ಕರ್ನಾಟಕ ಪೊಲೀಸ್ (ತಿದ್ದುಪಡಿ) ಅಧಿನಿಯಮ 2012 ರ ಚಾಪ್ಟರ್ 2ಎ ರಲ್ಲಿನ 20 ಸಿ ರಲ್ಲಿ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ ಮತ್ತು ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರವನ್ನು ಕರ್ನಾಟಕ ಸರ್ಕಾರವು ಅಧಿಸೂಚನೆ ಸಂಖ್ಯೆ. ಒಇ/208/ಪೊಸಿ/2012 ದಿನಾಂಕ 04/09/2012 ರ ಆದೇಶದಂತೆ ರಚನೆ ಮಾಡಲಾಗಿದೆ. ಇದರ ಮೂಲ ಉದ್ದೇಶ ಜಿಲಾ ಮಟ್ಟದ ದೂರುಗಳ ಪ್ರಾಧಿಕಾರವು ಪೊಲೀಸ್ ಉಪಾಧೀಕ್ಷಕರು ಮತ್ತು ಅವರ ಕೈ ಕೆಳಗಿನ ಪೊಲೀಸ್ಆಧಿಕಾರಿ/ಸಿಬ್ಬಂದಿಗಳು ಕರ್ತವ್ಯ ನಿರತ ಸಮಯ/ತನಿಖೆಯ ವೇಳೆಯಲ್ಲಿ ಗಂಭೀರ ದುರ್ನಡತೆ ತೋರಿಸಿದ ಪಕ್ಷದಲ್ಲಿ ಸಾರ್ವಜನಿಕರು ನೇರವಾಗಿ ದೂರು ಸಲ್ಲಿಸಬಹುದೆಂದು ಈ ಪ್ರಕಟಣೆ ತಿಳಿಸುತ್ತದೆ. ಮರಣಾಂತಿಕ ಹಲ್ಲೆ ಮತ್ತು ಪೊಲೀಸ್ ಅಧೀನದಲ್ಲಿದ್ದಾಗ ಹಠ ಸಂಬೋಗ ಮಾಡುವಂತಹ ಪ್ರಸಂಗಗಳಲ್ಲಿ ಅಧಿಕಾರಿಯ ಸಹಕಾರವಿದ್ದ ಪಕ್ಷದಲ್ಲಿ ದೂರು ನೀಡಲು ಉಲ್ಲೇಖಿತವಾಗಿದೆ.
ಇಂತಹ ದೂರುಗಳನ್ನು ಈ ಕೆಳಕಂಡ ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರದ ಅಧಿಕಾರಿಗಳಲ್ಲಿ ಲಿಖಿತದ ಮೂಲಕ ಸಲ್ಲಿಸಲು ಸೂಚಿಸಿದೆ.
ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರದ ಅಧ್ಯಕ್ಷರು:- ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ,ಹೈವ್ಯೂ,ವಿನೋಬ ರಸ್ತೆ, ಮೈಸೂರು-ಪಿನ್ ಕೋಡ್ ನಂ.570 005 (ದೂರವಾಣಿ ಸಂಖ್ಯೆ. ಕಛೇರಿ. 0821-2516300/ಟೋಲ್ ಫ್ರೀ.ದೂರವಾಣಿ ಸಂಖ್ಯೆ.1800-425-1078.ಫ್ಯಾಕ್ಸ್ ದೂರವಾಣಿ ಸಂಖ್ಯೆ. 0821-2414086)ಈ-ಮೇಲ್ ಐಡಿ-rc-kamy@kar.nic.in
|
ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು:- ಪೊಲೀಸ್ ಅಧೀಕ್ಷಕರು,ಉಡುಪಿ ಜಿಲ್ಲೆ,ಜಿಲ್ಲಾ ಪೊಲೀಸ್ ಕಛೇರಿ, ಪ್ರವಾಸಿ ಮಂದಿರದ ರಸ್ತೆ,ಬನ್ನಂಜೆ,ಉಡುಪಿ.ಪಿನ್ ಕೋಡ್ ನಂ.576 101 (ದೂರವಾಣಿ ಸಂಖ್ಯೆ. ಕಛೇರಿ, 820-2534777 ಫ್ಯಾಕ್ಸ್ ದೂರವಾಣಿ ಸಂಖ್ಯೆ.0820-2526709) ಈಮೇಲ್ಐಡಿ- spudp@ksp.gov.in
|
ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರು:- ಶ್ರೀ.ಜಿ.ಎಸ್.ದಿಡ್ಡಿಮನಿ, ನಿವೃತ್ತ ಸೆಲೆಷನ್ ಗ್ರೇಡ್ ಕೆಎಎಸ್ ಅಧಿಕಾರಿ, ನಂಬರ್. 627, 3ನೇ ಮೆಯಿನ್ ರೋಡ್,ಅರವಿಂದ ನಗರ, ಮೈಸೂರು.
|
No comments:
Post a Comment