Friday, January 16, 2015

Daily Crime Reports As on 16/01/2015 at 19:30 Hrs

ಅಪಘಾತ ಪ್ರಕರಣ
  • ಹೆಬ್ರಿ: ಪಿರ್ಯಾದಿದಾರರಾದ ಜಗದೀಶ್ (32), ತಂದೆ:ಕೃಷ್ಣ ಸೆರ್ವೆಗಾರ್ ವಾಸ: ಬೈರಂಪಲ್ಲಿ ಗ್ರಾಮ, ಉಡುಪಿ ತಾಲೂಕು ರವರು ದಿನಾಂಕ 15-01-2015 ರಂದು ತಾನು ಚಲಾಯಿಸುತ್ತಿದ್ದ ಕೆ.ಎ.51.ಬಿ.9650ನೇ ಹನುಮಾನ್ ಸಾರಿಗೆ ಸಂಸ್ಥೆಯ ಬಸ್ಸನ್ನು ಕರ್ತವ್ಯ ಮುಗಿಸಿ ಹೆಬ್ರಿ ಗ್ರಾಮದ ಗಾಂಧಿ ನಗರ ಎಂಬಲ್ಲಿ ಶ್ರೀ ರಾಮ ಕಾಂಪ್ಲೆಕ್ಸ್ ಮುಂಭಾಗದ ರಸ್ತೆ ಬದಿಯಲ್ಲಿ, ರಸ್ತೆ ಬಿಟ್ಟು ಸುಮಾರು 2 ಅಡಿ ದೂರದಲ್ಲಿ ನಿಲ್ಲಿಸಿದ್ದ ಬಸ್ಸಿಗೆ ರಾತ್ರಿ ಸುಮಾರು 7:45 ಗಂಟೆಗೆ ಹೆಬ್ರಿ ಕಡೆಯಿಂದ ಗಾಂಧಿ ನಗರ ಕಡೆಗೆ ಹೋಗುತ್ತಿದ್ದ ಕೆ.ಎ.05.ಎನ್.6759 ನೇ ಮಾರುತಿ ಓಮಿನಿ ಕಾರನ್ನು ಅದರ ಚಾಲಕ ಸತೀಶ್ ಜೋಗಿ ಎಂಬುವವರು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮಾರುತಿ ಓಮಿನಿ ಕಾರು ಚಾಲಕನಿಗೆ ರಕ್ತ ಗಾಯವಾಗಿದ್ದು, ಎರಡೂ ವಾಹನ ಜಖಂ ಗೊಂಡಿರುತ್ತದೆ ಎಂಬುದಾಗಿ ಜಗದೀಶ್  ರವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 06/2015 ಕಲಂ: 279, 337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ
  • ಕಾರ್ಕಳ: ಪಿರ್ಯಾಧಿದಾರರಾದ ಅನೀಲ್ ಶೆಟ್ಟಿ (31) ತಂದೆ: ಪ್ರಭಾಕರ ಶೆಟ್ಟಿ, ವಾಸ: ಅಂಕಜಾರು ಮನೆ, ಗೋಳಿದಿಂಡು. ಇರ್ವತ್ತೂರು ಗ್ರಾಮ, ಕಾರ್ಕಳ ತಾಲೂಕು ಎಂಬವರ ನೆರೆಮನೆಯ 35 ವರ್ಷ ಪ್ರಾಯದ ಉದಯ ಶೆಟ್ಟಿ ಎಂಬವರು ಇರ್ವತ್ತೂರು ಗ್ರಾಮದ ಗೋಳಿದಿಂಡು ಅಂಕಜಾರು ಎಂಬಲ್ಲಿ ತನ್ನ ವಾಸದ ಮನೆಯಲ್ಲಿ ದಿನಾಂಕ 15.01.2015 ರಂದು ರಾತ್ರಿ 11:00 ಗಂಟೆಯಿಂದ ದಿನಾಂಕ: 16.01.2015 ರಂದು ಬೆಳಗ್ಗೆ 05:30 ಗಂಟೆ ನಡುವಿನ ಅವಧಿಯಲ್ಲಿ ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು  ಮನೆಯ ಕೊಟ್ಟಿಗೆಯ ಮರದ ಪಕ್ಕಾಸಿಗೆ ಹಗ್ಗ ಹಾಕಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತ ಪಟ್ಟಿರುವುದಾಗಿದೆ ಎಂಬುದಾಗಿ ಅನೀಲ್ ಶೆಟ್ಟಿ ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ02/2015 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.

No comments: