ಅಪಘಾತ
ಪ್ರಕರಣ
- ಕುಂದಾಪುರ: ದಿನಾಂಕ 31/12/2014 ರಂದು ಸಮಯ ಸುಮಾರು ಸಂಜೆ 7:05 ಗಂಟೆಗೆ ಕುಂದಾಪುರ ತಾಲೂಕು ಕುಂಭಾಶಿ ಗ್ರಾಮದ ಕುಂಭಾಶಿಯ ಸ್ವಾಗತ ಗೋಪುರದ ಬಳಿ ರಾ.ಹೆ 66 ರಸ್ತೆಯಲ್ಲಿ ಪಿರ್ಯಾದಿ ಸತ್ಯ ಎ ಇವರು KA20-MA-1108 ನೇ ಕಾರನ್ನು ಚಲಾಯಿಸಿಕೊಂಡು ಉಡುಪಿಯಿಂದ ಕುಂದಾಪುರ ಕಡೆಗೆ ಬಂದು ಸ್ವಲ್ಪ ರಸ್ತೆ ಡೈವರ್ಶನ್ ಇರುವ ಕಾರಣ ಸ್ವಲ್ಪ ನಿಧಾನಿಸಿದಾಗ ಆಪಾದಿತ ರವಿ ಕೆ.ವಿ ಎಂಬವರು KA51B-9641 ಹುನುಮಾನ್ ಬಸ್ ಅನ್ನು ಅದೇ ದಿಕ್ಕಿನಿಂದ ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಪಿರ್ಯಾದಿದಾರರ ಕಾರಿನ ಹಿಂಬದಿಗೆ ಹಿಂದಿನಿಂದ ಡಿಕ್ಕಿ ಹೊಡದು ಬಳಿಕ ಪೂರ್ವ ಬದಿಯ ರಸ್ತೆಯಲ್ಲಿ ತೆಕ್ಕಟ್ಟೆ ಕಡೆಗೆ ಸೈಕಲ್ ದೂಡಿಕೊಂಡು ಹೋಗುತ್ತಿದ್ದ ಅಶೋಕ ಮೋಗವೀರ ಎಂಬವರಿಗೆ ಡಿಕ್ಕಿ ಹೊಡೆದ ಅಶೋಕ ಮೋಗವೀರರ ತಲೆಗೆ, ಹಾಗೂ ಮೈಗೆ ಒಳ ನೋವು ಉಂಟಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಠಾಣೆಯಲ್ಲಿ ಅಪರಾಧ ಕ್ರಮಾಂಕ 164/2014ಕಲಂ 279, 337 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ಶಿರ್ವಾ: ದಿನಾಂಕ 26/12/2014 ರಂದು ಪಿರ್ಯಾದಿ ಸುಧಾಕರ ಎಸ್ ಇವರ ಮಗ ರಾಜೇಶ ಕುಮಾರ್ ಶೆಟ್ಟಿ ಇವರು ನೀರಜ್ ಶೆಟ್ಟಿ ಇವರ ಬಾಬ್ತು ಮೋಟಾರು ಸೈಕಲ್ ನಂಬ್ರ ಕೆ ಎ 20 ಇ ಸಿ 9411 ನೇಯದರಲ್ಲಿ ಸಹಸವಾರನಾಗಿ ಕುಳಿತುಕೊಂಡು ಸದ್ರಿ ಮೋಟಾರು ಸೈಕಲನ್ನು ನೀರಜ್ ಶೆಟ್ಟಿಯವರು ಸವಾರಿ ಮಾಡಿಕೊಂಡು ಮೂಡು ಬೆಳ್ಳೆಯಿಂದ ಕಟ್ಟಿಂಗೇರಿ ಕಡೆಗೆ ಬರುತ್ತಿರುವಾಗ ಸಮಯ ಸುಮಾರು ಸಂಜೆ 5:30 ಗಂಟೆಗೆ ಮೂಡು ಬೆಳ್ಳೆ ಮದನಿ ಮರದ ಮಿಲ್ಲಿನ ಹತ್ತಿರ ತಲುಪುವಾಗ್ಗೆ ನೀರಜ್ ತನ್ನ ಬಾಬ್ತು ಮೋಟಾರು ಸೈಕಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತಿರುವಿನಲ್ಲಿ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಮೋಟಾರು ಸೈಕಲ್ ಸಮೇತ ಸವಾರ ನಿರಜ್ ಶೆಟ್ಟಿ ಹಾಗೂ ಸಹ ಸವಾರ ರಾಜೇಶ್ ಕುಮಾರ್ ಶೆಟ್ಟಿ ಇವರು ರಸ್ತೆಗೆ ಬಿದ್ದು ಪರಿಣಾಮ ಸಹ ಸವಾರ ರಾಜೇಶ್ ಕುಮಾರ್ ಶೆಟ್ಟಿ ಇವರಿಗೆ ತಲೆಗೆ ತೀವ್ರ ತರವಾದ ಒಳ ಜಖಂ ಹಾಗೂ ಬಲಕಾಲಿನ ಪಾದದ ಬಳಿ ತರುಚಿದ ಗಾಯ ವಾಗಿದ್ದು ಅಲ್ಲದೆ ಮೋಟಾರ್ ಸೈಕಲ್ ಸವಾರನೀರಜ್ ಶೆಟ್ಟಿ ಇವರಿಗೆ ಮುಖದ ಬಲ ಭಾಗಕ್ಕೆ ತರಚಿದ ಗಾಯವಾಗಿರುತ್ತದೆ. ಈ ಅಪಘಾತಕ್ಕೆ ಕೆ ಎ 20 ಇ ಸಿ 9411 ನೇ ಮೋಟಾರು ಸೈಕಲ್ ಸವಾರ ನೀರಜ್ ಶೆಟ್ಟಿಯವರ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಶಿರ್ವಾ ಠಾಣೆಯಲ್ಲಿ ಅಪರಾಧ ಕ್ರಮಾಂಕ 175/2014ಕಲಂ 279, 338 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment