Tuesday, January 06, 2015

Daily Crime Reported As On 06/01/2015 At 07:00Hrs

ಹಲ್ಲೆ ಪ್ರಕರಣ
  • ಕೋಟ: ಪಿರ್ಯಾದಿ ದಿನೇಶ ಶೆಟ್ಟಿ  ಇವರು ದಿನಾಂಕ 01/01/2015 ರಂದು ಬೆಳಗಿನ ಜಾವ 01:00 ಗಂಟೆಗೆ ಬೇಳೂರು ಗ್ರಾಮದ ದೇಲಟ್ಟುವಿನ ಚಾವಡಿ ಮನೆ ಎಂಬಲ್ಲಿನ  ಮನೆಯಲ್ಲಿ ಮಲಗಿರುವಾಗ  ಆರೋಪಿಗಳಾದ  ರಕ್ಷೀತ್ ಶೆಟ್ಟಿ , ರಾಜೇಶ್, ಸುಮಂತ ಎಂಬವರು ಪಿರ್ಯಾದಿದಾರರ ಮನೆಯ ಮುಂದಿನ ರಸ್ತೆಯಲ್ಲಿ ಹೊಸ ವರ್ಷದಂದು ಕರ್ಕಶ ಶಬ್ದವನ್ನು ಮಾಡುತ್ತಿದ್ದು ಪಿರ್ಯಾದಿದಾರರು ಮನೆಯ ಹೊರಗೆ ಬಂದು ಆರೋಪಿಗಳಲ್ಲಿ ಯಾಕೆ  ನಮ್ಮ ಮನೆಯ ಮುಂದೆ ಕಿರುಚುತ್ತಿರಿ ಎಂದು ಕೇಳಿದಕ್ಕೆ ಆರೋಪಿಗಳು ಪಿರ್ಯಾದಿದಾರರ ಮೇಲೆ  ಕೈಹಾಕಿ ದೂಡಿದ ಪರಿಣಾಮ ಆಯತಪ್ಪಿ ಬಿದ್ದು  ಎಡ ಕೈಯ ಅಂಗೈಗೆ ಪೆಟ್ಟಾಗಿರುತ್ತದೆ ಅಲ್ಲದೇ  ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ಹೋಗಿರುತ್ತಾರೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಅಪರಾಧ ಕ್ರಮಾಂಕ 02/2015 ಕಲಂ 323,504.34  ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕೋಟ: ಪಿರ್ಯಾದಿ ರಕ್ಷೀತ್ ಶೆಟ್ಟಿ ಇವರು  ದಿನಾಂಕ 01/01/2015 ರಂದು ಬೆಳಗಿನ ಜಾವ 01:00 ಗಂಟೆಗೆ   ತನ್ನ ಸ್ನೇಹಿತರಾದ  ರಾಜೇಶ್, ಸುಮಂತ ರವರೊಂದಿಗೆ ಬೇಳೂರು ಗ್ರಾಮದ ದೇಲಟ್ಟು  ದಿನೇಶ ಶೆಟ್ಟಿ ಯವರ ಮನೆಯ ಹಿಂಬದಿಯ ಡಾಂಬರು ರಸ್ತೆಯಲ್ಲಿ ಹೊಸ ವರ್ಷದ ಶುಭಾಶಯಗಳನ್ನು ಮಾಡುತ್ತಾ ಮಾತನಾಡುತ್ತಿರುವಾಗ ಆರೋಪಿ ದಿನೇಶ ಶೆಟ್ಟಿ ಎಂಬವರು  ಏಕಾಏಕಿ ಪಿರ್ಯಾದಿದಾರರ ಬಳಿ ಬಂದು ನಮ್ಮ ಮನೆಯ ಹತ್ತಿರ ಯಾಕೆ ಮಾತನಾಡುತ್ತಿರಿ ಬೇರೆ ಜಾಗವಿಲ್ಲವೆ ಎಂದು ಹೇಳಿ ಪಿರ್ಯಾದಿದಾರರಿಗೆ ಹಾಗೂ ರಾಜೇಶ್, ಸುಮಂತ ರವರಿಗೆ ಕೈಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದುದ್ದಾಗಿದೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಅಪರಾಧ ಕ್ರಮಾಂಕ 03/2015 ಕಲಂ 323,504 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಸುಲಿಗೆ ಪ್ರಕರಣ
  • ಕಾರ್ಕಳ ಗ್ರಾಮಾಂತರ : ದಿನಾಂಕ: 05/01/2015 ರಂದು ಸಂಜೆ 5-30 ಗಂಟೆ ಸಮಯಕ್ಕೆ ಪಿರ್ಯಾದಿ ಸಿಸಿಲಿಯಾ ಡಿಸೋಜಾ ಇವರು ಬೆಳ್ಮಣ್ ಗ್ರಾಮದ ಕೋಡಿಮಾರ್ ಬಸ್ ಸ್ಟಾಪ್ ನಲ್ಲಿ ಬಸ್ಸಿನಿಂದ ಇಳಿದು ರಸ್ತೆ ಬದಿಯಲ್ಲಿ ತನ್ನ ಮನೆ ಕಡೆಗೆ ನೆಡೆದುಕೊಂಡು ಹೋಗುತ್ತಿದ್ದಾಗ ಅವರ ಹಿಂದಿನಿಂದ ಬಂದ ಓರ್ವ ಅಪರಿಚಿತ ಮೋಟಾರು ಸೈಕಲ್ ಸವಾರನ್ನು ಆತನ ಮೋಟಾರು ಸೈಕಲ್ ನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಹೆಲ್ಮೇಟ್ ನ್ನು ಬೈಕ್ ನಲ್ಲಿ ಇಟ್ಟು ಪಿರ್ಯಾದಿದಾರರ ಬಳಿ ಬಂದು ತುಳು ಬಾಷೆಯಲ್ಲಿ ಫೆರ್ನಾಂಢಿಸ್ ರವರ ಮನೆ ಎಲ್ಲಿ, ದೊಡ್ಡ ದ್ವಾರ ಗೇಟ್ ಎಲ್ಲಿ ಎಂದು ಕೇಳಿದ್ದು,  ಅದಕ್ಕೆ ಫಿರ್ಯಾಧಿದಾರರು ಅವನಲ್ಲಿ   ತುಳುವಿನಲ್ಲಿ ಇಲ್ಲಿ ಫೆರ್ನಾಂಡಿಸ್ ರವರ ಮನೆ ಇಲ್ಲ ದೊಡ್ಡ ದ್ವಾರ ಗೇಟ್ ಇಲ್ಲ  ಎಂದು ಹೇಳಿ ಮುಂದಕ್ಕೆ ಒಬ್ಬಳೇ ಅವರ ಮನೆ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಂತೆ ಅದೇ ವ್ಯಕ್ತಿಯು ತಲೆಗೆ ಹೆಲ್ಮೇಟ್ ಧರಿಸಿ, ಅವರ ಹಿಂದಿನಿಂದ ಬಂದು ಅವರ ಕುತ್ತಿಗೆಯಲ್ಲಿ ಧರಿಸಿದ್ದ ಅವರ  ಬಾಬ್ತು ಕೆಂಪು ಮಣಿ ಇರುವ ಹವಳದ ಬಂಗಾರದ ಸರವನ್ನು ಎಳೆದು ಅಪಹರಿಸಿ, ಮೋಟಾರು ಸೈಕಲ್ ನಲ್ಲಿ ಪರಾರಿಯಾಗಿರುವುದಾಗಿದೆ ಆರೋಪಿಯು ಎಳೆದು ಅಪಹರಿಸಿದ ಬಂಗಾರವು ಸುಮಾರು ಮೂರುವರೆ ಪವನ್ ತೂಕವಿದ್ದು, ಮೌಲ್ಯ ಸುಮಾರು ರೂ:  70,000/- ಆಗಬಹುದು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ 04/2015, ಕಲಂ: 392 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ಇತರೇ ಪ್ರಕರಣ

  • ಬ್ರಹ್ಮಾವರ: ತಾಲೂಕು ಯಡ್ತಾಡಿ ಗ್ರಾಮದ ಗರಿಕೆ ಮಠ ಎಂಬಲ್ಲಿ ಸರ್ವೆ ನಂ: 145 ಕಲ್ಲುಗಣಿ ಗುತ್ತಿಗೆ ಇರುವ ಜಾಗದ ಪಶ್ವಿಮಕ್ಕೆ ಶ್ರೀಮತಿ ರಮಣಿ ಎಂಬವರು ವಾಸವಿರುವ ಮನೆಯಿಂದ 50 ಮೀಟರ್ ದೂರದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದಾಗ ದಿನಾಂಕ: 05/01/2015 ರಂದು ಸಂಜೆ 4:00 ಗಂಟೆ ಸಮಯದಲ್ಲಿ ಕೆಲಸಗಾರರು ಓಡಿಹೋಗಿದ್ದು ಮಾಹಿತಿ ಸಂಗ್ರಹಿಸಿದಾಗ ಸುಮಾರು 2 ತಿಂಗಳಿನಿಂದ ಸುಧಾಕರ ಶೆಟ್ಟಿ ಎಂಬವರು  ನಡೆಸುತ್ತಿದ್ದಾನೆಂದು ತಿಳಿದು ಬಂದಿದ್ದು ,  ನಿಯಮಾನುಸಾರ ಗುತ್ತಿಗೆ ಮಂಜೂರು ಮಾಡಿಕೊಂಡು ರಾಜಸ್ವ ಪಾವತಿಯ ಗಣಿಗಾರಿಕೆ ನಡೆಸಬೇಕೆಂದು ತಿಳಿದಿದ್ದರೂ ಸರ್ಕಾರಕ್ಕೆ ರಾಜಸ್ವ ವಂಚಿಸಿ ಅಕ್ರಮ ಕಲ್ಲುಗಣಿಗಾರಿಕೆ ಮಾಡುತ್ತಿರುವ ಬಗ್ಗೆ ಸೋಮಶೇಖರ ಎಂ, ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಡುಪಿ ಇವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಕ್ರಮಾಂಕ 01/2015 ಕಲಂ:MMRD 4(1)A, 21 & ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಾವಳಿ1194 ರ ನಿಯಮ 3(1),42,43,44ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.  

No comments: