Saturday, September 05, 2015

Daily Crime Reports As on 05/09/2015 at 17:00 Hrs

ಅಸ್ವಾಭಾವಿಕ ಮರಣ ಪ್ರಕರಣ
  • ಬ್ರಹ್ಮಾವರ: ದಿನಾಂಕ 03/09/2015 ರಂದು ಬೆಳಿಗ್ಗೆ  07:30 ಗಂಟೆಯಿಂದ ದಿನಾಂಕ 05/09/2015 ರಂದು ಬೆಳಿಗ್ಗೆ 07:30 ಗಂಟೆಯ ಮದ್ಯದ ಅವಧಿಯಲ್ಲಿ ಉಡುಪಿ ತಾಲೂಕು ಯಡ್ತಾಡಿ ಗ್ರಾಮದ ಮಂಜರಬೆಟ್ಟು ಎಂಬಲ್ಲಿ ಪಿರ್ಯಾದಿದಾರರಾದ ತಂಗವೇಲು (54), ತಂದೆ: ದಿ.ಮುತ್ತು, ವಾಸ: ಜನತಾ ಕಲೊನಿ ಸಾಯಿಬರಕಟ್ಟೆ ಯಡ್ತಾಡಿ ಗ್ರಾಮ ಉಡುಪಿ ತಾಲೂಕು ಇವರ ತಮ್ಮ ಈಶ್ವರ (38) ಎಂಬುವವರು ಮಂಜರಬೆಟ್ಟು ಕಲ್ಲುಕೋರೆ ಹೊಂಡದ ನೀರಿನಲ್ಲಿ ಸ್ನಾನ ಮಾಡುವಾಗ ಅಥವಾ ಮಲವಿಸರ್ಜನೆಗೆಂದು ಹೋದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 49/2015 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಗಂಡಸು ಕಾಣೆ ಪ್ರಕರಣ
  • ಹಿರಿಯಡ್ಕ: ಪಿರ್ಯಾದಿದಾರರಾದ ರಾಜು ಶೆಟ್ಟಿಗಾರ (50), ತಂದೆ; ರಂಗಪ್ಪ ಶೆಟ್ಟಿಗಾರ, ವಾಸ; ಅರುಣ ನಿಲಯ, ಪಾಡಿಗಾರ ಪೆರ್ಡೂರು ಗ್ರಾಮ ಇವರ ಮಗ ಅರುಣ್‌ ಶೆಟ್ಟಿಗಾರ (22) ಇವರು ದಿನಾಂಕ 02/09/15 ರಂದು ಬೆಳಿಗ್ಗೆ 08:00 ಗಂಟೆಗೆ ಪೆರ್ಡೂರು ಗ್ರಾಮದ ಪಾಡಿಗಾರದ ತನ್ನ ಮನೆಯಿಂದ ತನ್ನ ಕೆಎ 20 ಇಜಿ 4037 ನೇ ಬೈಕ್‌ನಲ್ಲಿ ಮನೆಯಿಂದ ಎಲ್ಲಿಗೋ ಹೋದವರು ಬಳಿಕ ಮನೆಗೆ ವಾಪಾಸು ಬಾರದೆ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಹಿರಿಯಡ್ಜ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 88/2015 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಇತರೇ ಪ್ರಕರಣ
  • ಕುಂದಾಪುರ : ದಿನಾಂಕ 05/09/2015 ರಂದು ನಾಸೀರ್ ಹುಸೇನ್ ಪಿಎಸ್ಐ ಕುಂದಾಪುರ ಠಾಣೆ ಇವರಿಗೆ ದೊರೆತ ಖಚಿತ ಮಾಹಿತಿಯಂತೆ ಕುಂದಾಪುರ ತಾಲೂಕು ಕಾಳಾವರ ಗ್ರಾಮದ ಕಾಳಾವರ ಜಂಕ್ಷನ್‌ ಬಳಿ ಬೆಳಿಗ್ಗೆ 05:10 ಗಂಟೆಗೆ ಮೋಟಾರ್‌ ಸೈಕಲ್‌ ನಂಬ್ರ ಕೆಎ 31 ಯು 7936 ನೇದರಲ್ಲಿ ಹಾಲಾಡಿಯಿಂದ ಕೋಟೇಶ್ವರ ಕಡೆಗೆ ಬರುತ್ತಿದ್ದ ಆರೋಪಿತರಾದ 1) ಮಹಮ್ಮದ್‌ ಶಫಿ (26), ತಂದೆ: ಅಬ್ದುಲ್‌ ಗುಲಾಬ್‌ ಸಾಬ್‌, ವಾಸ: ಕೊರ್ಲಗಟ್ಟ ರಸ್ತೆ, ಅಂಡಗಿ ಗ್ರಾಮ, ಶಿರ್ಸಿ ತಾಲೂಕು, ಉತ್ತರ ಕನ್ನಡ ಜಿಲ್ಲೆ, 2) ಮುಸ್ತಾಫಾ (35), ತಂದೆ: ಅಬ್ದುಲ್‌ ಅಜೀದ್‌ ಸಾಹೇಬ್‌ ವಾಸ: ಶಿಡ್ಡಿಹಳ್ಳಿ, ಗೆಂಡ್ಲ ಪಂಚಾಯ್ತು, ಸೊರಬ ತಾಲೂಕು, ಶಿವಮೊಗ್ಗ ಜಿಲ್ಲೆ ಎಂಬುವವರನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ವನ್ಯ ಜೀವಿಯಾದ ಜಿಂಕೆಯನ್ನು ಯಾವುದೇ ಪರವಾನಿಗೆ ಇಲ್ಲದೆ ಎಲ್ಲಿಯೋ ವಧೆ ಮಾಡಿ ಅಂದಾಜು ರೂಪಾಯಿ  25,000/- ಮೌಲ್ಯದ ಜಿಂಕೆಯ ಚರ್ಮವನ್ನು ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಮಾಡಿ, ಮೋಟಾರ್‌ ಸೈಕಲ್‌ ನಂಬ್ರ ಕೆಎ 31 ಯು 7936, ಎರಡು ಮೊಬೈಲ್‌, ನಗದು ರೂಪಾಯಿ 300 ನ್ನು ವಶಕ್ಕೆ ಪಡೆದುಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 300/2015, ಕಲಂ: 9, 39, 40, 44, 50, 57, ಜೊತೆಗೆ  51 ವನ್ಯಜೀವಿ ಸಂರಕ್ಷಣ ಕಾಯ್ದೆ- 1972 ರಂತೆ ಪ್ರಕರಣ ದಾಖಲಾಗಿರುತ್ತದೆ.

No comments: