬರುವುದನ್ನು ನೋಡಿ ಅವರುಗಳು ಅಲ್ಲಿಂದ ಹೋಗಿದ್ದು ಆ ಸಮಯ ಅವರುಗಳು ಪಿರ್ಯಾದಿದರನ್ನು ಉದ್ದೇಶಿಸಿ ಮುಂದೆ ನಿನ್ನನ್ನು ನೋಡಿ ಕೋಳ್ಳುತ್ತೇವೆ ಎಂದು ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 14/15 ಕಲಂ 143,147,148,324,323,506, ಜೊತೆಗೆ149 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಪಡುಬಿದ್ರಿ: ದಿನಾಂಕ. 20.01.2015 ರಂದು ಸಂಜೆ 6:40 ಗಂಟೆಗೆ ನಡ್ಸಾಲು ಗ್ರಾಮದ ಕಂಚಿನಡ್ಕ ಎಂಬಲ್ಲಿ ಟಿ. ಅಬ್ದುಲ್ ಅಜೀಜ್ ರವರ ಅಂಗಡಿ ಬಳಿ ಪಿರ್ಯಾದಿ ಸಂಶುದ್ದೀನ್ ಇವರು ತನ್ನ ದ್ವಿಚಕ್ರ ವಾಹನ ನಂ. ಕೆಎ-20-ಇಇ-4110 ರಲ್ಲಿ ಸವಾರಿ ಮಾಡಿಕೊಂಡು ಬರುತ್ತಿರುವಾಗ ಆರೋಪಿಗಳಾದ ಪೀರು, ಆಶ್ರಫ್ ಮತ್ತು ಅಸ್ಪಾನ್ ರವರು ವಾಹನವನ್ನು ತಡೆದು ನಿಲ್ಲಿಸಿದ್ದು, ಈ ಬಗ್ಗೆ ಪಿರ್ಯಾದಿದಾರರು ಪ್ರಶ್ನಿಸಿದಾಗ ಆರೋಪಿ ಪೀರು ಎಂಬಾತನು ತನ್ನ ಕೈಯಲ್ಲಿದ್ದ ಒಂದು ಕಬ್ಬಿಣದ ರಾಡ್ ನಿಂದ ಹೊಡೆಯಲು ಬಂದಾಗ ಪಿರ್ಯಾದಿದಾರರು ತಪ್ಪಿಸಿಕೊಳ್ಳುವಾಗ ರಾಡ್ ನ ಇನ್ನೊಂದು ಬದಿ ಕಣ್ಣಿನ ಕೆಳಗೆ ಗುದ್ದಿದ ಗಾಯವಾಗಿದ್ದು, ಆಶ್ರಫ್ ಹಾಗೂ ಅಸ್ಪಾನ್ ಎಂಬವರು ಪಿರ್ಯಾದಿದಾರರನ್ನು ಹಿಡಿದು ಕೈಗಳಿಂದ ಹೊಡೆದಿರುತ್ತಾರೆ. ಅಲ್ಲದೇ ಅಲ್ಲಿಂದ ಹೋಗುವಾಗ ಪಿರ್ಯಾದಿದಾರರನ್ನು ಉದ್ದೇಶಿಸಿ ಕೊಲ್ಲದೇ ಬಿಡುವುದಿಲ್ಲವಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 14/15 ಕಲಂ: ಕಲಂ: 323, 324, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಪಡುಬಿದ್ರಿ: ದಿನಾಂಕ. 20.01.2015 ರಂದು 21:00 ಗಂಟೆಗೆ ನಡ್ಸಾಲು ಗ್ರಾಮದ ಕಂಚಿನಡ್ಕ ಮಹಮ್ಮದ್ ಹುಸೈನ್ ಎಂಬವರ ಮನೆಯ ಜಗಲಿಯಲ್ಲಿ ಪಿರ್ಯಾದಿ ಬಶೀರ್ @ ಬೇಟಾ ಬಶೀರ್ ಇವರು ಹುಸೇನ್ ರವರ ಜೊತೆ ಮಾತನಾಡುತ್ತಿರುವಾಗ ಆರೋಪಿಗಳಾದ ಫೀರೋಜ್, ನಿಜಾಮ್, ಇಸುಬು ಮತ್ತು ಇತರರು ಆಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು ಆರೋಪಿಗಳೆಲ್ಲರೂ ಒಟ್ಟು ಸೇರಿ ಪಿರ್ಯಾದಿದಾರರಿಗೆ ಕೈಗಳಿಂದ ಬೆನ್ನಿಗೆ, ಎದೆಗೆ ಕೈಗಳಿಗೆ ಹೊಡೆದು ಕಾಲಿನಿಂದ ತುಳಿದಿರುತ್ತಾರೆ. ಪಿರ್ಯಾದಿದಾರರು ಬೊಬ್ಬೆ ಹಾಕಿದಾಗ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲವಾಗಿ ಎಂಬುದಾಗಿ ಬೆದರಿಕೆ ಹಾಕಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 16/15 ಕಲಂ: ಕಲಂ: 447, 323, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment