ಇತರೇ ಪ್ರಕರಣ
- ಕಾರ್ಕಳ: ಕಬ್ಬಾಳ್‌ರಾಜ್ ಹೆಚ್.ಡಿ. ಪೊಲೀಸ್ ಉಪ ನಿರೀಕ್ಷಕರು, ಕಾರ್ಕಳ ನಗರ ಪೊಲೀಸ್ ಠಾಣೆ ಇವರು ದಿನಾಂಕ 05/06-01-2015 ರಂದು ಠಾಣಾ ಸರಹದ್ದಿನಲ್ಲಿ ತಮ್ಮ ಸಿಬ್ಬಂದಿಯವರೊಂದಿಗೆ ಇಲಾಖಾ ವಾಹನದಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯ ನಿರ್ವಹಿಸುತ್ತಿದ್ದಾಗ, ದಿನಾಂಕ 06/01/2015 ರಂದು ಬೆಳಗ್ಗಿನ ಜಾವ 04:30 ಘಂಟೆ ಸಮಯಕ್ಕೆ ಕಾರ್ಕಳ ತಾಲೂಕಿನ ಕಸಬ ಗ್ರಾಮದ ಕಾರ್ಕಳ ಶ್ರೀ ವಿಶ್ವೇಷ್ವರ ವೇಣುಗೋಪಾಲ ದೇವಸ್ಥಾನ ಬಳಿಯಲ್ಲಿ ಅಪಾದಿತ ರಮೇಶ ಸಮಗಾರ, ಪ್ರಾಯ 37 ವರ್ಷ, ತಂದೆ: ಚಂದು ಸಮಗಾರ, ವಾ¸À: ಪತ್ತೊಂಜಿಕಟ್ಟೆ, ಕಾರ್ಕಳ ಕಸಬ ಗ್ರಾಮ, ಕಾರ್ಕಳ ತಾಲೂಕು ಈತನು ಸಂಶಯಾಸ್ಪದ ರೀತಿಯಲ್ಲಿ ತನ್ನ ಇರುವಿಕೆಯನ್ನು ಮರೆಮಾಚಿ ನಿಂತಿದ್ದು ಸದರಿ ವ್ಯಕ್ತಿಯು ರಾತ್ರಿಯ ಸಮಯ ಅ ವೇಳೆಯಲ್ಲಿ ಯಾವುದೋ ಬೇವಾರಂಟು ತಕ್ಷೀರು ನಡೆಸುವ ಉದ್ದೇಶದಿಂದ ತನ್ನ ಇರುವಿಕೆಯನ್ನು ಮರೆಮಾಚಿಕೊಂಡು ಹೊಂಚು ಹಾಕುತ್ತಿರುವುದಾಗಿ ಅನುಮಾನಗೊಂಡು ಆತನ ವಿರುದ್ದ ಠಾಣಾ ಅಪರಾಧ ಕ್ರಮಾಂಕ 03/15 ಕಲಂ 110 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಕಾಪು: ದಿನಾಂಕ 06.01.2015 ರಂದು ಪಿರ್ಯಾದಿ ರಾಘವೇಂದ್ರ ಭಟ್ ಕೆ ಇವರು ತನ್ನ ಬಾಬ್ತು ಸ್ಕೂಟರ್ ನಂಬ್ರ ಕೆಎ 20 Eಎಚ್ 0724 ನೇದರಲ್ಲಿ ಸಹ ಸವಾರಿಣಿಯನ್ನಾಗಿ ತನ್ನ ಹೆಂಡತಿ ವಿಜಯಶ್ರೀಯನ್ನು ಕುಳ್ಳಿರಿಸಿಕೊಂಡು ರಾಹೇ 66 ರಲ್ಲಿ ಉಡುಪಿ ಕಡೆಯಿಂದ ಕಾಪು ಕಡೆಗೆ ಬರುತ್ತಿರುವಾಗ ಸಂಜೆ 7:00 ಗಂಟೆಗೆ ಉದ್ಯಾವರ ಬ್ರೀಡ್ಜ್ ಗಿಂತ ಸ್ಡಲ್ಪ ಹಿಂದೆ ತಲುಪುತ್ತಿದ್ದಂತೆ ಹಿಂಬದಿಯಿಂದ ಟೆಂಪೋ ನಂಬ್ರ ಕೆಎ19 ಬಿ 9368 ನೇದನ್ನು ಅದರ ಚಾಲಕ ಕುಮಾರ ಚಂದ್ರ ಎಂಬವರು ಅಜಾಗರೂಕತೆಯಿಂದ ಅಡ್ಡಾದಿಡ್ಡಿಯಾಗಿ ನಿರ್ಲಕ್ಷತನದಿಂದ ಚಲಾಯಿಸಿ ಪಿರ್ಯಾದುದಾರರ ಸ್ಕೂಟರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ಹಾಗೂ ಅವರ ಪತ್ನಿ ಸ್ಕೂಟರ್ ಸಮೇತರಾಗಿ ರಸ್ತೆಗೆ ಬಿದ್ದು ಪಿರ್ಯಾದಿದಾರರ ಹೆಂಡತಿ ಗಾಯಗೊಂಡಿದ್ದು ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಅಪರಾಧ ಕ್ರಮಾಂಕ 06/15 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಕುಂದಾಪುರ: ದಿನಾಂಕ 07/01/2015 ರಂದು ಸಮಯ ಸುಮಾರು ಬೆಳಿಗ್ಗೆ 8:50 ಗಂಟೆಗೆ ಕುಂದಾಪುರ ತಾಲೂಕು ಹೆಮ್ಮಾಡಿ ಗ್ರಾಮದ ಸಂತೋಷನಗರ ಕ್ರಾಸ್ ಬಳಿ ರಾ.ಹೆ 66 ರಸ್ತೆಯಲ್ಲಿ ಆಪಾದಿತ ಸುಧೀರ ಎಂಬವರು KA20-B-5059ನೇ ಶಾಲಾ ವಾಹನವನ್ನು ತ್ರಾಸಿ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಪಿರ್ಯಾದಿ ದಯಾನಂದ ಇವರು ಅದೇ ದಿಕ್ಕಿನಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ KA20-EG-4130 ಬೈಕನ್ನು ಎಡಬದಿಯಿಂದ ಓವರ್ಟೇಕ್ ಮಾಡಿ ಓಮ್ಮಲೆ ರಸ್ತೆಯ ಬಲಕ್ಕೆ ಚಲಾಯಿಸಿ ಪಿರ್ಯಾದಿದಾರರ ಬೈಕ್ ಗೆ ಅಪಘಾತಪಡಿಸಿದ ಪರಿಣಾಮ ಪಿರ್ಯಾದಿದಾರರು ಬೈಕ್ ಸಮೇತ ಬಿದ್ದು ಮೈ ಕೈಗೆ ನೋವಾಗಿರುತ್ತದೆ. ಈ ಬಗ್ಗೆ ಕುಂದಾಪುರ ಸಂಚಾರ ಠಾಣೆಯಲ್ಲಿ ಅಪರಾಧ ಕ್ರಮಾಂಕ 03/15 ಕಲಂ 279, ಐಪಿಸಿ & 134(ಬಿ) ಐ.ಎಮ್.ವಿ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಹಿರಿಯಡ್ಕ: ಕೃಷ್ಣ ನಾಯಕ್ ರವರ ಇಬ್ಬರು ಮಕ್ಕಳು ಅಂಗವಿಕಲರಾಗಿದ್ದು ಅದೇ ಕಾರಣದಿಂದ ಹಾಗೂ ತನ್ನ ಅನಾರೋಗ್ಯದ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 07/01/2015 ರಂದು ಬೆಳಿಗ್ಗೆ 07:00 ಗಂಟೆಯಿಂದ 07:30 ಗಂಟೆಯ ನಡುವಿನ ಅವಧಿಯಲ್ಲಿ ತಮ್ಮ ಬಾಬ್ತು ವಾಸ್ತವ್ಯದ ಮನೆಯ ಸಮೀಪದ ಹಾಡಿಯಲ್ಲಿನ ನೇಣು ಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ 02/2015 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಬ್ರಹ್ಮಾವರ: ದಿನಾಂಕ: 07/01/2015 ರಂದು ಮುಂಜಾನೆ 3:30 ಗಂಟೆ ಸುಮಾರಿಗೆ ಪಿರ್ಯಾದಿ ವಿಜಯ ಪೂಜಾರಿ ಇವರು ಹಾಗೂ ಪಿರ್ಯಾದಿದಾರರ ಸ್ನೇಹಿತನಾದ ಸಂತೋಷ ಕುಲಾಲ್ ಎಂಬವರು ಶಾಲಾ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಮುಗಿಸಿ ಮನೆಗೆ ತೆರಳುವಾಗ ಪರುಬೆಟ್ಟು ಕಲ್ಲಕೋರೆ ಸರ್ಕಲ್ ಬಳಿ ಒಂದು ರಿಡ್ಸ್ಜ ಕಾರು ನಿಂತಿದ್ದು ಆ ಕಾರಿನಲ್ಲಿ ಒಬ್ಬ ಕುಳಿತಿದ್ದು ಸ್ವಲ್ಪ ಮುಂದೆ 3 ಜನ ರಸ್ತೆ ಪಕ್ಕದಲ್ಲಿದ್ದ ಒಂದು ದನವನ್ನು ಎತ್ತಿಕೊಂಡು ಕಾರಿನ ಬಳಿ ಬರುತ್ತಿದ್ದು ದನ ಜೋರಾಗಿ ಕೂಗುತ್ತಿದ್ದು ಪಿರ್ಯಾದಿದಾರರು ಬೈಕ್ ನಿಲ್ಲಿಸಿದಾಕ್ಷಣ ಆರೋಪಿತರುಗಳು ದನವನ್ನು ಬಿಟ್ಟು ಕಾರಿನ ಬಳಿಗೆ ಹೋಗಿದ್ದು ನಂತರ ಪಿರ್ಯಾದಿದಾರರು ಹಾಗೂ ಅವರ ಸ್ನೇಹಿತ ಜೋರಾಗಿ ಬೊಬ್ಬೆ ಮಾಡಿ ಆಸುಪಾಸಿನವರನ್ನು ಸೇರಿಸಿ ಠಾಣೆಗೆ ಮಾಹಿತಿ ನೀಡಿದ್ದು, ವಿಚಾರಿಸಿದಾಗ ದನ ಕದಿಯಲು ಬಂದ ಆರೋಪಿತರ ಹೆಸರು ಕಾಸರಗೋಡಿನ ಅಬ್ದುಲ್ ರಹಿಮಾನ್ ಮತ್ತು ಅಬ್ದುಲ್ ಲತೀಫ್ ಹಾಗೂ ಇನ್ನಿಬ್ಬರು ಕಾಪುವಿನ ಮಹಮ್ಮದ್ ಮೊಯಿದ್ದೀನ್ ಮತ್ತು ಮಹಮ್ಮದ್ ಅಬುಬಕರ್ ಎಂಬುದಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಕ್ರಮಾಂಕ 04/1015 ಕಲಂ: 379, 511 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment