ಅಪಘಾತ
ಪ್ರಕರಣಗಳು
- ಕೊಲ್ಲೂರು: ದಿನಾಂಕ 22/12/2014ರಂದು ಸುಮಾರು 15:45 ಜಡ್ಕಲ್ ಗ್ರಾಮದ ಹಾಲ್ಕಲ್ ಜಂಕ್ಷನ್‌ನಲ್ಲಿ ಕೊಲ್ಲೂರು ಕಡೆಯಿಂದ ಕುಂದಾಪುರ ಕಡೆಗೆ ತೆರಳುತ್ತಿದ್ದ ಬಸ್ ನಂಬ್ರ ಕೆಎ 55 3294ನೇ ಶ್ರೀ ಗಣೇಶ್ ಟೂರ್ಸ್ & ಟ್ರಾವೆಲ್ಸ್ ಬಸ್ ನ ಚಾಲಕನು ತನ್ನ ಬಾಬ್ತು ಬಸ್ಸನ್ನು ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಕುಂದಾಪುರ ಕಡೆಯಿಂದ ಕೊಲ್ಲೂರು ಕಡೆಗೆ ಬರುತ್ತಿದ್ದ ಕೆಎ 20ಸಿ 1419ನೇ ಓಮಿನಿ ಕಾರಿಗೆ ಡಿಕ್ಕಿ ಹೊಡೆದು ಸ್ವಲ್ಪ ದೂರದವರೆಗೆ ಎಳೆದುಕೊಂಡು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೋಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ 8 ಜನರಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು ಮಾತ್ರವಲ್ಲದೆ ಕಾರು ಸಂಪೂರ್ಣ ಜಖಂಗೊಂಡಿರುತ್ತದೆ ಈ ಅಪಘಾತಕ್ಕೆ ಕೆಎ 55 3294 ನೇ ಶ್ರೀ ಗಣೇಶ್ ಟೂರ್ಸ್ & ಟ್ರಾವೆಲ್ಸ್ ಬಸ್ಸಿನ ಚಾಲಕನ ಅತೀವೇಗ ಹಾಗೂ ನಿರ್ಲಕ್ಷತನದ ಚಾಲನೆಯೆ ಕಾರಣವಾಗಿರುತ್ತದೆ ಎಂಬುದಾಗಿ ಪಿರ್ಯಾದಿದಾರರಾದ ವಿದ್ಯಾ (20) ತಂದೆ ಕುಶಲ ಶೆಟ್ಟಿ ವಾಸ ಮಹಾಬಲ ಶೆಟ್ಟಿರವರ ಮನೆಯ ಹತ್ತಿರ ಜಡ್ಕಲ್ ಗ್ರಾಮ ಕುಂದಾಪುರ ತಾಲೂಕು ಇವರು ನೀಡಿದ ದೂರಿನಂತೆ ಕೊಲ್ಲೂರು ಠಾಣಾ ಅಪರಾಧ ಕ್ರಮಾಂಕ 81/2014 ಕಲಂ 279, 338 ಐ.ಪಿ.ಸಿಯಂತೆಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
- ಕುಂದಾಪುರ: ದಿನಾಂಕ 22/12/2014ರಂದು ಸಮಯ ಸಂಜೆ 7:30 ಗಂಟೆಗೆ ಕುಂದಾಪುರ ತಾಲೂಕು ಕೋಣಿ ಗ್ರಾಮದ ಕಟ್ಗೆರೆ ಸಫಾನ್ ವೆಲ್ಡಿಂಗ್ ವರ್ಕ್ಸ್ ಎದುರುಗಡೆ ರಸ್ತೆಯಲ್ಲಿ ಪಿರ್ಯಾದಿ ರಹೀಂ ಎಂಬವರು KL 23D 8396ನೇ ಬೈಕಿನಲ್ಲಿ ಸಲೀಂ ಕೆ ರವರ ಹಿಂದೆ ಕುಳಿತು ಅಸೋಡು ಫ್ಯಾಕ್ಟರಿ ಕಡೆಯಿಂದ ಕೊಟೇಶ್ವರ ಕಡೆಗೆ ಬಂದು ಸೂಚನೆ ನೀಡಿ ರಸ್ತೆಯ ಬಲಬದಿಗೆ ತಿರುಗಿಸುವಾಗ, ಆಪಾದಿತ ಚಂದ್ರಕಾಂತ ಎಂಬವರು KA 31Q 9668ನೇ ಬೈಕಿನಲ್ಲಿ ಕುಪ್ಪಯ್ಯ ಉಪ್ಪು ಅಂಬಿಗಾ ಎಂಬವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಅದೇ ದಿಕ್ಕಿನಿಂದ ಅತೀವೇಗ ಹಾಗೂ ಅಜಾಗರುಕತೆಯಿಂದ ಸವಾರಿ ಮಾಡಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ವಾಹನಗಳ ಸಮೇತ ರಸ್ತೆಗೆ ಬಿದ್ದು ಕುಪ್ಪಯ್ಯ ಉಪ್ಪು ಅಂಬಿಗಾ ಎಂಬವರ ತಲೆಗೆ, ಮೈ ಕೈಗೆ ತರಚಿದ ಗಾಯ ಹಾಗೂ ಒಳನೋವು ಉಂಟಾಗಿ ಕೊಟೇಶ್ವರ ಎನ್.ಆರ್ ಆಚಾರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಹೋಗಿ ಅಲ್ಲಿಂದ ಹೆಚ್ಚಿನ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬುದಾಗಿ ರಹೀಂ (50) ತಂದೆ ಪುಡಿಕುಂಜಿ ರಾವ್ತಾರ್ ವಾಸ ಸಫಾನ್ ವೆಲ್ಡಿಂಗ್ ವರ್ಕ್ಸ್ ಕಟ್ಗೆರೆ ಕೋಣಿ ಗ್ರಾಮ, ಕುಂದಾಪುರ ತಾಲೂಕು ಇವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 158/2014 ಕಲಂ 279, 337 ಐ.ಪಿ. ಸಿಯಂತೆಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
- ಉಡುಪಿ: ದಿನಾಂಕ 22/12/2014ರಂದು ಬೆಳಿಗ್ಗೆ 5:45 ಲೋಕೇಶ್ ಪಾಲನ್ ಇವರು ತನ್ನ ಬಾಬ್ತು ಮೊಟಾರು ಸೈಕಲ್ ನಲ್ಲಿ ಸವಾರಿ ಮಾಡಿಕೊಂಡು ಬೆಳಿಗ್ಗೆ ಎಳ್ಳಮಾವಾಸೆ ಸಮುದ್ರ ಸ್ನಾನ ಮಾಡಿ ವಾಪಾಸು ಮನೆಗೆ ಹೋಗಿತ್ತಿರುವಾಗ ಪುತ್ತೂರು ಮತ್ತು ಸಂತೆಕಟ್ಟೆ ಕಡೆಗ ಹೋಗುವ ರಸ್ತೆ ಜಂಕ್ಷನ್ ಬಳಿ ತಲುಪಿದಾಗ ತನ್ನ ಮೋಟಾರು ಸೈಕಲ್ ಎದುರಿನಿಂದ ಒಬ್ಬಾತ ಹೆಂಗಸನ್ನು ಕುಳ್ಳಿರಿಸಿಕೊಂಡು ಮೊಟಾರು ಸೈಕಲ್‌ನಲ್ಲಿ ಹೋಗುತ್ತಿದ್ದು ನಾಯಿಯೊಂದು ಅಡ್ಡ ಬಂದು ಒಮ್ಮೇಲೆ ಬ್ರೇಕ್ ಹಾಕಿದಾಗ ಮೋಟಾರು ಸೈಕಲಿನಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಹೆಂಗಸು ರಸ್ತೆಗೆ ಎಸೆಯಲ್ಪಟ್ಟಿರುತ್ತಾರೆ. ಅವರ ತಲೆಗೆ ತೀವ್ರ ಒಳಜಖಂ ಆಗಿರುತ್ತದೆ. ಅಪಘಾತಗೊಂಡ ಮೋಟಾರು ಸೈಕಲ್ ನಂಬ್ರ ನೋಡಲಾಗಿ ಕೆಎ 20 ವಿ 7287 ಆಗಿರುತ್ತದೆ. ನಾನು ಮತ್ತು ಅಲ್ಲಿ ಸೇರಿದವರು ಒಂದು ವಾಹನದಲ್ಲಿ ಗಾಯಾಳುವನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಿರುತ್ತೇವೆ. ಈ ಅಪಘಾತಕ್ಕೆ ಕೆಎ 20 ವಿ 7287 ನೇ ಮೋಟಾರು ಸೈಕಲ್ ಸವಾರನ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಒಮ್ಮೇಲೆ ಬ್ರೇಕ್ ಹಾಕಿದ್ದು ಕಾರಣವಾಗಿರುತ್ತದೆ. ಎಂಬುದಾಗಿ ಪಿರ್ಯಾದಿದಾರರಾದ ಲೋಕೇಶ್ ಪಾಲನ್ (34) ತಂದೆ ನಾರಾಯಣ ಪೂಜಾರಿ ವಾಸ ಶಾಲಿನಿ ಕಾಂಪ್ಲೇಕ್ಸ ಗುಂಡಿಬೈಲು ಕುಂಜಿಬೆಟ್ಟು, ಶಿವಳ್ಳಿ ಗ್ರಾಮ ಇವರು ನೀಡಿದ ದೂರಿನಂತೆ ಉಡುಪಿ ಸಂಚಾರ ಠಾಣಾ ಅಪರಾಧ ಕ್ರಮಾಂಕ 127/2014 ಕಲಂ 279, 338 ಐ.ಪಿ.ಸಿಯಂತೆಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
ಅಸ್ವಾಭಾವಿಕ
ಮರಣ ಪ್ರಕರಣ
- ಹಿರಿಯಡ್ಕ: ಪಿರ್ಯಾದಿದಾರರಾದ ಆಶಾ ಪೂಜಾರ್ತಿ (26) ಗಂಡ ಉಮೇಶ ಪೂಜಾರಿ ಮೂಡುಬೆಟ್ಟು ಮನೆ, ಕೊಡವೂರು ಗ್ರಾಮ ಉಡುಪಿ ತಾಲೂಕು ಇವರ ಅಣ್ಣ ಅಣ್ಣು ಪೂಜಾರಿ (50) ರವರು ವಿಪರೀತ ಮದ್ಯ ಸೇವಿಸುವ ಚಟದವರಾಗಿದ್ದು ಅವರಿಗೆ ಉಡುಪಿಯ ಬಾಳಿಗಾ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಿ ಮದ್ಯವರ್ಜನೆ ಮಾಡಿಸಿದರೂ ಕುಡಿತದ ಚಟ ಬಿಡಲಾಗದೆ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 23/12/14 ರಂದು ಅಪರಾಹ್ನ 12-00 ಗಂಟೆಯಿಂದ 12-30 ಗಂಟೆಯ ನಡುವಿನ ವೇಳೆಯಲ್ಲಿ ಪೆರ್ಡೂರು ಗ್ರಾಮದ ಹೆರ್ಡೆ ಎಂಬಲ್ಲಿಯ ತನ್ನ ಮನೆಯ ಸಮೀಪದ ರೆಂಜದ ಮರಕ್ಕೆ ನೈಲಾನ್ ಹಗ್ಗದ ಸಹಾಯದಿಂದ ಕುತ್ತಿಗೆಗೆ ನೇಣು ಹಾಕಿ ಎತ್ತರದ ಮರದ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿ ಕೊಂಡಿರುವುದಾಗಿದೆ ಎಂಬುದಾಗಿ ಆಶಾ ಪೂಜಾರ್ತಿ ಇವರು ನೀಡಿದ ದೂರಿನಂತೆ ಹಿರಿಯಡ್ಕ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 24/14 ಕಲಂ 174 ಸಿ.ಆರ್.ಪಿ.ಸಿಯಂತೆಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ.
No comments:
Post a Comment