Friday, September 04, 2015

Daily Crime Reports As on 04/09/2015 at 17:00 Hrs

ಅಪಘಾತ ಪ್ರಕರಣಗಳು
  • ಕುಂದಾಪುರ: ದಿನಾಂಕ 04/09/2015 ರಂದು ಬೆಳಿಗ್ಗೆ 8:30 ಗಂಟೆಗೆ ಕುಂದಾಪುರ ತಾಲೂಕು ಬೀಜಾಡಿ ಗ್ರಾಮದ ಬೀಜಾಡಿಯ ನಂದಿ ಗ್ರಾನೈಟ್ ಎದುರುಗಡೆ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯಲ್ಲಿ ಆಪಾದಿತ ಚಂದ್ರ.ಕೆ ಎಂಬುವವರು KA 20 M 4096ನೇ  ಮಾರುತಿ ಓಮ್ನಿ ಕಾರನ್ನು ಕುಂದಾಪುರ ಕಡೆಯಿಂದ ತೆಕ್ಕಟ್ಟೆ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕುಂದಾಪುರ ಕಡೆಗೆ ಮಣ್ಣಿನ ರಸ್ತೆಯಲ್ಲಿ ಸೈಕಲ್ ಸವಾರಿ ಮಾಡಿಕೊಂಡು ಹೋಗುತ್ತಿದ್ದ ರಾಮ ಶೆಟ್ಟಿಗಾರ್ ಎಂಬುವವರಿಗೆ  ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ರಸ್ತೆಯಲ್ಲಿ ಸೈಕಲ್ ಸಮೇತ ಬಿದ್ದು ಅವರ ತಲೆಗೆ, ಹಾಗೂ ಮೈಕೈಗೆ ರಕ್ತಗಾಯ ಹಾಗೂ ಒಳ ನೋವು ಆಗಿ ಕೊಟೇಶ್ವರ ಎನ್‌.ಆರ್ ಆಚಾರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲದ  ಕೆಎಂಸಿ ಆಸ್ಪತ್ರೆಗೆ ಹೋಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 110/2015  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಉಡುಪಿ: ಪಿರ್ಯಾದಿದಾರರಾದ ಚಂದ್ರಶೇಖರ (23), ತಂದೆ: ದಿ.ಬೀಮರಾಯ, ವಾಸ:ಅಮಲಿಹಾಳ, ಸುರುಪುರ ತಾಲೂಕು ಯಾದಗಿರಿ ಜಿಲ್ಲೆ ಇವರು ದಿನಾಂಕ 04/09/2015 ರಂದು ಬೆಳಿಗ್ಗೆ ಕೆಲಸದ ಬಗ್ಗೆ ಮನೆಯಿಂದ ಹೊರಟು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದುಕೊಂಡು ಬರುತ್ತಿರುವಾಗ ನಿಟ್ಟೂರು ಕಾಂಚನ ಹುಂಡೈ ಶೋರೂಮ್ ಎದುರು ಓರ್ವ ಅಪರಿಚಿತ ವ್ಯಕ್ತಿಯು ರಸ್ತೆ ಅಪಘಾತದಿಂದ ಗಾಯಗೊಂಡು ಬಿದ್ದಿದ್ದವನನ್ನು ಅಲ್ಲಿ ಸೇರಿದವರ ಸಹಾಯದಿಂದ ಉಪಚರಿಸಿ ನೋಡಲಾಗಿ ಆತನು ಮಾತನಾಡುತ್ತಿರಲಿಲ್ಲ. ಆತನ ಎಡಕಿವಿ, ತಲೆಗೆ ತೀವ್ರ ರಕ್ತಗಾಯವಾಗಿದ್ದಲ್ಲದೇ ಎರಡೂ ಕಾಲುಗಳಲ್ಲಿ ರಕ್ತಗಾಯವಾಗಿರುತ್ತದೆ. ನಂತರ ಆತನನ್ನು ಚಿಕಿತ್ಸೆ ಬಗ್ಗೆ 108 ಆಂಬ್ಯುಲೆನ್ಸ್ ನಲ್ಲಿ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಗಾಯಾಳುವಿನ ಹೆಸರು ರವಿ ಎಂಬುದಾಗಿ ನಂತರ ತಿಳಿಯಿತು. ಯಾವುದೋ ಅಪರಿಚಿತ ವಾಹನದ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ವಾಹನವನ್ನು ಚಲಾಯಿಸಿಕೊಂಡು ಬಂದು ಅಪಘಾತವೆಸಗಿ ವಾಹನವನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 96/2015 ಕಲಂ: 279, 338 ಐಪಿಸಿ ಮತ್ತು 134 (ಎ)(ಬಿ) ಐಎಮ್‌ವಿ ಕಾಯ್ದೆಯ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ
  • ಮಣಿಪಾಲ: ಪಿರ್ಯಾದಿದಾರರಾದ ಅಮೃತ್‌ ದಾಗಾ, ತಂದೆ: ಮನೀಶ್ ದಾಗಾ, ವಾಸ: ಡಿ-604, ಮಾಂಡವಿ ಎಮಾರಾಲ್ಡ್‌‌,  ಮಣಿಪಾಲ ಇವರು ಕೆನರಾ ಬ್ಯಾಂಕಿನ ಎಟಿಎಮ್‌ನ ಬಳಿ ಪವಿತ್ರ ರೆಸಿಡೆನ್ಸಿ ಎದುರು ಈಶ್ವರನಗರ ಎಂಬಲ್ಲಿ ನಿಲ್ಲಿಸಿದ್ದ ಹೊಂಡಾ ಆಕ್ಟಿವಾ ನಂಬ್ರ ಕೆಎ 20 ಕ್ಯೂ 8488 ನೇದನ್ನು ದಿನಾಂಕ 19/08/2015 ರಂದು ರಾತ್ರಿ 23:30 ಗಂಟೆಯಿಂದ ದಿನಾಂಕ 20/08/2015 ರಂದು ಬೆಳಿಗ್ಗೆ 07:00 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಹೊಂಡಾ ಆಕ್ಟಿವಾನ ಮೌಲ್ಯ 24,000/- ಆಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 179/2015 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: