Friday, January 16, 2015

Daily Crimes Reported as On 16/01/2015 at 17:00 Hrs

ಹಲ್ಲೆ ಪ್ರಕರಣ
  • ಬ್ರಹ್ಮಾವರ : ದಿನಾಂಕ: 15/01/2015 ರಂದು ಸಂಜೆ 6:15 ಗಂಟೆಗೆ ಉಡುಪಿ ತಾಲೂಕು, ಪೆಜಮಂಗರೂ ಗ್ರಾಮದ ಕೊಕ್ಕರ್ಣೆ  ಸರಕಾರಿ ಪದವಿ ಪೂರ್ವ ಕಾಲೇಜಿನ ಗ್ರೌಂಡಿನಲ್ಲಿ ಫಿರ್ಯಾದಿ ನವೀನ ಇವರು ಕಾರ್ತಿಕ್ ಹಾಗೂ ಶಯನ ರವರೊಂದಿಗೆ ಕ್ರಿಕೆಟ್‌ ಆಟ ಆಡಿ ನಿಂತುಕೊಂಡಿರುವಾಗ ಆರೋಪಿಗಳಾದ ರಾಕೇಶ್, ಪ್ರಶಾಂತ, ಧೀರಜ್ ಹಾಗೂ ಶರತ್‌ ರವರು ಕೆಎ-20-ಎಮ್‌ಡಿ -8781 ನೇ ಕಾರಿನಲ್ಲಿ ಬಂದು ರಾಕೇಶನು ಪಿರ್ಯಾದಿದಾರರ ಕೈಹಿಡಿದು ಕ್ರಿಕೆಟ್ ಆಡಿದ ಬಗ್ಗೆ ತಕರಾರು ಅವಾಚ್ಯ ಶಬ್ದಗಳಿಂದ ಬೈದು, ಅಲ್ಲಿಯೇ ಇದ್ದ ಸ್ಟಂಪ್‌ ನಿಂದ ಎಡಕೈಯ ಕೋಲುಕೈಗೆ ಹೊಡೆದು ನೋವು ಉಂಟು ಮಾಡಿದ್ದು ವಿಚಾರಿಸಲು ಬಂದ ಕಾರ್ತಿಕ್ ಹಾಗೂ ಶಯನರಿಗೆ ಪ್ರಶಾಂತ, ಧೀರಜ್ ಹಾಗೂ ಶರತ್‌ ರವರು ಕೈಯಿಂದ ಹೊಡೆದು ಕಾಲಿನಿಂದ ತುಳಿದು ಹಲ್ಲೆ ಮಾಡಿರುವುದಿಲ್ಲದೇ ಜೀವ ಬೆದರಿಕೆ ಒಡ್ಡಿರುವುದಾಗಿದೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 12/2015 ಕಲಂ: 341, 323, 324, 504, 506, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 


ಅಪಘಾತ ಪ್ರಕರಣ
  • ಮಣಿಪಾಲ: ದಿನಾಂಕ 15.01.15ರಂದು ಪಿರ್ಯಾದಿ ಚೇತನ್‌ ಶೆಟ್ಟಿ ಇವರು ತನ್ನ ಬಾಬ್ತು ಮೋಟಾರ್‌ ಸೈಕಲ್‌ ನಂಬ್ರ ಕೆಎ20ಎಕ್ಸ್‌‌9350ನೇದನ್ನು ಸವಾರಿ ಮಾಡಿಕೊಂಡು ಲಕ್ಷ್ಮೀಂದ್ರನಗರದಲ್ಲಿರುವ ಕಾಮತ್‌ ಮೋಟಾರ್ಸ್‌‌ ಕಡೆಯಿಂದ ಉಡುಪಿ ಕಡೆಗೆ ಬರುವರೇ ಸವಾರಿ ಮಾಡಿಕೊಂಡು ಬಂದು ಬೇಕಸ್‌ ಇನ್ ಬಾರ್ ಬಳಿ ಇರುವ ಡಿವೈಡರ್‌ನ ಕೊನೆಯಲ್ಲಿ ಯುಟರ್ನ್‌ ಮಾಡುವಾಗ ಹಿಂದಿನಿಂದ ಉಡುಪಿ ಕಡೆಯಿಂದ ಮಣಿಪಾಲ ಕಡೆಗೆ ಕೆಎ02ಎಮ್‌ಬಿ9247ನೇದರ ಕಾರು ಚಾಲಕನು ತಾನು ಚಲಾಯಿಸಿಕೊಂಡು ಬರುತ್ತಿದ್ದ  ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸಮಯ 11:20ಗಂಟೆಗೆ ಪಿರ್ಯಾದಿದಾರರ ಮೋಟಾರ್ ಸೈಕಲ್‌ಗೆ ಢಿಕ್ಕಿ ಹೊಡೆದನು. ಪರಿಣಾಮ ಪಿರ್ಯಾದಿದಾರರು ಬೈಕ್‌ ಸಮೇತ ರಸ್ತೆಗೆ ಬಿದ್ದಿದ್ದು, ಅವರನ್ನು ಅಲ್ಲಿ ಸೇರಿದ ಜನರು ಹಾಗೂ ಅಪಘಾತವೆಸಗಿದ ಕಾರು ಚಾಲಕನು ಉಪಚರಿಸಿ ಆರೈಕೆ ಮಾಡಿ, ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುವುದಾಗಿದೆ. ಈ ಅಪಘಾತದಿಂದ ಪಿರ್ಯಾದಿದಾರರ ಬಲಕಾಲಿಗೆ ಒಳ ಜಖಂ, ಎಡಕಾಲಿಗೆ ರಕ್ತಗಾಯ ಹಾಗೂ ಒಳಜಖಂ, ಮುಖಕ್ಕೆ ತರಚಿದ ಗಾಯ ಉಂಟಾಗಿದ್ದಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 07/15 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.  
  • ಬೈಂದೂರು: ದಿನಾಂಕ 15-01-2015 ರಂದು ಬೆಳಿಗ್ಗೆ 11-30 ಗಂಟೆಗೆ ಫಿರ್ಯಾದಿ ಶ್ರೀಪಾದ ಗಾಣಿಗ ಎಂಬವರು ಶಿವರಾಜ್ ಪೂಜಾರಿ ಎಂಬುವವರ ಮೋಟಾರ್ ಸೈಕಲ್ ನಲ್ಲಿ ಹಿಂಬದಿ ಸವಾರರಾಗಿ ಹೆರಂಜಾಲಿನಿಂದ ಉಪ್ಪುಂದಕ್ಕೆ ಬವಳಾಡಿ ಮಾರ್ಗವಾಗಿ ಬರುತ್ತಿರುವಾಗ ಫಿರ್ಯಾದಿದಾರರ ಎದುರಿನಿಂದ ಅಂದರೆ ಬವಳಾಡಿ ಕಡೆಯಿಂದ ಉಪ್ಪುಂದ ಕಡೆಗೆ ವೇದನಾಥ ಶೆಟ್ಟಿ ಎಂಬುವವರು KA05HU6510ನೇ ಮೋಟಾರ್ ಸೈಕಲ್ ನಲ್ಲಿ ಸತೀಶ ಪೂಜಾರಿರವರನ್ನು ಹಿಂಬದಿ ಸವಾರನ್ನಾಗಿ ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕಂಚಿಕಾನ್ ರೈಲ್ವೇ ಗೇಟ್ ಸಮೀಪ ಡಾಮಾರು ರಸ್ತೆಯಲ್ಲಿ ಇರುವ ಸ್ಪೀಡ್ ಬ್ರೇಕರ್ ನ್ನು ಗಮನಿಸದೇ, ಸ್ಪೀಡ್ ಬ್ರೇಕರ್ ನ ಹತ್ತಿರ ಬಂದಾಗ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಹಿಂಬದಿ ಸವಾರ ಸತೀಶ ಪೂಜಾರಿವರು ಆಯತಪ್ಪಿ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಅವರ ಹಣೆಗೆ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಮಣಿಪಾಲದ ಕೆ.ಎಮ್‌.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 08/15 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ
  • ಹೆಬ್ರಿ: ಕೃಷ್ಣ ಶೆಟ್ಟಿಗಾರ (48 ವರ್ಷ) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 15-01-2015 ರಂದು ರಾತ್ರಿ  ಸಮಯ ಸುಮಾರು 11:00 ಗಂಟೆಯಿಂದ ದಿನಾಂಕ 16-01-2015 ರಂದು ಬೆಳಿಗ್ಗೆ 6:15 ಗಂಟೆಯ ಮಧ್ಯಾವಧಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ  ಕ್ರಮಾಂಕ  04/2015 ಕಲಂ: 174  ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ದಿನಾಂಕ:12/01/2015 ರಂದು ರಾತ್ರಿ 11:45 ಗಂಟೆಗೆ ಯಾವುದೋ ವಿಷ ಪದಾರ್ಥ ಸೇವಿಸಿ ಅಸ್ವಸ್ಥಳಾದ  ಶ್ರೀಮತಿ ವಿಶಾಲ(30) ಕೆರಾಡಿ ಗ್ರಾಮ ಎಂಬಾಕೆಯನ್ನು ಅದೇ ದಿನ ಮಣಿಪಾಲ ಕೆ.ಎಮ್‌.ಸಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಿನಾಂಕ:13/01/2015 ರಂದು ಬೆಳಿಗ್ಗೆ 03:45 ಗಂಟೆಗೆ ದಾಖಲಿಸಿದ್ದು ಆಕೆ  ದಿನಾಂಕ:16/01/2015 ರಂದು ರಾತ್ರಿ 00:15 ಗಂಟೆಗೆ ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿರುತ್ತಾರೆ. ಆ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ  ಕ್ರಮಾಂಕ  01/2015 ಕಲಂ: 174  ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

No comments: