Monday, May 02, 2011

Daily Crime Reported on 02/05/2011 at 07:00 Hrs

ಕಳವು ಪ್ರಕರಣ
  • ಪಡುಬಿದ್ರಿ: ದಿನಾಂಕ 01/05/2011 ರಂದು ಪಿರ್ಯಾದಿದಾರರಾದ ಚೇತನಾ ಸಿ ಶೆಟ್ಟಿ (24) ಗಂಡ: ಚಂದ್ರಶೇಖರ್ ಆರ್‌। ಶೆಟ್ಟಿ ವಾಸ: ಪಡುಮನೆ ಕುರ್ಕಿಲ್‌ ಬೆಟ್ಟು ಬಾಳಿಕೆ ಇನ್ನಾ ಗ್ರಾಮ ಕಾರ್ಕಳ ತಾಲೂಕು ಎಂಬವರು ಅವರ ಅತ್ತೆ ವಿಮಲಾ ಶೆಟ್ಟಿ ಹಾಗೂ ಅವರ ನಾದಿನಿ ಪದ್ಮಾವತಿ ಶೆಡ್ತಿಯವರೊಂದಿಗೆ ಕುಟುಂಬದ ಕುರ್ಕಿಲ್‌ಬೆಟ್ಟು ಬ್ರಹ್ಮಸ್ಥಾನದ ಪೂಜಾ ಕಾರ್ಯಕ್ರಮಕ್ಕೆ 12:30 ಗಂಟೆಗೆ ಹೋದವರು ವಾಪಾಸು 14:30 ಗಂಟೆಗೆ ಮನೆಗೆ ಬಂದು ನೋಡಿದಾಗ ಮನೆಯ ಎದುರು ಬಾಗಿಲಿಗೆ ಹಾಕಿದ ಬೀಗ ಮುರಿದು ಒಳ ಪ್ರವೇಶಿಸಿದ ಯಾರೋ ಕಳ್ಳರು ಮನೆಯ ಒಳಗೆ ಇದ್ದ ಗೋಡ್ರೆಜ್‌ನ ಬೀಗ ಒಡೆದು ಗ್ರೋಡೆಜ್‌ ನಲ್ಲಿದ್ದ ಪ್ಲಾಸ್ಟಿಕ್ ಬಾಕ್ಸ್ ಮತ್ತು ಅಲುಮಿನಿಯಂ ಬಾಕ್ಸ್ ನಲ್ಲಿದ್ದ ಚಿನ್ನದ ಒಡವೆಗಳಾದ 1) ಕರಿಮಣಿ ಸರ-1 ಆಂದಾಜು ತೂಕ 2 ಪವನ್ , 2) ಬಳೆಗಳು- 3 ಅಂದಾಜು ತೂಕ 3 ಪವನ್, 3) ಮುತ್ತಿನ ಸರ-1 ಅಂದಾಜು ತೂಕ 3.5 ಪವನ್, 4) ಬ್ರೇಸ್ ಲೆಟ್ -1 ಅಂದಾಜು ತೂಕ 1.5 ಪವನ್, 5) ಉಂಗುರಗಳು -2 ಅಂದಾಜು ತೂಕ 6 ಗ್ರಾಂ, 6) ಬೆಂಡೋಲೆಗಳು -2 ಅಂದಾಜು ತೂಕ 6 ಗ್ರಾಂ, 7) ಬಂಗಾರದ ನಾಣ್ಯ -1 ಅಂದಾಜು ತೂಕ 1 ಪವನ್, 8) ಚಿನ್ನದ ನಾಣ್ಯ 1 ಅಂದಾಜು ತೂಕ 1 ಪವನ್, 9) ಬ್ರೇಸ್ ಲೆಟ್ -1 ಅಂದಾಜು ತೂಕ 2.5 ಪವನ್, 10) ಬಳೆಗಳು -2 ಅಂದಾಜು ತೂಕ 3 ಪವನ್, 11) ಉಂಗುರ -2 ಅಂದಾಜು ತೂಕ 8 ಗ್ರಾಂ, 12) ಮಗುವಿನ ಚಿಕ್ಕ ಉಂಗುರ -1 ಅಂದಾಜು ತೂಕ 2 ಗ್ರಾಂ, ಇವುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಚಿನ್ನಾಭರಣದ ಅಂದಾಜು ಮೌಲ್ಯ ರೂಪಾಯಿ2,50,000/- ಆಗಬಹುದು ಎಂಬುದಾಗಿ ಚೇತನಾ ಸಿ ಶೆಟ್ಟಿ ರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 66/2011 ಕಲಂ 454, 380 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ
  • ಕಾಪು: ದಿನಾಂಕ 29/04/2011 ರಂದು 21:15 ಗಂಟೆಗೆ ಕೆಎ-20-ಬಿ-4534 ನೇ ದುರ್ಗಾಂಬಾ ಬಸ್ ಚಾಲಕ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಚಲಾಯಿಸಿಕೊಂಡು ಬಂದು ಕಾಪು ಪಡು ಗ್ರಾಮದ ಹೊಸ ಮಾರಿಗುಡಿಯ ಬಳಿ ರಾಷ್ಟ್ರೀಯ ಹೆದ್ದಾರಿ 17 ರಲ್ಲಿ ಪಿರ್ಯಾದಿದಾರರಾದ ವಾಸಿಂ ಆಕ್ರಂ (20) ಬಿನ್ ರಜಾಬ್ ಅಹಮದ್ ವಾಸ ದಾರೂಲ್ ಸಲಾಂ, ಫಿಶರಿಸ್ ರಸ್ತೆ, ಮೂಳೂರು ಗ್ರಾಮ, ಉಡುಪಿ ತಾಲೂಕು ರವರು ಕಾಪು ಬಸ್ ನಿಲ್ದಾಣದ ಬಳಿ ಬಸ್ಸಿನಿಂದ ಇಳಿಯುತ್ತಿರುವಾಗ ಬಸ್ಸಿನ ನಿರ್ವಾಹಕ ಬಸ್ಸನ್ನು ಚಲಾಯಿಸುವಂತೆ ವಿಜಿಲ್ ಹಾಕಿದ್ದು, ಚಾಲಕ ಒಮ್ಮೇಲೆ ನಿರ್ಲಕ್ಷತನದಿಂದ ಬಸ್ಸನ್ನು ಚಲಾಯಿಸಿದ ಕಾರಣ ವಾಸಿಂ ಆಕ್ರಂ ರವರು ಡಾಂಬರು ರಸ್ತೆಗೆ ಬಿದ್ದು, ಅವರ ದವಡೆಗೆ ಗುದ್ದಿದ ಗಾಯ ಹಾಗೂ ಹಲ್ಲಿನ ಸೆಟ್ ಜಾರಿ ಹೋಗಿದ್ದು, ಸೊಂಟದ ಒಳ ಬಾಗಕ್ಕೆ ಗುದ್ದಿದ ನೋವಾಗಿರುತ್ತದೆ। ಬಸ್ಸಿನ ಚಾಲಕ ಬಸ್ಸನ್ನು ನಿಲ್ಲಿಸದೇ ಹೋಗಿರುವುದಾಗಿದೆ ಎಂಬುದಾಗಿ ವಾಸಿಂ ಆಕ್ರಂ ರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 77/2011 ಕಲಂ. 279, 338 ಐಪಿಸಿ. ಮತ್ತು 134 (ಎ) (ಬಿ) ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
ಅಸ್ವಾಭಾವಿಕ ಮರಣ ಪ್ರಕರಣಗಳು
  • ಶಂರನಾರಾಯಣ: ಪಿರ್ಯಾದಿದಾರರಾದ ಬಾಬು ನಾಯ್ಕ (60) ಬಿನ್ ದಿವಂಗತ ಗಣಪನಾಯ್ಕ ವಾಸ: ಶ್ರೀ। ನಿಲಯ, ವಂಡಾರು ಗ್ರಾಮ, ಎಂಬವರ ಕಿರಿಯ ತಮ್ಮ ಚಂದ್ರ ನಾಯ್ಕ(40) ಎಂಬವರು ದಿನಾಂಕ 30/04/2011 ರಂದು ಸಂಜೆ 06:00 ಗಂಟೆಗೆ ಆತನ ಮನೆಯ ಬಳಿ ತೆಂಗಿನ ಮರಕ್ಕೆ ನೀರು ಹಾಕುವುದನ್ನು ಪಿರ್ಯಾದಿದಾರರು ನೋಡಿದ್ದು, ದಿನಾಂಕ 01/05/2011 ರಂದು ಬೆಳಿಗ್ಗೆ 05:30 ಗಂಟೆಗೆ ಪಿರ್ಯಾದಿದಾರರ ಅಣ್ಣನ ಮಗಳು ಗುಲಾಬಿರವರು ಬಾವಿಗೆ ನೀರು ತರಲು ಚಂದ್ರ ನಾಯ್ಕರವರ ಮನೆಯ ಬಳಿ ಹೋಗಿದ್ದು, ಸದ್ರಿ ಬಾವಿಯ ಸ್ವಲ್ಪ ದೂರದಲ್ಲಿ ತೆಂಗಿನ ಮರದಡಿ ಅಂಗಳಕ್ಕೆ ಹೋಗುವ ಮೆಟ್ಟಿಲಿನ ಬಳಿ ಚಂದ್ರ ನಾಯ್ಕರವರು ಅಂಗಾತನೆ ಬಿದ್ದಿರುವುದನ್ನು ಕಂಡು ಪಿರ್ಯಾದಿದಾರರಿಗೆ ವಿಷಯ ತಿಳಿಸಿ ಪಿರ್ಯಾದಿದಾರರು ಸ್ಥಳಕ್ಕೆ ಬಂದು ನೋಡಿದಾಗ ಚಂದ್ರ ನಾಯ್ಕ ರವರ ದೇಹದ ಹಿಂಬಾಗದ ಸೊಂಟದ ಬಳಿ ತರಚಿದ ಗಾಯ ಹಾಗೂ ಒಳ ಜಖಂ ಗಾಯವಿರುವುದು ಹಾಗೂ ಎಡ ಕಾಲಿನಲ್ಲಿ ತರಚಿದ ಗಾಯ ಹಾಗೂ ತಲೆಯ ನೆತ್ತಿಯಲ್ಲಿ ಗಾಯ ಕಂಡು ಬಂದಿದ್ದು ಆತನ ಮರಣದ ಕಾರಣ ಸರಿಯಾಗಿ ತಿಳಿದು ಬಾರದಿದ್ದ ಕಾರಣ ಸೂಕ್ತ ಕಾನೂನು ಕ್ರಮ ಕೈಗೋಳ್ಳಬೇಕಾಗಿ ಬಾಬು ನಾಯ್ಕ ರವರು ನೀಡಿದ ದೂರಿನಂತೆ ಶಂರನಾರಾಯಣ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 06/2011 ಕಲಂ 174 (ಸಿ) ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಬ್ರಹ್ಮಾವರ: ದಿನಾಂಕ 24/04/2011 ರಂದು ರಾತ್ರಿ 9:30 ಗಂಟೆಗೆ ಕುಮ್ರಗೋಡು ಗ್ರಾಮದ ಕುಮ್ರಗೋಡು ಶಾಲೆಯ ಬಳಿ ಇರುವ ಶ್ರೀಮತಿ ಅಮಣ್ಣಿ (55) ಗಂಡ:ನರಸಿಂಹ ಪೂಜಾರಿ ಎಂಬವರ ಮನೆಯಲ್ಲಿ ಅವರ ಮಗಳು ಪ್ರಭಾವತಿ (30) ಗಂಡ:ಕೃಷ್ಣ ಪೂಜಾರಿ ರವರು ಹಾಲು ಕಾಯಿಸಲೆಂದು ಸೀಮೆಎಣ್ಣೆ ಸ್ಟೌವ್‌‌ಗೆ ಬೆಂಕಿ ಹಚ್ಚಿ ಸ್ಟೌವ್‌ಗೆ ಫಿನ್‌‌ ಹಾಕುವಾಗ ಒಮ್ಮೇಲೆ ಎಣ್ಣೆ ಚಿಮ್ಮಿ ಪ್ರಭಾವತಿರವರು ಧರಿಸಿದ್ದ ನೈಟಿಗೆ ಬೆಂಕಿ ತಗಲಿ ಮುಖದ ಕೆಳ ಭಾಗ ಹಾಗೂ ದೇಹದ ಹೆಚ್ಚಿನ ಭಾಗ ಬೆಂಕಿ ತಗಲಿ ಸುಟ್ಟ ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್‌ಲಾಕ್‌‌ ಆಸ್ಪತ್ರೆಗೆ ದಿನಾಂಕ 26/04/2011 ರಂದು ದಾಖಲಾದವರು ಚಿಕಿತ್ಸೆ ಫಲಕಾರಿಯಾಗದೇ ದಿವಾಂಕ 01/05/2011 ರಂದು ಸಂಜೆ 4:25 ಗಂಟೆಗೆ ಮೃತಪಟ್ಟಿರುವುದಾಗಿದೆ ಎಂಬುದಾಗಿ ಶ್ರೀಮತಿ ಅಮಣ್ಣಿ ರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 17/2011 ಕಲಂ 174 ಸಿ।ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಇತರ ಪ್ರಕರಣ
  • ಮಲ್ಪೆ: ನಾರಾಯಣ ಬಿನ್ ಸಂಜೀವ ವಾಸ: 9ನೇ ಕ್ರಾಸ್ ಲಕ್ಷ್ಮೀನಗರ, ತೆಂಕನಿಡಿಯೂರು ಗ್ರಾಮ, ಉಡುಪಿ ತಾಲೂಕು ಎಂಬವರ ಮೊಬೈಲ್ ನಂಬ್ರ 9741639142 ಗೆ ದಿನಾಂಕ 15/04/2011 ರಂದು ಮದ್ಯಾಹ್ನ 2:33 ಗಂಟೆಗೆ ಲಕ್ಷ್ಮೀನಗರ ತೆಂಕನಿಡಿಯೂರು ಗ್ರಾಮ ಎಂಬಲ್ಲಿ ಅನಾಮದೇಯ ಫೋನ್ ಕರೆ ಬಂದಿದ್ದು, ನೀನು ಮಣಿಪಾಲ ಎಂಡ್ ಪಾಯಿಂಟ್ ಗೆ ಬರುವಂತೆ ಹೇಳಿ ಬಾರದಿದ್ದಲ್ಲಿ ನಿನ್ನ ಕೈಕಾಲು ಮುರಿಸುತ್ತೇನೆ ಎಂದು ಯಾರೋ ಹೆಣ್ಣು ಧ್ವನಿಯಲ್ಲಿ ಮಾತನಾಡಿದ್ದು, ನೆರೆಮನೆಯ ದೇವೇಂದ್ರ ಎಂಬವರು ಈ ಕೆಲಸ ಮಾಡಿರಬಹುದು ಎಂದು ಸಂಶಯ ವ್ಯಕ್ತಪಡಿಸಿ ನಾರಾಯಣ ರವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 57/2011 ಕಲಂ 507 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: