ಇಸ್ಪಿಟ್ ಜುಗಾರಿ ಪ್ರಕರಣ
- ಬೈಂದೂರು: ದಿನಾಂಕ 22/12/2014ರಂದು 18:30 ಗಂಟೆಯ ಸಮಯಕ್ಕೆ ಬೈಂದೂರು ಪೊಲೀಸ್ ಠಾಣಾ ಪಿಎಸ್‌ಐ ಸಂತೋಷ ಎ ಕಾಯ್ಕಿಣಿರವರಿಗೆ ಬಾತ್ಮಿದಾರರಿಂದ ಕುಂದಾಪುರ ತಾಲೂಕು ಬೈಂದೂರು ಗ್ರಾಮದ ವಿದ್ಯಾನಗರ ಎಂಬಲ್ಲಿ ಹಿಂದೂ ರುದ್ರಭೂಮಿಯ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಜುಗಾರಿ ಆಟವಾಡುತ್ತಿದ್ದಾರೆಂದು ಖಚಿತ ಮಾಹಿತಿ ಬಂದ ಮೇರೆಗೆ ಠಾಣಾ ಸಿಬ್ಬಂದಿಯವರು ಮತ್ತು ಪಂಚರ ನೆರವಿನಿಂದ 19:00 ಗಂಟೆಯ ಸಮಯಕ್ಕೆ ದಾಳಿ ಮಾಡಿದಾಗ ಇಬ್ಬರು ಅಲ್ಲಿಂದ ಓಡಿ ಹೋಗಿದ್ದು ಆಟವಾಡುತ್ತಿದ್ದ 1) ವಿಶ್ವನಾಥ, (45) ತಂದೆ:ನಾರಾಯಣ ದೇವಾಡಿಗ, ವಾಸ:ಸಂಕಜ್ಜಿಮನೆ, ಬಿಯಾರ, ಬೈಂದೂರು ಗ್ರಾಮ, ಕುಂದಾಪುರ 2)ರಾಮಕೃಷ್ಣ (33) ತಂದೆ:ಗಣಪ ವಾಸ:ಕಳವಾಡಿ, ಮಾರಿಕಾಂಬಾ ದೇವಸ್ಥಾನದ ಬಳಿ, ಮಯ್ಯಾಡಿ ಅಂಚೆ, ಬೈಂದೂರು ಗ್ರಾಮ ಕುಂದಾಪುರ 3) ವಿಠ್ಠಲ (45) ತಂದೆ:ನಾಗ ದೇವಾಡಿಗ, ವಾಸ:ಸಂಕಜ್ಜಿಮನೆ, ಜನತಾ ಕಾಲೋನಿ, ಬೈಂದೂರು ಗ್ರಾಮ ಇವರುಗಳನ್ನು ದಸ್ತಗಿರಿ ಮಾಡಿ ಆಟಕ್ಕೆ ಬಳಸಿದ 1785/- ರೂಪಾಯಿ ನಗದು, ಇಸ್ಪಿಟ್ ಕಾರ್ಡ್ -52, ಹಳೆಯ ನ್ಯೂಸ್ ಪೇಪರ್ -1 ಹಾಗೂ ಮೇಣದ ಬತ್ತಿ -1 ನ್ನು ಸ್ವಾಧೀನಪಡಿಸಿಕೊಂಡಿದ್ದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 259/2014 ಕಲಂ: 87 ಕೆ.ಪಿ ಕಾಯಿದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಗಂಗೊಳ್ಳಿ:ದಿನಾಂಕ:22/12/2014 ರಂದು ಸಾಯಂಕಾಲ ಗಂಗೊಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಗೋವರ್ಧನ್ ಎಂ.ರವರು ಗಂಗೊಳ್ಳಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಗಂಗೊಳ್ಳಿ ಗ್ರಾಮದ ರಥಬೀದಿಯಲ್ಲಿ ಶ್ರೀನಿವಾಸ ದೇವಾಡಿಗರ ಗೂಡಂಗಡಿಯ ಮರೆಯಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಒಬ್ಬ ವ್ಯಕ್ತಿ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರನ್ನು ಒಟ್ಟುಗೂಡಿಸಿ ಹಣವನ್ನು ವಸೂಲಿ ಮಾಡಿ ಮಟ್ಕಾ ಜುಗಾರಿ ಆಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಂತೆ ಪೊಲೀಸ್ ಉಪನಿರೀಕ್ಷಕರು ಸಿಬ್ಬಂದಿಯವರೊಂದಿಗೆ ಜೀಪಿನಲ್ಲಿ 19:00 ಗಂಟೆಗೆ ದಾಳಿ ಮಾಡಿ ಆರೋಪಿ ಶ್ರೀನಿವಾಸ ದೇವಾಡಿಗ (54), ತಂದೆ:ದಿವಂಗತ ಮಂಜ ದೇವಾಡಿಗ, ವಾಸ:ರಥಬೀದಿ, ಗಂಗೊಳ್ಳಿ, ಗಂಗೊಳ್ಳಿ ಗ್ರಾಮ, ಕುಂದಾಪುರ ತಾಲೂಕುರವರನ್ನು ದಸ್ತಗಿರಿ ಮಾಡಿ, ಸ್ಥಳದಲ್ಲಿಯೇ ಮಹಜರು ಮುಖಾಂತರ ಮಟ್ಕಾ ಜುಗಾರಿ ಆಟಕ್ಕೆ ಉಪಯೋಗಿಸಿದ ನಗದು ಹಣ 650/-ರೂಪಾಯಿ, ಮಟ್ಕಾ ನಂಬ್ರ ಬರೆದ ಕಾಗದದ ಚೀಟಿ-1, ಬಾಲ್ ಪೆನ್‌ನ್ನು ಸ್ವಾಧೀನ ಪಡಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿ 20:00 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದು ದಸ್ತಗಿರಿ ಕ್ರಮ ಜರುಗಿಸಿ, ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 211/2014 ಕಲಂ 78(1)(3) ಕರ್ನಾಟಕ ಪೋಲಿಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಅಜೆಕಾರು:ದಿನಾಂಕ:22/12/2014 ರಂದು 11:45 ಗಂಟೆಗೆ ಕಾರ್ಕಳ ತಾಲೂಕು ಮರ್ಣೆ ಗ್ರಾಮದ ಅಜೆಕಾರು ಲಕ್ಷ್ಮೀ ಬಾರ್ ಎದುರು ರಿಕ್ಷಾ ಸ್ಟಾಂಡ್ ಬಳಿ ಪಿರ್ಯಾದಿದಾರರಾದ ರಾಜೇಂದ್ರ ಆಚಾರಿ (28) ತಂದೆ:ಗೋಪಾಲ ಆಚಾರಿ ವಾಸ:ಬುಕ್ಕಿಗುಡ್ಡೆ ಪೆರ್ಡೂರುರವರು ಚಾಲಕರಾಗಿರುವ ಕೆಎ 20 ಸಿ 3555 ನೇದನ್ನು ಚಲಾಯಿಸಿಕೊಂಡು ಅಜೆಕಾರಿನಿಂದ ಉಡುಪಿ ಕಡೆಗೆ ಹೊರಟಾಗ ಆರೋಪಿತರುಗಳಾದ 1)ಶ್ರೀಕಾಂತ,2)ದಿನೇಶ ಸದ್ರಿ ಬಸ್ಸಿಗೆ ಕೆಎ 20 ಬಿ 2498 ನೇ ಬಸ್ಸನ್ನು ಅಡ್ಡವಿಟ್ಟು ಬಸ್ಸು ಮುಂದಕ್ಕೆ ಹೋಗದಂತೆ ಅಕ್ರಮವಾಗಿ ತಡೆದು ನಿಲ್ಲಿಸಿ ಆರೋಪಿತರು ಬಸ್ಸಿನ ಟೈಮಿಂಗ್ ವಿಚಾರದಲ್ಲಿ ಬಾರಿ ಮಾತನಾಡುತ್ತಿಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು, ರಾಜೇಂದ್ರ ಆಚಾರಿರವರು ಚಲಾಯಿಸಿಕೊಂಡಿದ್ದ ಬಸ್ಸಿನೊಳಗೆ ಬಂದು ಆರೋಪಿತರಿಬ್ಬರು ರಾಜೇಂದ್ರ ಆಚಾರಿರವರ ಬಲ ಕೈಯನ್ನು ತಿರುಚಿ ಬಲಕೆನ್ನೆಗೆ ಕೈಯಿಂದ ಹೊಡೆದು, ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದು ಬಸ್ಸಿನ ಟೈಮಿಂಗ್ ವಿಚಾರ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ. ಈ ಬಗ್ಗೆ ರಾಜೇಂದ್ರ ಆಚಾರಿರವರು ನೀಡಿದ ದೂರಿನಂತೆ ಅಜೆಕಾರು ಠಾಣಾ ಅಪರಾಧ ಕ್ರಮಾಂಕ:51/2014 ಕಲಂ:341, 323, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
- ಅಜೆಕಾರು:ದಿನಾಂಕ:22/12/2014 ರಂದು ಕಾರ್ಕಳ ತಾಲೂಕು ಮರ್ಣೆ ಗ್ರಾಮದ ಅಜೆಕಾರು ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ 11:30 ಗಂಟೆಗೆ ಪಿರ್ಯಾದಿದಾರರಾದ ಶ್ರೀಕಾಂತ (25) ತಂದೆ:ಶ್ರೀಧರ ಪೂಜಾರಿ ವಾಸ:ಮಾರಿಗುಡಿ ಹತ್ತಿರ,ಮುನಿಯಾಲುರವರು ಚಾಲಕರಾಗಿರುವ ಬಸ್ಸಿಗೆ, ಕೆ ಎ 20 ಸಿ 3555 ನೇ ಬಸ್ ಚಾಲಕನು ಬಸ್ಸನ್ನು ಟೈಮಿಂಗ್ ವಿಚಾರದಲ್ಲಿ ಅಡ್ಡ ಇಟ್ಟ ಬಗ್ಗೆ ತನ್ನ ಬಸ್ಸಿನಿಂದ ಇಳಿದು ವಿಚಾರಿಸಲು ಹೋದಾಗ ಆರೋಪಿತ ಎಸ್.ವಿ.ಟಿ ಬಸ್ ಚಾಲಕ ರಾಜೇಂದ್ರನು ತನ್ನ ಕೆಎ 20 ಸಿ 3555 ನೇ ಬಸ್ಸನ್ನು ಒಮ್ಮೆಲೆ ನಿರ್ಲಕ್ಷತನದಿಂದ ಮುಂದಕ್ಕೆ ಚಲಾಯಿಸಿದ ಕಾರಣ ಸದ್ರಿ ಬಸ್ಸಿನ ಬಲ ಬದಿಯ ಬಂಪರು ಶ್ರೀಕಾಂತರವರ ಎದೆಗೆ ಢಿಕ್ಕಿ ಹೊಡೆದ ಪರಿಣಾಮ ಶ್ರೀಕಾಂತರವರ ಎದೆಗೆ ಗುದ್ದಿದ ಗಾಯವುಂಟಾಗಿರುವುದಾಗಿದೆ.ಈ ಬಗ್ಗೆ ಶ್ರೀಕಾಂತರವರು ನೀಡಿದ ದೂರಿನಂತೆ ಅಜೆಕಾರು ಠಾಣಾ ಅಪರಾಧ ಕ್ರಮಾಂಕ 53/2014 ಕಲಂ:279,337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment