ಅಪಘಾತ ಪ್ರಕರಣ
- ಬ್ರಹ್ಮಾವರ: ದಿನಾಂಕ: 20/01/2015 ರಂದು ಬೆಳಿಗ್ಗೆ 09:50 ಗಂಟೆಗೆ ಉಡುಪಿ ತಾಲೂಕು, ಚಾಂತಾರು ಗ್ರಾಮದ ಸತ್ಯನಾಥ ಸ್ಟೋರ್ ಬಳಿ ಫಿರ್ಯಾದುದಾರರಾದ ಸಿ ವಿಶ್ವನಾಥ ಶೆಟ್ಟಿ ತಂದೆ ಸಿ.ಬಿ ನಾರಾಯಣ ಶೆಟ್ಟಿ ವಾಸ ಕೊಕ್ಕರ್ಣೆ, ಕುದಿ ಗ್ರಾಮ ರವರು ತನ್ನ ಕೆಎ-20-ಎನ್-2449 ನೇ ಕಾರನ್ನು ಬ್ರಹ್ಮಾವರ ರಥಬೀದಿ ಕಡೆಯಿಂದ ಬ್ರಹ್ಮಾವರ ಅಕಾಶವಾಣಿ ಕಡೆಗೆ ಚಲಾಯಿಸಿಕೊಂಡು ಬರುತ್ತಿರುವಾಗ ಆರೋಪಿ ಕೃಷ್ಣ ಪೂಜಾರಿ ಎಂಬವರು ತನ್ನ ಕೆಎ-20-ಬಿ-6040 ಪಿಕಪ್ ವಾಹನವನ್ನು ಬ್ರಹ್ಮಾವರ ರಥಬೀದಿ ಕಡೆಯಿಂದ ಬ್ರಹ್ಮಾವರ ಅಕಾಶವಾಣಿ ಕಡೆಗೆ ಅತೀವೆಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಪಿರ್ಯಾದಿದಾರರ ಕಾರನ್ನು ಓವರ್‌ಟೆಕ್ ಮಾಡಿ ಒಮ್ಮೇಲೆ ಎಡಕ್ಕೆ ಚಲಾಯಿಸಿ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಕಾರಿನ ಎದುರು ಭಾಗಕ್ಕೆ ಜಖಂ ಉಂಟಾಗಿರುವುದಾಗಿದೆ ಎಂಬುದಾಗಿ ಸಿ ವಿಶ್ವನಾಥ ಶೆಟ್ಟಿ ರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 16/2015 ಕಲಂ: ಕಲಂ 279 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ
- ಬ್ರಹ್ಮಾವರ: ದಿನಾಂಕ: 17/01/2015 ರ ರಾತ್ರಿ ಉಡುಪಿ ತಾಲೂಕು ಹಾವಂಜೆ ಗ್ರಾಮದ ಬಾಣಬೆಟ್ಟು ಎಂಬಲ್ಲಿ ಸಂಗ್ರಹಿಸಿ ಇಟ್ಟಿದ್ದ ಪಿರ್ಯಾದಿದಾರರಾದ ಶ್ರೀಮತಿ ಸುಧಾ ಡಿ ಶೆಟ್ಟಿ ಬಾಣಬೆಟ್ಟು, ಚಾಂತಾರು ಗ್ರಾಮ ಎಂಬವರಿಗೆ ಸೇರಿದ 4000 ಶಿಲೆ ಕಲ್ಲುಗಳು ಕಳವು ಆಗಿದ್ದು, ಸತೀಶ್ ಪೂಜಾರಿ, ರವಿ ಪೂಜಾರಿ, ಉದಯದಾಸ್, ಪ್ರಸಾದ್ ಪೂಜಾರಿ ಹಾಗೂ ಇತರರು ಕದ್ದು ಶಿಲೆಕಲ್ಲನ್ನು ಲೋಡ್ ಮಾಡಿದ್ದು, ಬಾಣಬೆಟ್ಟು ಬಂಡಸಾಲೆ ಮನೆಯ ಉದಯ ಶೆಟ್ಟಿ, ಕಿಟ್ಟಿ ಶೆಡ್ತಿ ಮತ್ತು ಸುಶೀಲ ಶೆಡ್ತಿ ಎಂಬವರುಗಳು ಸೇರಿಕೊಂಡು ಲಾರಿಗೆ ಲೋಡ್ ಮಾಡಿಸಿ ಕಳವು ಮಾಡಿರುವುದಾಗಿ ಸ್ಥಳೀಯರಲ್ಲಿ ವಿಚಾರಿಸಿದಾಗ ತಿಳಿದು ಬಂದಿರುವುದಾಗಿಯೂ , ಕಳವಾದ ಶಿಲೆಕಲ್ಲಿನ ಒಟ್ಟು ಮೌಲ್ಯ ರೂಪಾಯಿ 48000/- ಆಗಿರುತ್ತದೆ ಎಂಬುದಾಗಿ ಶ್ರೀಮತಿ ಸುಧಾ ಡಿ ಶೆಟ್ಟಿ ರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 17/2015 ಕಲಂ: 379 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment