ಹಲ್ಲೆ ಪ್ರಕರಣ
- ಅಮಾಸೆಬೈಲು: ದಿನಾಂಕ 03/09/2015 ರಂದು ಸಂಜೆ 18:30 ಗಂಟೆಗೆ ಪಿರ್ಯಾದಿರಾರರಾದ ತಿಮ್ಮ ಪೂಜಾರಿ (56), ತಂದೆ: ದಿ| ನಾಗ ಪೂಜಾರಿ ವಾಸ, ಕಾರಂತ ಪಾಳು ತೊಂಬಟ್ಟು ಮಚ್ಚಟ್ಟು ಗ್ರಾಮ ಕುಂದಾಪುರ ಇವರ ಮಗಳು ಮಾಲತಿ ಎಂಬುವವರಿಗೆ ಅಪಾದಿತಳಾದ ಸರೋಜದಾಸ ಬೈಯುತ್ತಿರುವಾಗ ತಿಮ್ಮ ಪೂಜಾರಿ ಯವರು ಏಕೆ ಮಗಳಿಗೆ ಬೈಯುತ್ತಿ ಎಂದು ಕೇಳಿದಾಗ ಅಪಾದಿತಳ ಗಂಡ ಹೆರಿಯ ದಾಸ ಎಂಬುವವರು ಬಂದು ಮರದ ಕೋಲಿನಿಂದ ತಿಮ್ಮ ಪೂಜಾರಿ ಯವರ ಬೆನ್ನಿಗೆ ಮತ್ತು ಪಕ್ಕೆಲುಬಿಗೆ ಹೊಡೆದು, ಸರೋಜದಾಸ ಎಂಬುವವರು ಮಾಲತಿಯವರಿಗೆ ಕೈಯಿಂದ ಗುದ್ದಿದ್ದು ಅಲ್ಲದೆ ತಪ್ಪಿಸಲು ಬಂದ ತಿಮ್ಮ ಪೂಜಾರಿ ಯವರ ಸೊಸೆ ಸುಗುಣ ರವರಿಗೆ ಅಪಾದಿತ ಹೆರಿಯ ದಾಸ ಕೋಲಿನಿಂದ ತಲೆಗೆ ಹೊಡೆದು ರಕ್ತ ಗಾಯ ಉಂಟು ಮಾಡಿ ಜೀವ ಬೆದರಿಕೆ ಹಾಕಿರುವುದಾಗಿದೆ.ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 47/2015 ಕಲಂ: 324, 504, 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment