ಆತ್ಮಹತ್ಯೆ ಪ್ರಕರಣ
- ಮಣಿಪಾಲ: ಪಿರ್ಯಾದಿದಾರರಾದ ತಿಮ್ಮಪ್ಪ ಶೆಟ್ಟಿಗಾರ್ (57), ತಂದೆ ದಿ. ಐತಪ್ಪ ಶೆಟ್ಟಿಗಾರ್, ಭದ್ರಾ ನಿಲಯ, ಮಾರ್ಕೇಟ್ ರೋಡ್, ಪರ್ಕಳ, ಉಡುಪಿ ತಾಲೂಕು ಇವರ ಪತ್ನಿ ವಿಜಯಲಕ್ಷ್ಮೀಯವರು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಕಂಕನಾಡಿ ಆಸ್ಪತ್ರೆ ಹಾಗೂ ಕೆ.ಎಮ್.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿದ್ದರೂ ಕೂಡ ಗುಣಮುಖವಾಗದೇ ಇದ್ದು ಈ ಬಗ್ಗೆ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 30/12/14ರಂದು 20:30 ಗಂಟೆಗೆ ಹೆರ್ಗ ಗ್ರಾಮದ ಪರ್ಕಳದ “ಭದ್ರಾ ನಿಲಯ” ಎಂಬ ಮನೆಯ ಕೋಣೆಯ ಜಂತಿಗೆ ಸೀರೆಯನ್ನು ಕಟ್ಟಿ ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ತಿಮ್ಮಪ್ಪ ಶೆಟ್ಟಿಗಾರ್ ಇವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 43/2014 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
- ಗಂಗೊಳ್ಳಿ: ಮಾನ್ಯ ನ್ಯಾಯಾಲಯದಿಂದ ಬಂದ ಖಾಸಾಗಿ ಪಿರ್ಯಾದಿ ನಂಬ್ರ 465/14ರ ಸಾರಾಂಶ ಏನೆಂದರೆ, ಶ್ರೀಮತಿ ಇಂದಿರಾ (25), ಗಂಡ ರಾಮಚಂದ್ರ ವಾಸ ಭಂಡಾರಿ ಮನೆ ಮರವಂತೆ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 30/11/2008ರಂದು ಆರೋಪಿತ ರಾಮಚಂದ್ರ (33) ತಂದೆ ಗೋವಿಂದ ಖಾರ್ವಿ, ವಾಸ ಬಡ್ಡನ ಮನೆ, ಮಡಿಕಲ್, ಉಪ್ಪುಂದ ಗ್ರಾಮ, ಥಾರಾಪತಿ ಪೋಸ್ಟ, ಕುಂದಾಫುರ ತಾಲೂಕು ಎಂಬವರನ್ನು ಕುಂದಾಪುರದಲ್ಲಿ ವಿವಾಹ ನೊಂದಣಿ ಕಛೇರಿಯಲ್ಲಿ ವಿವಾಹ ನೊಂದಣಿ ಮಾಡಿಕೊಂಡು ವಿವಾಹವಾಗಿರುತ್ತಾರೆ. ಮದುವೆಯ ಪೂರ್ವದಲ್ಲಿ ಪಿರ್ಯಾದಿದಾರರ ಮನೆಯಲ್ಲಿ ಮದುವೆ ಮಾತುಕತೆ ನಡೆದಿದ್ದು ಆ ಸಮಯದಲ್ಲಿ ಆಪಾದಿತನು ಪಿರ್ಯಾದಿದಾರರ ತಂದೆಯವರಲ್ಲಿ 1,00000/- ರೂಪಾಯಿ ಹಣ 10 ಪಾವನ್ ಬಂಗಾರವನ್ನು ವರದಕ್ಷಿಣೆಯಾಗಿ ಕೊಡುವಂತೆ ಒತ್ತಾಯಪಡಿಸಿರುತ್ತಾರೆ. ಪಿರ್ಯಾದಿದಾರರ ತಂದೆ ವರದಕ್ಷಿಣೆ ಕೊಡಲು ನಿರಾಕರಿಸಿದಾಗ ಮದುವೆಯಾಗಲು ನಿರಾಕರಿಸಿರುತ್ತಾರೆ. ಹುಡುಗಿಯ ಮದುವೆ ನಿಂತುಹೋಗಬಾರದು ಎಂದು ಪಿರ್ಯಾದಿದಾರರ ತಂದೆ ಮಾತುಕತೆ ನಡೆಸಿ 50000/- ರೂಪಾಯಿ ಹಣ 5 ಪವನ್ ಬಂಗಾರವನ್ನು ವರದಕ್ಷಿಣೆಯಾಗಿ ಕೊಟ್ಟಿರುತ್ತಾರೆ. ಮದುವೆಯ ಬಳಿಕ ಪಿರ್ಯಾದಿದಾರರು ಗಂಡನ ಮನೆಯಲ್ಲಿ ಸಂಸಾರಮಾಡಿಕೊಂಡು ಇದ್ದರು. ಸ್ವಲ್ಪ ಸಮಯ ಒಳ್ಳೆಯ ರೀತಿಯಲ್ಲಿ ನೋಡಿಕೊಂಡು ಕ್ರಮೇಣ ಹೆಚ್ಚಿನ ವರದಕ್ಷಿಣೆ ತರುವಂತೆ ಆಪಾದಿತನು ನಿತ್ಯ ದೈಹಿಕ ಮಾನಸಿಕ ಹಿಂಸೆ ನೀಡಲು ಪ್ರಾರಂಭಿಸಿರುತ್ತಾನೆ. ಪಿರ್ಯಾದಿದಾರರು ಹೆಚ್ಚಿನ ವರದಕ್ಷಿಣೆ ಹಣ ಕೊಡದ ಕಾರಣಕ್ಕೆ ಹೆಂಡತಿಯ ಸ್ಥಾನದಲ್ಲಿ ನೋಡದೇ ಕೂಲಿ ಆಳಿನಂತೆ ನೋಡಿಕೊಂಡು ಬೆಳಿಗ್ಗೆಯಿಂದ ರಾತ್ರಿಯ ತನಕ ಕೆಲಸಮಾಡಿಸಿ, ಅವಾಚ್ಯ ಶಬ್ದಗಳಿಂದ ಬೈದು, ಸರಿಯಾಗಿ ಊಟ ಆಹಾರ ನೀಡದೇ ಹೊಡೆದು ದೈಹಿಕ ಹಿಂಸೆ ನೀಡಿರುತ್ತಾರೆ. ಪಿರ್ಯಾದಿದಾರರು ಮುಂದಕ್ಕೆ ಒಳ್ಳೆಯದಾಗಬಹುದೆಂದು ಗಂಡನ ಹಿಂಸೆ ಸಹಿಸಿಕೊಂಡಿದ್ದರು. ಆದರೂ ಸಹ ಆಪಾದಿತನು ಬದಲಾವಣೆಯಾಗದೇ ವರದಕ್ಷಿಣೆ ಹಣಕ್ಕಾಗಿ ಪಿರ್ಯಾದಿದಾರರಿಗೆ ತವರಿನಿಂದ ವರದಕ್ಷಿಣೆ ಹಣ ತರದೇ ಬಂದಲ್ಲಿ ಕೊಲ್ಲುವುದಾಗಿ ಬೆದರಿಕೆಹಾಕಿದ್ದು, ಆಪಾದಿತನ ಹಿಂಸೆ ಕಿರುಕುಳ ಸಹಿಸಲಾಗದೇ ತವರಿಗೆ ಬಂದಿರುತ್ತಾರೆ ಎಂಬುದಾಗಿ ಶ್ರೀಮತಿ ಇಂದಿರಾ ಇವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 216/2014 ಕಲಂ 498 (A), 323, 324, 504, 506 ಜೊತೆಗೆ 34 ಐ.ಪಿ.ಸಿ ಮತ್ತು 3, 4, 6 ಡಿಪಿ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
No comments:
Post a Comment