Monday, May 02, 2011

Daily Crime Reported on 02/05/2011 at 17:00 Hrs

ಮೋಟಾರು ಸೈಕಲ್ ಕಳವು ಪ್ರಕರಣ
  • ಶಿರ್ವಾ: ದಿನಾಂಕ 26/04/2011 ರಂದು ರಾತ್ರಿ 23:00 ಗಂಟೆಯಿಂದ ದಿನಾಂಕ 27/04/2011 ಬೆಳಿಗ್ಗೆ 06:00 ಗಂಟೆಯ ಮಧ್ಯವಾದಿಯಲ್ಲಿ ಉಡುಪಿ ತಾಲೂಕು ಕುತ್ಯಾರು ಗ್ರಾಮದ ಶ್ರೀಮತಿ ಶೃಂಗಾರಿ ಪಿ ಹೆಗ್ಡೆ, (60) ಗಂಡ: ಪಿ ಎಸ್‌ ಹೆಗ್ಡೆ, ಎಂಬವರ ವಾಸ್ತವ್ಯ ಮನೆಯ ಕಂಪೌಂಡಿನ ಒಳಗೆ ಕಾರು ಶೆಡ್ಡಿನಲ್ಲಿ ಇರಿಸಿದ್ದ ಹಿರೋ ಹೊಂಡ ಸ್ಪ್ಲೆಂಡರ್‌ ಬೈಕ್‌ ನಂಬ್ರ ಕೆ ಎ 20 ಯು 3741ನೇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ। ಕಳವಾದ ಮೋಟಾರ್‌ ಸೈಕಲ್‌ ನ ಬೆಲೆ ರೂಪಾಯಿ 20,000/- ಆಗಿರುತ್ತದೆ ಎಂಬುದಾಗಿ ಶ್ರೀಮತಿ ಶೃಂಗಾರಿ ಪಿ ಹೆಗ್ಡೆ ರವರು ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 28/2011 ಕಲಂ 379 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅನುಮಾನಾಸ್ಪದ ವ್ಯಕ್ತಿಯ ಬಂಧನ
  • ಹೆಬ್ರಿ: ದಿನಾಂಕ: 02-05-11 ರಂದು ಸಂತೋಷ ಶೆಟ್ಟಿ ಪಿಎಸ್‌ಐ ಹೆಬ್ರಿ ಪೊಲೀಸ್ ಠಾಣೆರವರು ಸಿಬ್ಬಂದಿಯವರೊಂದಿಗೆ ಕರ್ತವ್ಯದಲ್ಲಿದ್ದಾಗ ಬೆಳಿಗ್ಗೆ 10:00 ಗಂಟೆಗೆ ಕಾರ್ಕಳ ತಾಲೂಕು ಹೆಬ್ರಿ ಗ್ರಾಮದ ತಾಣ ಶ್ರೀ ಅರ್ಧನಾರೀಶ್ವರ ದೇವಸ್ಥಾನದ ಬಳಿಯಲ್ಲಿರುವ ಶ್ರೀ ಶಿವರಾಯ ದೈವದ ಗುಡಿಯ ಹೊರಗೆ ಇಟ್ಟಿದ್ದ ಕಾಣಿಕೆ ಡಬ್ಬಿಯ ಬಳಿ ಹುಡುಕಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಗ್ರಾಮಸ್ಥರು ಸುತ್ತುವರಿದು ನಿಂತಿದ್ದು ಅಲ್ಲಿಗೆ ಹೋಗಿ ಸದ್ರಿ ವ್ಯಕ್ತಿಯನ್ನು ವಿಚಾರಿಸಿದಲ್ಲಿ ಆತನು ತನ್ನ ಹೆಸರು ಸಂತೋಷ ಸಮಗಾರ (27) ಬಿನ್ ಗೋವಿಂದ ಸಮಗಾರ, ವಾಸ: ನಡಗುಡ್ಡೆ, ಸೇನಾಪುರ ಗ್ರಾಮ, ಕುಂದಾಪುರ ತಾಲೂಕು ಎಂದು ತಿಳಿಸಿದ್ದು ತನ್ನ ಸಂಶಯಾಸ್ಪದ ವರ್ತನೆಯ ಬಗ್ಗೆ ಹಾಗೂ ಸದ್ರಿ ಸ್ಥಳದಲ್ಲಿ ತನ್ನ ಇರುವಿಕೆಯ ಬಗ್ಗೆ ಸಮರ್ಪಕವಾದ ಉತ್ತರ ನೀಡದೇ ತಡಬಡಾಯಿಸಿದ್ದು ಈತನು ಯಾವುದೋ ಬೇವಾರಂಟು ತಕ್ಷೀರು ಎಸಗಲು ಬಂದಿರಬಹುದಾಗಿರುವುದರಿಂದ ಮುಂದಿನ ಒಂದು ವರ್ಷದ ಕಾಲ ಉತ್ತಮ ಗುಣನಡತೆಯ ಬಗ್ಗೆ ಸೂಕ್ತ ಮುಚ್ಚಳಿಕೆ ಪಡೆದುಕೊಳ್ಳುವ ಬಗ್ಗೆ ಹೆಬ್ರಿ ಠಾಣಾ ಅಪರಾಧ ಕ್ರಮಾಂಕ 23/11 ಕಲಂ 109 ಸಿಆರ್‌ಪಿಸಿ ಯಂತೆ ಪ್ರರಕಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ।
ಜುಗಾರಿ ದಾಳಿ ಪ್ರಕರಣ
  • ಕೋಟ : ದಿನಾಂಕ 01/05/2011 ರಂದು 17:15 ಗಂಟೆಗೆ ಮಹೇಶ್‌ ಪ್ರಸಾದ್‌, ಪಿಎಸ್‌ಐ, ಕೋಟ ಪೊಲೀಸ್‌ ಠಾಣೆ ರವರು ಸಿಬ್ಬಂದಿಯವರೊಂದಿಗೆ ಕುಂದಾಪುರ ತಾಲೂಕು ಮೊಳಹಳ್ಳಿ ಗ್ರಾಮದ ಮರತ್ತೂರು ಎಂಬಲ್ಲಿ ಹಾಡಿಯಲ್ಲಿ ಕೆಲವು ಜನರು ಸೇರಿ ಕೋಳಿಗಳ ಮೇಲೆ ಹಣವನ್ನು ಕಟ್ಟಿ ಜೂಜಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಕೋಳಿ ಅಂಕಕ್ಕೆ ದಾಳಿ ನಡೆಸಿ ಆರೋಪಿತರಾದ ವಾಸು ಪೂಜಾರಿ (45) ಮತ್ತು ಬಾಬು (31)ರವರನ್ನು ದಸ್ತಗಿರಿ ಮಾಡಿ ಅವರಿಂದ 5 ಕೋಳಿ ಮತ್ತು ಒಟ್ಟು ಆಟಕ್ಕೆ ಬಳಸಿದ ರೂಪಾಯಿ 360/-, ಮತ್ತು 2 ಬಾಳನ್ನು ಮುಂದಿನ ಕ್ರಮದ ಬಗ್ಗೆ ಮಹಜರು ಮೂಲಕ ಸ್ವಾದೀನಪಡಿಸಿಕೊಂಡಿರುವುದಾಗಿದೆ। ದಾಳಿ ಸಮಯ ಸಮಯ ಆರೋಪಿತರಾದ ನಾರಾಯಣ ಶೆಟ್ಟಿ, ಪ್ರೀತಮ್ ಹೆಗ್ಡೆ ಎಂಬವರು ಪರಾರಿಯಾಗಿರುವುದಾಗಿದೆ. ಈ ಬಗ್ಗೆ ಕೋಟಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 81/2011 ಕಲಂ 87, 93 ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಇತರ ಪ್ರಕರಣ
  • ಮಲ್ಪೆ: ದಿನಾಂಕ: 27-04-2011 ರಂದು 09:00 ಗಂಟೆಗೆ ಅಲ್ಬರ್ಟ ವಿಲಿಯಂ ಸೋನ್ಸ್ ಬಿನ್ ದಿವಂಗತ . ಇಮ್ಯೂನುವೆಲ್ ಪಿಟರ್ ಸನ್ಸ್, ಮನೆ ನಂಬ್ರ: 30-12(8)(9) ಮೈನ್ ರೋಡ್ ಮಲ್ಪೆ ಕೊಡವೂರು ಗ್ರಾಮ ಎಂಬವರ ಮನೆಯ ಪಾಯಿಖಾನೆಗೆ ಮೇಲೆ ಹೊದಿಸಿದ ಸಿಮೆಂಟ್ ಶೀಟನ್ನು ಆರೋಪಿಗಳಾದ ಜಗ್ಗ @ ಜಗದೀಶ ಮತ್ತು ಕಿರಣ್ ತೊಟ್ಟಂ ರವರು ಪುಡಿ ಮಾಡಿದ್ದು, ಇದರಿಂದ ಸುಮಾರು 1500/- ರೂಪಾಯಿ ನಷ್ಟವುಂಟಾಗಿರುವುದಾಗಿದೆ ಎಂಬುದಾಗಿ ಅಲ್ಬರ್ಟ ವಿಲಿಯಂ ಸೋನ್ಸ್ ರವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 58/2011 ಕಲಂ 427 ಜೊತೆಗೆ 34 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: