ಹಲ್ಲೆ ನಡೆಸಿ, ಜೀವ ಬೆದರಿಕೆ ನೀಡಿದ ಪ್ರಕರಣಗಳು
- ಬೈಂದೂರು: ಪಿರ್ಯಾಧಿದಾರರಾದ ನಾರಾಯಣ ಮರಾಠಿ (50) ತಂದೆ: ದಿ. ಮಂಜಯ್ಯ ಮರಾಠಿ ವಾಸ: ನೀರೋಡಿ ತೆಗ್ಗರ್ಸೆ ಗ್ರಾಮ ಕುಂದಾಪುರ ತಾಲೂಕು ಎಂಬವರಿಗೂ ಹಾಗೂ ಆರೋಪಿತರಾದ 1) ದೇವಪ್ಪ ಮರಾಠಿ 2).ರಾಮ ಮರಾಠಿ, 3) ತಿಮ್ಮ ಮರಾಠಿ, 4) ವೆಂಕಟೇಶ ಮರಾಠಿ ಎಂಬವರಿಗೆ ಜಾಗದ ವಿಚಾರದಲ್ಲಿ ತಕರಾರು ಇದ್ದು ಪಿರ್ಯಾಧಿದಾರರಿಗೆ ಸಂಬಂದಿಸಿದ ಸರ್ವೆ ನಂಬ್ರ 226/7ಪಿ1, 226/8ಪಿ2, 222/1ಪಿ3 ರಲ್ಲಿ ಆರೋಪಿತರಾದ ದೇವಪ್ಪ ಮರಾಠಿ ಹಾಗೂ ಅವರ ಮನೆಯವರು ಅಕ್ರಮ ಪ್ರವೇಶ ಮಾಡದಂತೆ ಮಾನ್ಯ ಕುಂದಾಪುರ ಸಿವಿಲ್ ನ್ಯಾಯಾಲಯದಲ್ಲಿ ಓ.ಎಸ್ ನಂಬ್ರ 284/14 ರಲ್ಲಿ ದಾವೆ ಹೋಡಿದ್ದು ನ್ಯಾಯಾಲಯದಲ್ಲಿ ವಿಚಾರಣೆ ಇರುತ್ತದೆ. ಮಾನ್ಯ ನ್ಯಾಯಾಲಯವು ತಕರಾರು ಇರುವ ಜಾಗಕ್ಕೆ ದೇವಪ್ಪ ಮರಾಠಿ ಹಾಗೂ ಅವರ ಮನೆಯವರು ಪ್ರವೇಶಿಸದಂತೆ ಇಂಜೆಂಕ್ಷನ್ ಹೊರಡಿಸಿದ್ದು ಇರುತ್ತದೆ. ದಿನಾಂಕ 22/12/2014 ರಂದು 07:30 ಗಂಟೆಗೆ ಕುಂದಾಪುರ ತಾಲೂಕು ತೆಗ್ಗರ್ಸೆ ಗ್ರಾಮದ ನೀರೋಡಿ ಎಂಬಲ್ಲಿನ ಪಿರ್ಯಾಧಿದಾರರ ಬಾಬ್ತು ಜಾಗದ ಕಾಲು ದಾರಿಯಲ್ಲಿ ಪಿರ್ಯಾಧಿದಾರರು ಹಾಗೂ ಅವರ ಅಳಿಯಂದಿರಾದ ರಾಜು ಮರಾಠಿ ಮತ್ತು ವಾಸು ಮರಾಠಿಯವರೊಂದಿಗೆ ಕೂಲಿ ಕೆಲಸಕ್ಕೆಂದು ನಡೆದುಕೊಂಡು ಹೋಗುತ್ತಿರುವ ಸಮಯ ಆರೋಪಿತರಾದ ದೇವಪ್ಪ ಮರಾಠಿ, ರಾಮ ಮರಾಠಿ , ತಿಮ್ಮ ಮರಾಠಿ ಮತ್ತು ವೆಂಕಟೇಶ ಮರಾಠಿ ಎಂಬವವರುಗಳು ಪಿರ್ಯಾಧಿದಾರರನ್ನು ಹಾಗೂ ಅವರ ಅಳಿಯಂದಿರನ್ನು ತಡೆದು ನಿಲ್ಲಿಸಿ ಜಾಗದ ವಿಚಾರದಲ್ಲಿ ನೀವು ಬಾರಿ ಹಸ್ತ ಕ್ಷೇಪ ಮಾಡುತ್ತಿದ್ದೀರಿ ಎಂದು ಆವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆದು, ಜಾಗದ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದರೆ ನಿಮ್ಮನ್ನು ಜೀವ ಸಹಿತವಾಗಿ ಬಿಡುವುದಿಲ್ಲವಾಗಿ ಜೀವ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ನಾರಾಯಣ ಮರಾಠಿ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 258/2014 ಕಲಂ 341, 504, 323, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
- ಶಂಕರನಾರಾಯಣ: ದಿನಾಂಕ 21/12/2014 ರಂದು ಮದ್ಯಾಹ್ನ ಪಿರ್ಯಾದಿದಾರರಾದ ದಿವಾಕರ ಬಿ.ಆರ್ (30) ತಂದೆ: ರಾಮಪ್ಪ ಗೌಡ ವಾಸ: ಬಾಬ್ಸಿರಿ, ದೂರ್ವಾಸಪುರ, ತೀರ್ಥಹಳ್ಳಿ ತಾಲೂಕು, ಶಿವಮೊಗ್ಗ ಜಿಲ್ಲೆ ರವರು ಮತ್ತು ಅವರ ಸ್ನೇಹಿತ ವಿವೇಕ ಎಂಬವರು ಹಾಲಾಡಿ ಮಧುದರ್ಶನ ಬಾರ್ ನಲ್ಲಿ ಊಟ ಮಾಡುತ್ತಿರುವಾಗ ಸುಮಾರು 3.00 ಗಂಟೆಗೆ ಬಾರ್ ಸಪ್ಲಾಯರ್ ಸಮಯವಾಗಿದೆ ಬೇಗ ಊಟ ಮಾಡಿ ಹೋಗಿ ಎಂದು ಹೇಳಿದ್ದಕ್ಕೆ ಪಿರ್ಯಾಧುದಾರರು ಊಟ ಮಾಡುವಾಗ ನೀವು ಹೋಗಿ ಎಂದು ಹೇಳುವುದು ಸರಿಯಲ್ಲ, ಮೊದಲೇ ಹೇಳಬೇಕಿತ್ತು ಎಂದಾಗ, ಬಾರ್ ಸಪ್ಲಾಯರ್ ಅವಾಚ್ಯ ಶಬ್ದಗಳಿಂದ ಬೈದು, ಇತರ 5- 6 ಮಂದಿ ಜೊತೆ ಸೇರಿಕೊಂಡು ಪಿರ್ಯಾಧಿದಾರರ ತಲೆಗೆ ಕೆನ್ನೆಗೆ, ಕೈಗಳಿಂದ ಹೊಡೆದು, ಸೊಡಾ ಬಾಟ್ಲಿಯಿಂದ ತಲೆಗೆ ಹೊಡೆಯಲು ಬಂದಾಗ ಪಿರ್ಯಾದಿದಾರರು ಎಡ ಕೈಯಿಂದ ಅಡ್ಡಹಿಡಿದಾಗ ಕೈಗೆ ಪೆಟ್ಟು ಬಿದ್ದಿರುತ್ತದೆ ಹಾಗೂ ಕಿವಿಗೆ ಹೊಡೆದ ಪರಿಣಾಮದಿಂದ ಕಿವಿಯ ತಮಟೆಗೆ ಪೆಟ್ಟು ಬಿದ್ದಿರುತ್ತದೆ ಮತ್ತು ದೂರು ನೀಡಿದರೆ ಕಾಲು ಮುರಿಯುವುದಾಗಿ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ದಿವಾಕರ ಬಿ.ಆರ್ ರವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 197/2014 ಕಲಂ 504, 506, 149, 323, 324, 325, 342 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
- ಕೊಲ್ಲೂರು: ದಿನಾಂಕ 21/12/2014 ರಂದು ಪಿರ್ಯಾದಿದಾರರಾದ ಉಮೇಶ್ (40) ತಂದೆ:ಸಿದ್ದರಾಮಯ್ಯ ವಾಸ:ಹೊಸಹಳ್ಳಿ ಗ್ರಾಮ ಹೋಬಳಾಪುರ ಅಂಚೆ ತುಮಕೂರು ತಾಲೂಕು ಮತ್ತು ಜಿಲ್ಲೆ ರವರು ಸ್ನೇಹಿತರೊಂದಿಗೆ ದೇವರ ದರ್ಶನ ಮಾಡುವರೆ ತುಮಕೂರಿನಿಂದ ಕೆ.ಎ 19 ಸಿ 9030 ನೇ ಇಂಡಿಕಾ ಕಾರಿನಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವರ ದರ್ಶನಕ್ಕೆ ಬರುತ್ತಿರುವಾಗ ಸಮಯ ರಾತ್ರಿ ಸುಮಾರು 11:00 ಗಂಟೆ ವೇಳೆಗೆ ಕುಂದಾಪುರ-ಕೊಲ್ಲೂರು ರಾಜ್ಯ ಹೆದ್ದಾರಿಯ ಜಡ್ಕಲ್ ಗ್ರಾಮದ ಹಾಲ್ಕಲ್ ಇಳಿಜಾರು ಪ್ರದೇಶದಲ್ಲಿ ತಲುಪುವಾಗ ಆರೋಪಿ ರವಿ ಎಂಬಾತನು ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಕಾರು ರಸ್ತೆಯ ತೀರಾ ಬಲಭಾಗಕ್ಕೆ ಹೋಗಿ ಮಣ್ಣಿನ ದಂಡೆಗೆ ಡಿಕ್ಕಿ ಹೊಡೆದು ಕಾರು ಪಲ್ಟಿ ಆಗಿ ಮುಗುಚಿ ಬಿದ್ದಿದ್ದರಿಂದ ಕಾರಿನಲ್ಲಿದ್ದ ಪಿರ್ಯಾದಿದಾರರಿಗೆ ಎಡಕಾಲಿನ ಪಾದದ ಹಿಮ್ಮಡಿ ಎಲುಬು ತುಂಡಾಗಿದ್ದು ಹಾಗೂ ರವಿ ಹೆಚ್ ಎಂಬವರಿಗೂ ಎಡಭುಜದ ಕಾಲರ್ ಬೋನ್ ತುಂಡಾಗಿದ್ದು ಮತ್ತು ಕೆನ್ನೆಯ ಎಡ ಭಾಗದಲ್ಲಿ ಹಾಗೂ ಹಣೆಯ ಮೆಲ್ಬಾಗದಲ್ಲಿ ತರಚಿದ ರಕ್ತಗಾಯ ಉಂಟಾಗಿರುತ್ತದೆ. ಈ ಅಪಘಾತಕ್ಕೆ ಕೆ.ಎ 19 ಸಿ 9030 ನೇ ಇಂಡಿಕಾ ಕಾರಿನ ಚಾಲಕ ರವಿ ಎಂಬಾತನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೆ ಕಾರಣವಾಗಿರುತ್ತದೆ ಎಂಬುದಾಗಿ ಉಮೇಶ್ ರವರು ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 80/2014 ಕಲಂ 279, 337, 338 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
- ಕೋಟ: ದಿನಾಂಕ 22/12/2014 ರಂದು ಬೆಳಿಗ್ಗೆ 5:30 ಗಂಟೆಗೆ ಪಿರ್ಯಾದಿದಾರರಾದ ಬಿ ಆನಂದ ಬಳೆಗಾರ್ (58) ತಂದೆ;ದಿ ನಾರಾಯಣ ಬಳೆಗಾರ್, ವಾಸ:ಮಣೂರು ಗ್ರಾಮ, ಉಡುಪಿ ತಾಲೂಕು ರವರು ತನ್ನ ಕೆಎ 20 ಇ ಎಫ್ 7300 ನೇ ನಂಬ್ರದ ಮೋಟಾರು ಸೈಕಲ್‌ನಲ್ಲಿ ತಮ್ಮನ ಮಗಳಾದ ದಿಶಾಳನ್ನು ಸಹಸವಾರಳಾಗಿ ಕುಳ್ಳಿರಿಸಿಕೊಂಡು ಬರುತ್ತಾ ಉಡುಪಿ ತಾಲೂಕು ಮಣೂರು ಗ್ರಾಮದ ಮಣೂರು ಬಳಿ ರಾಹೆ 66 ರ ಬಳಿ ಬಂದಾಗ ಕೆಎ 20 ಸಿ 3031 ನೇ ನಂಬ್ರದ ಟಾಟಾ ಏಸ್ ಚಾಲಕನು ತನ್ನ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಬರುತ್ತಿದ್ದ ಮೋಟಾರು ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರಿಗೆ ತಲೆಯ ಬಲಭಾಗಕ್ಕೆ ಹಾಗೂ ಮೈಕೈಗೆ ತರಚಿದ ಗಾಯವಾಗಿದ್ದು ದಿಶಾಳಿಗೆ ಬಲಕೈ ಮೂಳೆ ಮುರಿತ ಹಾಗೂ ಬಲ ಕಣ್ಣಿನ ಹುಬ್ಬಿನ ಬಳಿ ತರಚಿದ ಗಾಯವಾಗಿರುತ್ತದೆ ಎಂಬುದಾಗಿ ಬಿ ಆನಂದ ಬಳೆಗಾರ್ ರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 235/2014 ಕಲಂ 279, 337, 338 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
- ಕೊಲ್ಲೂರು: ಪಿರ್ಯಾದಿದಾರರಾದ ಮ್ಯಾಥ್ಯೂ ಎಮ್.ಜೆ ತಂದೆ:ದಿ:ಜೋಸೆಫ್ ವಾಸ:ಹುಣವಳ್ಳಿ ಗ್ರಾಮ ಶಿಗ್ಗಾ ಅಂಚೆ ಸೊರಬ ತಾಲೂಕು ಶಿವಮೊಗ್ಗ ಜಿಲ್ಲೆ ಎಂಬವರ ಮಗಳಾದ ಶ್ರೀಮತಿ ಮಿನಿ ಮ್ಯಾಥ್ಯೂ ರವರನ್ನು ದಿನಾಂಕ 26-01-2009 ರಂದು ವಿಲ್ಸನ್ ಎಂಬವರಿಗೆ ಮದುವೆ ಮಾಡಿಕೊಟ್ಟಿದ್ದು ಅವರಿಗೆ 2 ಮಕ್ಕಳಿದ್ದು ಜಡ್ಕಲ್ ಗ್ರಾಮದಲ್ಲಿ ಗಂಡನ ಮನೆಯಲ್ಲಿ ವಾಸವಾಗಿರುತ್ತಾರೆ. ದಿನಾಂಕ 21/12/2014 ರಂದು ಪಿರ್ಯಾದಿದಾರರಿಗೆ ರಾತ್ರಿ ಸುಮಾರು 08:00 ಗಂಟೆಗೆ ಖುಷಿಯಿಂದ ಮಾತನಾಡಿ ಮಲಗಿರುತ್ತಾರೆ. ದಿನಾಂಕ 22/12/2014 ರಂದು ಬೆಳಿಗ್ಗೆ ಥೋಮ್ಸನ್ ರವರು ಫೋನ್ ಮಾಡಿ ಮಿನಿ ಮ್ಯಾಥ್ಯೂರವರಿಗೆ ಸಿರೀಯಸ್ ಆಗಿದೆ ಆಸ್ಪತ್ರೆಗೆ ಕೊಂಡು ಹೋಗಿರುವುದಾಗಿ ತಿಳಿಸಿರುತ್ತಾರೆ ಈ ಹಿಂದೆ ಗಂಡ ವಿಲ್ಸನ್ ಪದೇ ಪದೇ ಅಮಲು ಪದಾರ್ಥ ಸೇವಿಸುತ್ತಿದ್ದ ಬಗ್ಗೆ ಹೇಳುತ್ತಿದ್ದು ಗಂಡನಿಂದ ಹಿಂಸೆಯಾಗಿರಬಹುದೆಂಬ ಅನುಮಾನ ಹಾಗೂ ಬೇರೆ ಯಾವುದೋ ಕಾರಣದಿಂದ ಸತ್ತಿರುವುದಾಗಿ ಮ್ಯಾಥ್ಯೂ ಎಮ್.ಜೆ ರವರು ದೂರು ನೀಡಿದ್ದು ಅದರಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 10/2014 ಕಲಂ 174 (ಸಿ) ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment