ವಂಚನೆ ಪ್ರಕರಣ
- ಮಣಿಪಾಲ: ಆಪಾದಿತ ಯು.ನಜೀರ್ ಆಹಮ್ಮದ್ ನು ದಿನಾಂಕ 29-04-13ರಂದು Hyundai Verna ಕಾರು ಖರೀದಿಸುವರೇ ವಿಜಯ ಬ್ಯಾಂಕ್, ಮಣಿಪಾಲ ಬ್ರಾಂಚ್‌ನಿಂದ 10,00,000/-ರೂ ಸಾಲವನ್ನು ಪಡೆದುಕೊಂಡಿದ್ದು, ಸಾಲ ಪಡೆದುಕೊಂಡ ಬಳಿಕ ಆಪಾದಿತನು ಬ್ಯಾಂಕಿಗೆ ಕರಾರಿನಲ್ಲಿ ನಮೂದಿಸಿದಂತೆ ಸಾಲವನ್ನು ಮರುಪಾವತಿಸದೆ ಇದ್ದು, ಅಲ್ಲದೆ ವಾಹನವನ್ನು ಹಾಜರುಪಡಿಸುವಂತೆ ಹಲವಾರು ಬಾರಿ ನೋಟಿಸನ್ನು ನೀಡದರೂ ಕೂಡ ಅದಕ್ಕೆ ಉತ್ತರಿಸದೇ ಬ್ಯಾಂಕಿನಿಂದ ಪಡೆದ ಸಾಲವನ್ನು ಮರುಪಾವತಿಸದೆ ಮೋಸ ಮಾಡಿದ್ದಾಗಿರುತ್ತದೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 04/15 ಕಲಂ 403, 406, 418, 420 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಳವು ಪ್ರಕರಣ
- ಮಣಿಪಾಲ: ಪಿರ್ಯಾದಿ ದೇವಿಚರಣ್ ಕಾವಾ ಇವರು ಕೆಎ20ಡಬ್ಲ್ಯೂ7575ನೇ ಮೋಟಾರ್ ಸೈಕಲ್‌ನ್ನು ಹೊಂದಿದ್ದು, ಸದ್ರಿ ಮೋಟಾರ್ ಸೈಕಲ್‌ನ್ನು ಅದನ್ನು ಉಪಯೋಗಿಸುತ್ತಿದ್ದ ಹುಡುಗ ಜಗದೀಶರವರು ಮಣಿಪಾಲ ಅನಂತನಗರ ಮನೆ ನಂ.100ನೇದರ ಗೇಟಿನ ಒಳಗಡೆ ದಿನಾಂಕ 22.12.14ರಂದು ರಾತ್ರಿ ಸುಮಾರು 23:30ಗಂಟೆಗೆ ನಿಲ್ಲಿಸಿದ್ದು, ಮರುದಿನ ಬೆಳಿಗ್ಗೆ 06:00ಗಂಟೆಗೆ ಎದ್ದು ನೋಡಿದಾಗ ಮೋಟಾರ್ ಸೈಕಲ್ ನಿಲ್ಲಿಸಿದ್ದ ಸ್ಥಳದಲ್ಲಿ ಇಲ್ಲದೆ ಇದ್ದು, ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಈತನಕ ಪತ್ತೆಯಾಗಿರುವುದಿಲ್ಲ. ಸದ್ರಿ ಮೋಟಾರ್ ಸೈಕಲ್‌ನ್ನು ಯಾರೋ ಕಳ್ಳರು ನಿಲ್ಲಿಸಿದ್ದ ಸ್ಥಳದಿಂದ ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಮೋಟಾರ್ ಸೈಕಲ್‌ನ ಅಂದಾಜು ಮೌಲ್ಯ ಸುಮಾರು 25,000/-ರೂ ಆಗಿರುತ್ತದೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 05/15 ಕಲಂ 379 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment