Saturday, January 17, 2015

Daily Crimes Reported as On 17/01/2015 at 07:00 Hrs

ಅಪಘಾತ ಪ್ರಕರಣ
  • ಪಡುಬಿದ್ರಿ:ದಿನಾಂಕ:16/01/2015 ರಂದು 19:10 ಗಂಟೆಗೆ ನಡ್ಸಾಲು ಗ್ರಾಮದ ಡೌನ್ ಟೌನ್ ಹೋಟೆಲ್‌ನ ಎದುರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪಿರ್ಯಾದಿದಾರರಾದ ಸುರೇಶ (25) ತಂದೆ:ಬಲ್ಲಪ್ಪ ತಿರ್ಗಪ್ಪ ಹೆಲ್ಲಾಡಿ, ವಾಸ:ಕಲ್ಲಾಪುರ, ಪೋಸ್ಟ್ ಮತ್ತು ಗ್ರಾಮ, ಹಾವೇರಿ ತಾಲೂಕು ಮತ್ತು ಜಿಲ್ಲೆರವರ ಚಿಕ್ಕಪ್ಪನವರಾದ ವಿರೂಪಾಕ್ಷ (65) ಎಂಬವರು ಡೌನ್‌ಟೌನ್ ಹೋಟೆಲ್‌ನ ಊಟವನ್ನು ತೆಗೆದುಕೊಂಡು ರಸ್ತೆ ದಾಟಲು ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದಾಗ ಮುಲ್ಕಿ ಕಡೆಯಿಂದ ಕೆಎ 20 ಇಇ 8192 ನೇ ಮೋಟಾರು ಸೈಕಲಿನ ಸವಾರ ಮಿಥುನ್ ಕುಮಾರ್ ಎಂಬವರು ಮೋಟಾರು ಸೈಕಲನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ವಿರೂಪಾಕ್ಷ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ತಲೆಗೆ ರಕ್ತ ಗಾಯವಾಗಿದ್ದು, ಎಡ ಕಾಲಿನ ಮೊಣಗಂಟಿನ ಕೆಳಗೆ ಮೂಳೆ ಮುರಿತದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಮಂಗಳೂರು ಕಡೆಗೆ  ಕರೆದುಕೊಂಡು ಹೋಗಿರುತ್ತಾರೆ.ಈ ಬಗ್ಗೆ ಸುರೇಶರವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ 08/2015 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಹಲ್ಲೆ ಪ್ರಕರಣಗಳು
  • ಕಾರ್ಕಳ ಗ್ರಾಮಾಂತರ:ಪಿರ್ಯಾದಿದಾರರಾದ ರಾಜೇಶ್ ಪೂಜಾರಿ (27) ಅಣ್ಣು ಪೂಜಾರಿ, ವಾಸ:ಕೊರಿಯಾಲ್ ಮನೆ, ನಲ್ಲೂರು ಗ್ರಾಮ,ಕಾರ್ಕಳ ತಾಲೂಕುರವರು ಈ ದಿನ ದಿನಾಂಕ:16/01/2015 ರಂದು ಮದ್ಯಾಹ್ನ 3:30 ಗಂಟೆಗೆ ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ಸ್ವಾಗತ ಗೋಪುರದ ಬಳಿ ತನ್ನ ಕೆ.ಎ 20 ಇಎ 8867 ನೇ ಪಲ್ಸರ್  ಮೋಟಾರ್ ಬೈಕಿನಲ್ಲಿ ನಲ್ಲೂರಿನ ತನ್ನ ಮನೆಯಿಂದ  ಬಜಗೋಳಿ ಕಡೆಗೆ ಅಂಗಡಿಗೆ ಬರುತ್ತಿರುವಾಗ ಆರೋಪಿ ಪ್ರಸಾದ್ ಎಂಬುವನು ಒಂದು ಮೋಟಾರ್ ಸೈಕಲ್ಲಿನಲ್ಲಿ ಬಂದು ರಾಜೇಶ್ ಪೂಜಾರಿರವರ ಬೈಕನ್ನು ಅಡ್ಡಗಟ್ಟಿ “ನೀನು ಮೊನ್ನೆ ನನ್ನನ್ನು ದುರುಗುಟ್ಟಿ ನೋಡುತ್ತಿದ್ದೆ, ನಿನಗೆ ಮಾಡಿಸುತ್ತೇನೆ” ಎಂದು ಹೇಳಿ ಪೋನ್ ಮಾಡಿ, ಸಂತು ಯಾನೆ ಸಂತೋಷ, ಜಯರಾಮ ಯಾನೆ ದಯ್ಯು ಹಾಗೂ ಇತರ 3 ಜನರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದು, ಸ್ಥಳಕ್ಕೆ ಇತರ 2 ಬೈಕಿನಲ್ಲಿ ಬಂದ ಜಯರಾಮ ಮತ್ತು ಸಂತೋಷ ಎಂಬವರು ರಾಜೇಶ್ ಪೂಜಾರಿರವರಿಗೆ “ನೀನು ಪ್ರಸಾದನಿಗೆ ಜೋರು ಮಾಡುತ್ತಿಯಾ” ಎಂದು ಹೇಳಿ ಕೈಯಿಂದ  ಹೊಡೆದು, ಪ್ರಸಾದನು ರಾಜೇಶ್ ಪೂಜಾರಿರವರ ಕುತ್ತಿಗೆಯನ್ನು ಒತ್ತಿ ಹಿಡಿದು, “ನಿನ್ನನ್ನು ಕೊಲ್ಲದೆ ಬಿಡುವುದಿಲ್ಲವೆಂದು ಹೇಳಿದನು”, ಇತರ 3 ಜನರಲ್ಲಿ ಓರ್ವನು ಕಲ್ಲಿನಿಂದ ರಾಜೇಶ್ ಪೂಜಾರಿರವರ ಹಣೆಗೆ ಜಜ್ಜಿ ಮತ್ತೋರ್ವ ಬೆನ್ನಿಗೆ ಗುದ್ದಿದ್ದು ಹಣೆಗೆ  ರಕ್ತಗಾಯ ಹಾಗೂ ಕುತ್ತಿಗೆ ಮತ್ತು ಕೈಗೆ ತರಚಿದ ಗಾಯವಾಗಿ ಚಿಕಿತ್ಸೆ ಬಗ್ಗೆ ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಘಟನೆಗೆ ಪ್ರಸಾದ್ ಮತ್ತು ರಾಜೇಶ್ ಪೂಜಾರಿರವರಿಗೆ 3 ವರ್ಷಗಳ  ಹಿಂದೆ ಹುಡುಗಿಯ ವಿಚಾರದಲ್ಲಿ ಇದ್ದ ಹಳೇ ದ್ವೇಷ ಕಾರಣವಾಗಿರುತ್ತದೆ. ಈ ಬಗ್ಗೆ ರಾಜೇಶ್ ಪೂಜಾರಿರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 07/2015 ಕಲಂ:143,147,148,341,323,324,506 ಜೊತೆಗೆ 149 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಬ್ರಹ್ಮಾವರ:ದಿನಾಂಕ:15/01/2015 ರಂದು ಸಂಜೆ 6:30 ಗಂಟೆಗೆ ಉಡುಪಿ ತಾಲೂಕು, ಪೆಜಮಂಗರೂ ಗ್ರಾಮದ ಕೊಕ್ಕರ್ಣೆ ಸರಕಾರಿ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದ ಕಂಪೌಂಡ್‌ ಬಳಿ ಪಿರ್ಯಾದಿದಾರರಾದ ಪ್ರಶಾಂತ ನಾಯ್ಕ (24) ತಂದೆ:ಸುಬ್ರಾಯ ನಾಯ್ಕ ವಾಸ:ಪ್ರಶಾಂತ ನಿಲಯ, ಕೊಕ್ಕರ್ಣೆ ಹಣಾರ ಬೆಟ್ಟು, ಪೆಜಮಂಗೂರು ಗ್ರಾಮ, ಉಡುಪಿ ತಾಲೂಕುರವರು ರಾಕೇಶ್ ಮತ್ತು ಧೀರಜ್‌ರವರೊಂದಿಗೆ ಮಾತನಾಡುತ್ತಾ ನಿಂತುಕೊಂಡಿರುವಾಗ  ಅಲ್ಲಿಯೇ ಬಳಿಯಲ್ಲಿದ್ದ ಆರೋಪಿಗಳಾದ ಕಾರ್ತಿಕ್, ಗುರುರಾಜ್, ನವೀನ್, ರಾಕೇಶ್‌ರವರಿಗೆ “ನೀವು ಇಲ್ಲಿ ಯಾಕೆ ಕುಳಿತುಕೊಂಡಿದ್ದೀರಿ” ಎಂದು  ಪ್ರಶಾಂತ ನಾಯ್ಕರವರು ತಮಾಷೆಯಾಗಿ ಕೇಳಿದಾಗ ಆರೋಪಿಗಳು ಪ್ರಶಾಂತ ನಾಯ್ಕರವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು “ಇದು ನಿನ್ನ ಅಪ್ಪನ ಜಾಗವ,  ನಾವು ಎಲ್ಲಿ ಬೇಕಾದರೂ  ಕುಳಿತು ಕೊಳ್ಳುತ್ತೇವೆ, ಅದನ್ನು ಕೇಳಲು ನೀನು ಯಾರೆಂದು ಹೇಳಿ?” ಕಾರ್ತಿಕನು ಕೈಯಿಂದ ಪ್ರಶಾಂತ ನಾಯ್ಕರವರ ಕೆನ್ನೆಗೆ ಹೊಡೆದು ಮುಖ, ತುಟಿ, ಎಡ ಕಣ್ಣಿನ ಬಳಿ ಕೈಯಿಂದ ಗುದ್ದಿದ್ದು, ಗುರುರಾಜನು ಕೈಯಿಂದ ಮುಖಕ್ಕೆ ಹೊಡೆದು ಕಾಲಿನಿಂದ ಹೊಟ್ಟೆಗೆ ತುಳಿದು ನವೀನ ಮತ್ತು ರಾಕೇಶನು ಪ್ರಶಾಂತ ನಾಯ್ಕರವರನ್ನು ಗಟ್ಟಿಯಾಗಿ ಹಿಡಿದುಕೊಂಡು ಕೈಯಿಂದ ಮುಖ ಮತ್ತು ಬೆನ್ನಿಗೆ ಹೊಡೆದು ಹಲ್ಲೆ ಮಾಡಿದ್ದು, ಪ್ರಶಾಂತ ನಾಯ್ಕರವರಿಗೆ “ನೀನು ಪೊಲೀಸ್ ಕಂಪ್ಲೇಂಟ್‌ ಬೇಕಾದರೇ ಕೊಡು, ನಿನ್ನ ಮನೆಗೆ ಬಂದು ಹೊಡೆಯುತ್ತೇವೆ” ಎಂದು ಹೇಳಿರುವುದಾಗಿದೆ. ಈ ಬಗ್ಗೆ ಪ್ರಶಾಂತ ನಾಯ್ಕರವರು ನೀಡಿದ ದೂರಿಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 13/2015 ಕಲಂ:341, 323, 504 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮಟ್ಕಾ ಜುಗಾರಿ ಪ್ರಕರಣ
  • ಕುಂದಾಪುರ:ದಿನಾಂಕ:16/01/2015 ರಂದು ಸಂಜೆ 17:30 ಗಂಟೆಗೆ ಕುಂದಾಪುರ ಪೊಲೀಸ್ ಠಾಣಾ ಪೊಲೀಸ್ ಉಪ-ನಿರೀಕ್ಷಕರಾದ ನಾಸೀರ್ ಹುಸೇನ್‌ರವರಿಗೆ  ದೊರೆತ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರಾದ ಸಂತೋಷ, ಮಹಾಲಿಂಗ ಪಾತ್ರೋಟ್, ನಾಗೇಂದ್ರ ಹಾಗೂ ಚಾಲಕ ಲೋಕೇಶರವರೊಂದಿಗೆ ಇಲಾಖಾ ಜೀಪಿನಲ್ಲಿ ಠಾಣೆಯಿಂದ ಹೊರಟು ಕುಂದಾಪುರ ತಾಲೂಕು ಕರ್ಕುಂಜೆ ಗ್ರಾಮದ ನೇರಳಟ್ಟೆ ಸರ್ಕಲ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಸಾರ್ವಜನಿಕರನ್ನು ಸೇರಿಸಿಕೊಂಡು ಮಟ್ಕಾ ಜುಗಾರಿ ಆಟ ಆಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು 18:00 ಗಂಟೆಗೆ ಸಿಬ್ಬಂದಿಯವರ ಸಹಾಯದಿಂದ ದಾಳಿ ನಡೆಸಿದಾಗ, ಅಲ್ಲಿ ಸೇರಿದ ಸಾರ್ವಜನಿಕರು ಓಡಿ ಹೋಗಿದ್ದು ಅವರೊಂದಿಗೆ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದವರಲ್ಲಿ ಓರ್ವ ವ್ಯಕ್ತಿ ಓಡಿ ಹೋಗಿದ್ದು ಇನ್ನೊಬ್ಬ ವ್ಯಕ್ತಿಯನ್ನು ಸಿಬ್ಬಂದಿಯವರ ಸಹಾಯದಿಂದ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ 1) ಕೃಷ್ಣ ಪೂಜಾರಿ, (50) ತಂದೆ:ದಿವಂಗತ ಗಣಪ ಪೂಜಾರಿ, ವಾಸ:ಸುಜಾತ ನಿಲಯ, ಜಾಡ್ಕಟ್ಟು, ನೇರಳೆಕಟ್ಟೆ, ಕರ್ಕುಂಜೆ ಗ್ರಾಮ, ಕುಂದಾಪುರ ತಾಲೂಕು 2)ಆಸೀರ್,(34) ತಂದೆ:ಹುಸೇನ್ ಸಾಹೇಬ್, ವಾಸ:ಜನತಾ ಕಾಲೋನಿ, ಮೂಡು ಗೋಪಾಡಿ, ಗೋಪಾಡಿ ಗ್ರಾಮ, ಕುಂದಾಪುರ ತಾಲೂಕು ಎಂಬುದಾಗಿ ತಿಳಿಸಿದ್ದು ಇವರುಗಳು ಸಾರ್ವಜನಿಕರಿಂದ ಸ್ವಂತ ಲಾಭಕ್ಕಾಗಿ ಮಟ್ಕಾ ಜುಗಾರಿ ಆಟದ ಬಗ್ಗೆ ಹಣವನ್ನು ಪಣವಾಗಿ ಸ್ವೀಕರಿಸಿ ಮಟ್ಕಾ ನಂಬ್ರ ಬರೆದ ಚೀಟಿಯನ್ನು ಬರೆದುಕೊಡುತ್ತಿರುವುದಾಗಿ ಹೇಳಿದವರನ್ನು, ದಸ್ತಗಿರಿ ಮಾಡಿ ಮಟ್ಕಾ ಆಟಕ್ಕೆ ಬಳಸಿದ ನಗದು ರೂಪಾಯಿ 720/= ಬಾಲ್ ಪೆನ್ನು-1, ಮತ್ತು ಮಟ್ಕಾ ನಂಬ್ರ ಬರೆದ ಚೀಟಿ-1 ನ್ನು ಮತ್ತು ಸಿಮ್ ಕಾರ್ಡ್ ಸಮೇತವಾಗಿರುವ forme ಮೊಬೈಲ್ ಪೋನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 11/2015 ಕಲಂ 78 (i) (iii) ಕೆ.ಪಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: