ಇತರ ಪ್ರಕರಣ
- ಮಣಿಪಾಲ: ಪಿರ್ಯಾದಿ ಕೃಷ್ಣ ಹೆಬ್ಬಾರ್ ಇವರು ಉಡುಪಿ ತಾಲೂಕು ಅಲೆವೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿದ ಸ.ನಂ: 199/38ಪಿ33 ರಲ್ಲಿ 0.05 ಎಕ್ರೆ ಸ್ಥಿರಾಸ್ಥಿಯನ್ನು ಕ್ರಯಕ್ಕೆ ಪಡೆದು ಅದಕ್ಕೆ ಸುತ್ತಲೂ ಕಲ್ಲು ಕಂಬವನ್ನು ಹಾಕಿ ತಂತಿ ಬೇಲಿಯನ್ನು ಮಾಡಿದ್ದು, ದಿನಾಂಕ: 30/12/2014 ರಂದು ರಾತ್ರಿ ಸಮಯ ಯಾರೋ ದುಷ್ಕರ್ಮಿಗಳು ಬೇಲಿ ಕಂಬವನ್ನು ಧ್ವಂಸ ಮಾಡಿ, ಕೆಲವು ಕಂಬಗಳನ್ನು ಹಾಗೂ ಸರಿಗೆಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಸದ್ರಿ ಪರಿಸರದ ಜಯಕರ ಎಂಬವರು ಠಾಣೆಗೆ ಬಂದು ಪಿರ್ಯಾದಿದಾರರಲ್ಲಿ ರಾಜಿ ಮಾತುಕತೆ ನಡೆಸಿ ದಿನಾಂಕ: 31/12/2014 ರಂದು ಸಂಜೆ 6-00 ಗಂಟೆಯೊಳಗೆ ಬೇಲಿಯನ್ನು ಹಾಕಿಕೊಡುವುದಾಗಿ ಹೇಳಿದ್ದು ಈತನಕ ಹಾಕಿರುವುದಿಲ್ಲ. ಕಳವಾದ ಸೊತ್ತಿನ ಮೌಲ್ಯ ಸುಮಾರು 3,500/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 01/2015, ಕಲಂ: 447, 427, 379 ಐಪಿಸಿ & ಕಲಂ: 2(ಎ)(ಬಿ) ಪಿ.ಡಿ &ಎಲ್.ಪಿ ಆಕ್ಟ್‌ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಮಣಿಪಾಲ: ಪಿರ್ಯಾದಿ ಜಯಕರ ಪೂಜಾರಿ ಇವರ ಮನೆಯ ಹತ್ತಿರ ಪ್ರಗತಿ ನಗರದಲ್ಲಿ ಕೃಷ್ಣ ಹೆಬ್ಬಾರ್ ಎಂಬವರಿಗೆ ಸೇರಿದ ಜಾಗಕ್ಕೆ ಹಾಕಿದ ಕಲ್ಲು ಕಂಬಗಳನ್ನು ದಿನಾಂಕ: 30/12/14 ರಂದು ರಾತ್ರಿ ಸಮಯ ಯಾರೋ ಅಪರಿಚಿತರು ಧ್ವಂಸ ಮಾಡಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬ ಮಾಹಿತಿ ಬಂದಂತೆ ಪಿರ್ಯಾದಿದಾರರು ದಿನಾಂಕ: 31-12-14 ರಂದು ಠಾಣೆಗೆ ಬಂದು ಕೃಷ್ಣ ಹೆಬ್ಬಾರ್ ರವರಲ್ಲಿ ಮಾತುಕತೆ ನಡೆಸಿ ತಾನು ಬೇಲಿ ಹಾಕಿ ಕೊಡುವುದಾಗಿ ಹೇಳಿ ದಿನಾಂಕ: 31-12-14 ರಂದು ರಾತ್ರಿ ಸಮಯ ಸುಮಾರು 9-00 ಗಂಟೆಗೆ ಪಿರ್ಯಾದಿದಾರರು ಕೃಷ್ಣ ಹೆಬ್ಬಾರ್ ರವರ ಜಾಗಕ್ಕೆ ಇತರರೊಂದಿಗೆ ಹೋಗಿ ಬೇಲಿ ಹಾಕಲು ಪ್ರಾರಂಭ ಮಾಡುತ್ತಿದ್ದಾಗ ಯಾರೋ 4 ಜನ ಅಪರಿಚಿತರು ಬಿಳಿ ಬಣ್ಣದ ಸ್ವಿಪ್ಟ್ ಕಾರಿನಲ್ಲಿ ಬಂದು ಅದರಲ್ಲಿ ಒಬ್ಬರು ಒಂದು ಮರದ ದೊಣ್ಣೆಯಿಂದ ಪಿರ್ಯಾದಿದಾರರ ತಲೆಗೆ ಹೊಡೆದು, ಉಳಿದವರು ಕಾಲಿನಿಂದ ತುಳಿದು ಹಲ್ಲೆ ನಡೆಸಿ, ಸೂಳೆ ಮಗನೇ ನೀನು ಹೆಬ್ಬಾರರ ಬೇಲಿ ಕಂಬ ತುಂಡು ಮಾಡುತ್ತೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಅಪರಾಧ ಕ್ರಮಾಂಕ 02/2015, ಕಲಂ: 324, 323, 504 ಜೊತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಹಿರಿಯಡ್ಕ: ಪಿರ್ಯಾದಿ ಶ್ರೀ ಜಯಕರ ಕುಲಾಲ್ (45) ತಂದೆ:ದಿ: ಕಿಟ್ಟ ಕುಲಾಲ್ ವಾಸ: ಅನಂತ ಪದ್ಮನಾಭ ನಿಲಯ ಕಲ್ಲುಮುಚ್ಚಿಲು,ಬುಕ್ಕಿಗುಡ್ಡೆ, ಪೆರ್ಡೂರು ಅಂಚೆ ಮತ್ತು ಗ್ರಾಮ ಉಡುಪಿ ತಾಲೂಕು ಇವರ ಮಗ ಶ್ರೀನಿವಾಸ (22) ಎಂಬವರು ಕಳೆದ 7 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಚಿಕಿತ್ಸೆ ಕೊಡಿಸಿದ್ದರೂ ಗುಣಮುಖರಾಗದೇ ಇದ್ದು, ಮನನೊಂದ ಶ್ರೀನಿವಾಸ್ ರವರು ದಿನಾಂಕ:01/01/2015 ರಂದು 12:30 ಗಂಟೆಯಿಂದ 13:00 ಗಂಟೆಯ ನಡುವಿನ ಮನೆಯ ಒಳಗಿನ ಕೋಣೆಯಲ್ಲಿ ಮರದ ಪಕ್ಕಾಸಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ : 01/2014 U/s 174 CRPC ರಂತೆ ಪ್ರಕ್ರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment