ಅಪಘಾತ ಪ್ರಕರಣ
- ಬ್ರಹ್ಮಾವರ : ದಿನಾಂಕ: 05/01/2015 ರಂದು 18:40 ಗಂಟೆಗೆ ಪಿರ್ಯಾದಿ ಭೋಜ ಪೂಜಾರಿ ಇವರು ತಮ್ಮ ಬಾಬ್ತು ಮೊಪೆಡ್ ನಂ: ಕೆಎ-20-ಇಇ-5205 ರಲ್ಲಿ ಉಮೇಶ್ ಪೂಜಾರಿ ಎಂಬವರೊಂದಿಗೆ ಕೊಕ್ಕರ್ಣೆ ಕಡೆಯಿಂದ ಕಾಡೂರು ಕಡೆಗೆ ಹೋಗುತ್ತಾ ಕೊಕ್ಕರ್ಣೆ ಸೇತುವೆ ಬಳಿ ತಲುಪುವಾಗ ಕಾಡೂರು ಕಡೆಯಿಂದ ಕೊಕ್ಕರ್ಣೆ ಕಡೆಗೆ ಆಪಾದಿತ ಕೆಎ-20-ಸಿ-2299 ನೇ ದನ್ನು ಅದರ ಚಾಲಕ ದಿನೇಶ್ ಎಂಬವನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೊಪೆಡ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಬಲ ಭುಜದ ಕೆಳಗೆ ತೀವ್ರ ರಕ್ತಗಾಯವಾಗಿದ್ದು ಸಹ ಸವಾರ ಉಮೇಶ್ ಪೂಜಾರಿಗೆ ತಲೆಗೆ ಮತ್ತು ಬಲ ಭುಜಕ್ಕೆ ರಕ್ತಗಾಯ ಉಂಟಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಕ್ರಮಾಂಕ 03/15 ಕಲಂ 279, 337, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಬೈಂದೂರು: ದಿನಾಂಕ 06-01-2015 ರಂದು ಬೆಳಿಗ್ಗೆ ಸುಮಾರು 11-30 ಗಂಟೆಗೆ ಕುಂದಾಪುರ ತಾಲೂಕು ಶೀರೂರು ಗ್ರಾಮದ ಶೀರೂರು ಮಾರ್ಕೇಟ್ ಎದುರಿನ ರಾ.ಹೆ 66 ರ ಪಶ್ಚಿಮ ಬದಿಯಲ್ಲಿ ಪಾದಚಾರಿ ಸುಧಾಕರಶೆಟ್ಟಿಯವರು ರಾ.ಹೆ 66 ನ್ನು ದಾಟುವರೆ ನಿಂತುಕೊಂಡಿರುವಾಗ ಬೈಂದೂರು ಕಡೆಯಿಂದ ಭಟ್ಕಳ ಕಡೆಗೆ ಕೆಎ-20-ಸಿ-5076 ನೇ ಲಾರಿ ಚಾಲಕನು ಆತನ ಬಾಬ್ತು ಲಾರಿಯನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸುಧಾಕರ ಶೆಟ್ಟಿಯವರಿಗೆ ಢಿಕ್ಕಿ ಹೊಡೆದ ಪರಿಣಾಮ, ಸುಧಾಕರ ಶೆಟ್ಟಿಯವರು ರಸ್ತೆಗೆ ಬಿದ್ದು ತಲೆ ಮತ್ತು ಕಾಲಿಗೆ ಪೆಟ್ಟಾಗಿರುತ್ತದೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 04/15 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಕಾರ್ಕಳ: ದಿನಾಂಕ 05/01/2014 ರಂದು 17:15 ಗಂಟೆಗೆ ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ನೆಲ್ಲಿಗುಡ್ಡೆ ಸೇತುವೆಯ ಬಳಿಯಲ್ಲಿ ಫಿರ್ಯಾದಿ ಗುಣಪಾಲ ಇವರು ತನ್ನ ಬಾಬ್ತು KA20EA3151 ನೇ ನಂಬ್ರದ ಮೋಟಾರು ಸೈಕಲ್ಲಿನಲ್ಲಿ ತನ್ನ ಸಹೋದ್ಯೋಗಿ ಸಂತೋಷ್ ಎಂಬವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಕಳತ್ರಪಾದೆ ಕಡೆಯಿಂದ ಕಾರ್ಕಳ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವಾಗ ಕಾರ್ಕಳದಿಂದ ಕಳತ್ರಪಾದೆ ಕಡೆಗೆ KA20C4221 ನೇ ನಂಬ್ರದ ಟಿಪ್ಪರ್ ಲಾರಿಯೊಂದನ್ನು ಅದರ ಚಾಲಕ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡಿಕೊಂಡು ತೆರಳುತ್ತಿದ್ದ ಮೋಟಾರು ಸೈಕಲ್ಲಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಪಿರ್ಯಾದಿದಾರರು ಸಹ ಸವಾರರೊಂದಿಗೆ ಮೋಟಾರು ಸೈಕಲ್ ಸಹಿತ ರಸ್ತೆಗೆ ಬಿದ್ದು ಅವರಿಬ್ಬರಿಗೂ ಸಾಮಾನ್ಯ ಸ್ವರೂಪದ ಗಾಯಗಳಾಗಿರುತ್ತದೆ. ಪಿರ್ಯಾದಿದಾರರ ಮೋಟಾರು ಸೈಕಲ್ಲಿಗೆ ಡಿಕ್ಕಿ ಹೊಡೆದ ಟಿಪ್ಪರ್ ಲಾರಿಯ ಚಾಲಕನು ಅಪಘಾತದಿಂದ ಗಾಯಗೊಂಡ ಗಾಯಾಳುಗಳನ್ನು ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೂ ಸಾಗಿಸದೇ ಅಪಘಾತದ ಮಾಹಿತಿಯನ್ನು ಪೊಲೀಸ್ ಠಾಣೆಗೂ ನೀಡದೇ ಸ್ಥಳದಿಂದ ಪರಾರಿಯಾಗಿರುತ್ತಾನೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 04/15 ಕಲಂ 279, 337 ಐಪಿಸಿ ಮತ್ತು ಕಲಂ 134 (ಎ) (ಬಿ) ಮೋಟಾರು ವಾಹನ ಕಾಯ್ದೆ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment