ಜೀವ ಬೆದರಿಕೆ ನೀಡಿದ ಪ್ರಕರಣ
- ಹೆಬ್ರಿ: ಪಿರ್ಯಾದಿದಾರರಾದ ಶ್ರೀಮತಿ ಶಾಂಭವಿ ಶೆಡ್ತಿ (60) ತಂದೆ: ಸುಂದರ್, ವಾಸ: ಮಾತಿಬೆಟ್ಟು ಬಂಗಲೆ, ಮುನಿಯಾಲ, ವರಂಗ ಗ್ರಾಮ, ಕಾರ್ಕಳ ತಾಲೂಕು ಎಂಬವರು ತನ್ನ ಮಗಳು ಮತ್ತು ಅವಳ ಮಾವನೊಂದಿಗೆ ದಿನಾಂಕ 06-01-2015 ರಂದು ಮಧ್ಯಾಹ್ನ 12:10 ಗಂಟೆಗೆ ಪಿರ್ಯಾದಿದಾರರ ಸರ್ವೆ ನಂ. 34/1ಪಿ1 ರಲ್ಲಿನ 8 ಎಕ್ರೆ ತೋಟವಿದ್ದ ಜಾಗಕ್ಕೆ ಹೋಗುವಾಗ ಅಲ್ಲಿ ಪಿರ್ಯಾದಿದಾರರ ತಮ್ಮ ಸೀತಾರಾಮ ಕಡಂಬ ಮತ್ತು ಇತರರು ಪಿರ್ಯಾದಿದರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿದ್ದನ್ನು ವಿಚಾರಿಸಲು ಹೋದ ಪಿರ್ಯಾದಿದಾರರಿಗೆ ಅವರ ತಮ್ಮ ಹೀನಾಯವಾಗಿ ಬೈದು ನಿಮ್ಮ ಕೈ-ಕಾಲು ಮುರಿದು ಹಾಕುತ್ತೇನೆ ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ಶ್ರೀಮತಿ ಶಾಂಭವಿ ಶೆಡ್ತಿ ರವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 03/2015 ಕಲಂ. 447, 504, 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
- ಹೆಬ್ರಿ: ಪಿರ್ಯಾದಿದಾರರಾದ ಶ್ಯಾಮ ಶೆಟ್ಟಿ (53) ತಂದೆ: ಕಾಡ್ಯ ಶೆಟ್ಟಿ ವಾಸ: ಮಹಾಬಲಾಡಿ ಮನೆ, ಬಲ್ಲಾಡಿ, ಮುದ್ರಾಡಿ ಗ್ರಾಮ, ಕಾರ್ಕಳ ತಾಲೂಕು ಎಂಬವರ ಮಾವ ಬಾಬು ಶೆಟ್ಟಿ (65) ಎಂಬವರು ಸುಮಾರು ವರ್ಷಗಳಿಂದ ರಕ್ತದೊತ್ತಡ ಖಾಯಿಲೆಯಿಂದ ಬಳಲುತ್ತಿದ್ದು, ಖಾಯಿಲೆ ಬಗ್ಗೆ ಚಿಕಿತ್ಸೆ ಕೊಡಿಸಿದ್ದರೂ ಗುಣಮುಖರಾಗದೇ ಖಿನ್ನತೆಗೊಳಗಾಗಿದ್ದು, ಇದೇ ಉದ್ದೇಶದಿಂದ ಮೃತರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 06-01-2015 ರಂದು ಮುಂಜಾನೆ ಸಮಯ 4:00 ಗಂಟೆಯಿಂದ 6:30 ಗಂಟೆಯ ಮದ್ಯದ ಅವಧಿಯಲ್ಲಿ ಪಿರ್ಯಾದಿದಾರರ ಮನೆಯ ಹತ್ತಿರ ಇರುವ ತೋಟದಲ್ಲಿರುವ ಗೇರು ಮರದ ಕೊಂಬೆಗೆ ಲುಂಗಿಯ ಒಂದು ತುದಿಯನ್ನು ಕಟ್ಟಿ, ಇನ್ನೊಂದು ತುದಿಯನ್ನು ತನ್ನ ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಶ್ಯಾಮ ಶೆಟ್ಟಿ ರವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 02/2015 ಕಲಂ 174 sಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment