Friday, September 04, 2015

Daily Crime Reports As on 04/09/2015 at 07:00 Hrs

ಅಪಘಾತ ಪ್ರಕರಣಗಳು
  • ಹಿರಿಯಡ್ಕ : ದಿನಾಂಕ 03/09/15 ರಂದು ಬೆಳಿಗ್ಗೆ 08:15 ಗಂಟೆಗೆ ಪೆರ್ಡೂರು ಗ್ರಾಮದ ಬುಕ್ಕಿಗುಡ್ಡೆ ಶಾಲೆಯ ಬಳಿ ಅನಂತ ಪ್ರಭು (42), ತಂದೆ;ದಿ ನಾರಾಯಣ ಪ್ರಭು, ವಾಸ; ಕುಕ್ಕೆಹಳ್ಳಿ ಇವರು ಕೆಎ 20 ಇಹೆಚ್‌ 1946 ನೇ ಬಜಾಜ್‌ ಡಿಸ್ಕವರ್‌ ಬೈಕ್‌ನಲ್ಲಿ ಹಿಂಬದಿ ಕುಳಿತು ಕುಕ್ಕೆಹಳ್ಳಿ – ಪೆರ್ಡೂರು ಕಡೆಗೆ ಪ್ರಯಾಣಿಸುತ್ತಿದ್ದು ಬೈಕ್‌ ಸವಾರ ಆರೋಪಿ ಉಮೇಶ ಪ್ರಭು ಎಂಬುವವರು ಬೈಕ್‌ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ ನಿರ್ಲಕ್ಷತನದಿಂದ ಏಕಾಏಕಿಯಾಗಿ ಬ್ರೇಕ್‌ ಹಾಕಿದಾಗ ಬೈಕ್‌ ನಿಯಂತ್ರಣಕ್ಕೆ ಸಿಗದೆ ರಸ್ತೆಯಲ್ಲಿ ಅಡ್ಡ ಬಿದ್ದಿದ್ದು ಪರಿಣಾಮವಾಗಿ ಅನಂತ ಪ್ರಭುರವರ ಎಡಕೈಗೆ ಮೂಳೆ ಮುರಿತವಾಗಿದ್ದು ಉಡುಪಿಯ ಹೈಟೆಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 87/2015 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕುಂದಾಪುರ: ದಿನಾಂಕ 02/09/2015 ರಂದು ರಾತ್ರಿ 8:15 ಗಂಟೆಗೆ ಕುಂದಾಪುರ ತಾಲೂಕು ಉಪ್ಪಿನ ಕುದ್ರು ಗ್ರಾಮದ ಹಾದಿಬೆಟ್ಟು ಕ್ರಾಸ್‌ ಎಂಬಲ್ಲಿ ಆಪಾದಿತ ರಾಧಕೃಷ್ಣ ಎಂಬುವವರು KA 20 W 4188 ನೇ ಬೈಕನ್ನು ಉಪ್ಪಿನಕುದ್ರು ಕಡೆಯಿಂದ ತಲ್ಲೂರು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ಬಲಬದಿಗೆ ಬಂದು ಪಿರ್ಯಾದಿದಾರರಾದ ಮಂಜುನಾಥ (29), ತಂದೆ : ಕುಷ್ಟ, ವಾಸ: ಮೊಳಸಾಲ್‌‌ ಬೆಟ್ಟು ಉಪ್ಪಿನಕುದ್ರು ಗ್ರಾಮ ಕುಂದಾಪುರ ತಾಲೂಕು ಇವರು ಸಹ ಸವಾರರಾಗಿ, ನಿತ್ತೇಶ ಎಂಬುವವರು ಸವಾರರಾಗಿ ತಲ್ಲೂರಿ ಕಡೆಯಿಂದ ಉಪ್ಪಿನಕುದ್ರು ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿದ್ದ KA 20 S 3902 ನೇ ಬೈಕಿಗೆ ಎದುರಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ ಮಂಜುನಾಥ ರವರು ಹಾಗೂ ಬೈಕ್‌ ಸವಾರ ನಿತ್ತೇಶ ಬೈಕ್ ಸಮೇತ ರಸ್ತೆಯಲ್ಲಿ ಬಿದ್ದು ನಿತ್ತೇಶನ ತಲೆಯು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ತಾಗಿ ಅವರ ತಲೆಗೆ ಬಲ ಕಿವಿಗೆ ಹಾಗೂ ಮೈಕೈಗೆ ರಕ್ತಗಾಯ  ಹಾಗೂ ಒಳ ನೋವು ಉಂಟಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲದ  ಕೆಎಂಸಿ ಆಸ್ಪತ್ರೆಗೆ ಹೋಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 109/2015 ಕಲಂ: 279 ,337   ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಹಲ್ಲೆ ಪ್ರಕರಣ
  • ಶಂಕರನಾರಾಯಣ: ದಿನಾಂಕ 03/09/2015 ರಂದು 16:30 ಗಂಟೆಗೆ ಪಿರ್ಯಾದಿದಾರರಾದ ಎಮ್‌ ನಾಗಯ್ಯ ಶೆಟ್ಟಿ (59), ತಂದೆ: ದಿ ಸುಬ್ಬಣ್ಣ ಶೆಟ್ಟಿ, ವಾಸ: ಅಕ್ಕುಂಜೆ, ಬಡಬಾಳು, ಸಿದ್ದಾಫುರ ಗ್ರಾಮ ಕುಂದಾಪುರ ತಾಲೂಕು ಇವರು ಸಿದ್ದಾಪುರ ಗ್ರಾಮದ ಮಾರ್ಕೇಟ್‌ ಹತ್ತಿರ ತನ್ನ ಸ್ನೇಹಿತ ಶೇಖರನೊಂದಿಗೆ ಕುಳಿತುಕೊಂಡಿದ್ದ ಸಮಯ ಆರೋಪಿ ಗಣಪತಿ ಶೆಟ್ಟಿ ಎಂಬುವವರು ಕೈಯಲ್ಲಿದ್ದ ಬಾಟಲಿಯಿಂದ ನಾಗಯ್ಯ ಶೆಟ್ಟಿ ಯವರಿಗೆ ಹಲ್ಲೆ ನಡೆಸಿದ್ದು ಪರಿಣಾಮ ಗಂಭೀರ ಗಾಯವಾಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 180/2015, ಕಲಂ: 326 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     

No comments: