ಅಪಘಾತ ಪ್ರಕರಣ
- ಕೋಟ: ದಿನಾಂಕ 29/12/2014 ರಂದು ಬೆಳಿಗ್ಗೆ 07:45 ಗಂಟೆಗೆ ಪಿರ್ಯಾದಿದಾರರಾದ ಹಸನಬ್ಬ (32) ತಂದೆ:ಯೂಸುಪ್ ವಾಸ:ಕನ್ನುಕೆರೆ ತೆಕ್ಕಟ್ಟೆ ಗ್ರಾಮ, ಕುಂದಾಪುರ ತಾಲೂಕು ಎಂಬವರು ತನ್ನ ಮೋಟಾರ್ ಸೈಕಲ್ ನಲ್ಲಿ ಕೋಟ ಕಡೆಯಿಂದ ಕನ್ನುಕೆರೆ ಕಡೆಗೆ ಹೋಗುವಾಗ ಪಿರ್ಯಾಧಿದಾರರ ಎದುರುಗಡೆ ಅಂದರೆ ಕೋಟ ಕಡೆಯಿಂದ ಕುಂದಾಪುರ ಕಡೆಗೆ ಕೆ.ಎ:20 ಇ.ಬಿ:7561 ನೇ ನಂಬ್ರದ ಮೋಟಾರ್ ಸೈಕಲ್‌ನ ಸವಾರ ಸಂತೋಷ ಎಂಬವರು ಲೋಕೇಶ ಆಚಾರಿ ಎಂಬವರನ್ನು ಸಹಸವಾರನ್ನಾಗಿ ಕುಳ್ಳಿರಿಸಿಕೊಂಡು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮದ ಕನ್ನುಕೆರೆ ಜುಮ್ಮಾ ಮಸೀದಿ ಸಮೀಪ ರಾ.ಹೆ:66 ರಲ್ಲಿ ಒಮ್ಮಲೆ ಮೋಟಾರ್ ಸೈಕಲ್‌ನ ಬ್ರೇಕ್ ಹಾಕಿದ ಪರಿಣಾಮ ಸದ್ರಿ ಮೋಟಾರ್ ಸೈಕಲ್‌ನ ಸಹ ಸವಾರರಾದ ಲೋಕೇಶ ಆಚಾರಿ ಎಂಬವರು ಮೋಟಾರ್ ಸೈಕಲ್‌ನಿಂದ ಟಾರು ರಸ್ತೆಯ ಮೇಲೆ ಬಿದ್ದ ಪರಿಣಾಮ ತೀವ್ರ ರಕ್ತಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಕೋಟೇಶ್ವರ ಎನ್.ಆರ್ ಆಚಾರ್ಯ ಆಸ್ಪತ್ರೆಗೆ ಕೊಂಡು ಹೋಗಿ ಬಳಿಕ ವೈದ್ಯರ ಸಲಹೆಯ ಮೆರೆಗೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ ಎಂಬುದಾಗಿ ಹಸನಬ್ಬ ರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 240/2014 ಕಲಂ: 279.338 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment