Saturday, August 22, 2015

Daily Crime Reports As on 22/08/2015 at 17:00 Hrs



ಅಪಘಾತ ಪ್ರಕರಣ

  • ಕಾಪು: ದಿನಾಂಕ 22-08-2015 ರಂದು ರಾಘವ ಪೂಜಾರಿ ಇವರು ಕೆಎ 20 ಡಬ್ಲ್ಯೂ 31 ನೇ ಟಿ.ವಿ.ಎಸ್. ಲೂನಾದಲ್ಲಿ ಕಾಪು ಕಡೆಯಿಂದ ಪಾಂಗಾಳ ಕಡೆಗೆ ಬರುತ್ತಾ ಬೆಳಿಗ್ಗೆ 10:00 ಗಂಟೆಯ ಸುಮಾರಿಗೆ ಪಾಂಗಾಳ ವಿಜಯ ಬ್ಯಾಂಕ್ ಬಳಿ ರಾ.ಹೆ.66 ರಲ್ಲಿ ತಲುಪುವಾಗ್ಗೆ ಆರೋಪಿ ಕೆ.ಎ19 ಎಮ್.ಬಿ. 6867 ನೇ ಕಾರು ಚಾಲಕನು ಕಾರನ್ನು ಕಾಪು ಕಡೆಯಿಂದ  ಉಡುಪಿ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಲೂನಾಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ರಾಘವ ಪೂಜಾರಿ ಇವರು ಲೂನಾ ಸಮೇತ ರಸ್ತೆಗೆ ಬಿದ್ದು, ರಕ್ತಗಾಯ ಉಂಟಾದವರನ್ನು ಚಿಕಿತ್ಸೆ ಬಗ್ಗೆ ಉಡುಪಿ ಆಸ್ಪತ್ರೆಗೆ ದಾಖಲಿಸಿದಲ್ಲಿ, ರಾಘವ ಪೂಜಾರಿ ಇವರು ಚಿಕಿತ್ಸೆ ಫಲಕಾರಿಯಾಗದೇ ಬೆಳಿಗ್ಗೆ 10:45 ಗಂಟೆಗೆ ಮೃತಪಟ್ಟಿದ್ದಾಗಿದೆ. ಈ ಬಗ್ಗೆ ಕಾಪು ಪೋಲಿಸ್ ಠಾಣೆ ಅಪರಾಧ ಕ್ರಮಾಂಕ  156/2015 ಕಲಂ 279,304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕೋಟ: ಪಿರ್ಯಾದಿ ಅಂತೋನಿ ಡಿ ಸೋಜಾ ಇವರ ಭಾವ ಎಲಿಯಾಸ್ ಡಿ.ಸಿಲ್ವಾ ರವರು ಕೆ.ಎ:20 ಬಿ:3810 ನೇ ನಂಬ್ರದ ಆಟೋ ರಿಕ್ಷಾವನ್ನು ಹೊಂದಿದ್ದು ಸದ್ರಿ ಆಟೋ ರಿಕ್ಷಾವನ್ನು ಧನಂಜಯ ಎಂಬುವರಿಗೆ ಬಾಡಿಗೆ ನೀಡಿದ್ದು ದಿನಾಂಕ:22/08/2015 ರಂದು ಬೆಳಿಗ್ಗೆ  ಸದ್ರಿ ಆಟೋ ರಿಕ್ಷಾದಲ್ಲಿ  ಎಲಿಯಾಸ್ ಡಿ.ಸಿಲ್ವಾ ರವರು ಹಿಂಬದಿಯಲ್ಲಿ ಕುಳಿತು ಹಂಗಾರಕಟ್ಟೆ ಕಡೆಯಿಂದ ಮಾಬುಕಳ ಕಡೆಗೆ ಬರುವಾಗ ಸುಮಾರು 08:30 ಗಂಟೆಗೆ ಹಂಗಾರಕಟ್ಟೆ ಚಕ್ರವರ್ತಿ ಬಾರ್ ಬಳಿ ತಲುಪುವಾಗ ಆಟೋ ರಿಕ್ಷಾ ಚಾಲಕ ಧನಂಜಯ ಆಟೋ ರಿಕ್ಷಾವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಎದುರಿನಿಂದ ಅಡ್ಡ ಬಂದ ದನವನ್ನು ತಪ್ಪಿಸಲು ಓಮ್ಮಲೇ ಬ್ರೇಕ್‌ ಹಾಕಿದ ಪರಿಣಾಮ ನಿಯಂತ್ರಣ ತಪ್ಪಿ ಬಾರ್‌ನ ಬಳಿಯ ಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾದ ಹಿಂಬದಿಯಲ್ಲಿ ಕುಳಿತಿದ್ದ ಎಲಿಯಾಸ್ ಡಿ.ಸಿಲ್ವಾ ತಲೆಗೆ ರಿಕ್ಷಾದ ರಾಡ್ ತಾಗಿ ತೀವ್ರ ಸ್ವರೂಪದ ಹಾಗೂ ಚಾಲಕ ಧನಂಜಯ ರವರ ಕೈಗೆ ಪೆಟ್ಟಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಇಬ್ಬರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ ಆಸ್ಪತ್ರೆಗೆ ಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ಎಲಿಯಾಸ್ ಡಿ.ಸಿಲ್ವಾ ರವರು ಮೃತಪಟ್ಟಿರುವುದಾಗಿ ತಿಳಿಸಿದ್ದು ಧನಂಜಯರವರನ್ನು ಒಳರೋಗಿಯಾಗಿ ದಾಖಲಿಸಿ ಕೊಂಡಿರುತ್ತಾರೆ. ಈ ಬಗ್ಗೆ ಕೋಟ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ  187/2015 ಕಲಂ 279, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ

  • ಕಾರ್ಕಳ: ಕಾರ್ಕಳ ತಾಲೂಕು ಮಾಳ ಗ್ರಾಮದ ಹೊಸಬೆಟ್ಟು ಮನೆ ಎಂಬಲ್ಲಿ ವಾಸವಾಗಿರುವ ಸುಮಾರು 57 ವರ್ಷದ ಸನ್ನಿ ಮ್ಯಾಥ್ಯು ಎಂಬವರು ದಿನಾಂಕ: 18/08/2015 ರಂದು  ಸಂಜೆ 7:00 ಗಂಟೆಗೆ  ಸುಮಾರಿಗೆ ಮನೆಯಿಂದ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಾಸ್ಸು ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ  140/15 ಕಲಂ ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.
ಜಾತಿ ನಿಂದನೆ ಪ್ರಕರಣ

  • ಕೋಟ: ದಿನಾಂಕ:21/08/2015 ರಂದು ಸಂಜೆ 7:30 ಗಂಟೆಗೆ ಪಿರ್ಯಾದಿ ಗಣೇಶ ಹಾಗೂ ಅವರ ಸ್ನೇಹಿತ ಆದರ್ಶ ಮಡಿವಾಳರವರು ಅವರ ಬಾಬ್ತು ಮೋಟಾರ್ ಸೈಕಲ್‌ನಲ್ಲಿ ಶಿರಿಯಾರದ ಚಂದ್ರ ಆಚಾರಿಯವರ ಅಂಗಡಿಗೆ ಬಂದು ಅಲ್ಲಿಂದ ವಾಪಾಸು ಹೋಗುವಾಗ ಗಾವಳಿ ಬಳಿ  ಜಗನ್ನಾಥ ಶೆಟ್ಟಿ ಚಿಟ್ಟೆ ಬೈಲು, ಭಾಸ್ಕರ ಶೆಟ್ಟಿ, ಅನಿಲ ಶೆಟ್ಟಿ, ಹಾಗೂ ಇನ್ನೊಬ್ಬ ವ್ಯಕ್ತಿ ಗ್ರೇ ಕಲರ್ ಐ-20 ಹುಂಡೈ ಕಾರಿನಲ್ಲಿ ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್‌ನ್ನು ಅಡ್ಡಗಟ್ಟಿ ನೀವು ಚಂದ್ರ ಆಚಾರಿ ಅಂಗಡಿಗೆ ಯಾಕೆ ಬಂದಿದ್ದು ಎಂದು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಜೀವ ಸಹಿತ ಬಿಡುವುದಿಲ್ಲ ಎಂದು ಹೇಳಿ ಪಿರ್ಯಾದಿದಾರರ ಕತ್ತಿನಲ್ಲಿದ್ದ ಸುಮಾರು 12 ಗ್ರಾಂ ಚಿನ್ನದ ಸರವನ್ನು ಕಸಿದು ಮರದ ರೀಪನ್ನು ತಗೆದುಕೊಂಡು ಹೊಡೆಯಲು ಬಂದಿರುವುದಾಗಿದೆ. ಈ ಬಗ್ಗೆ ಕೋಟ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ  188/2015 ಕಲಂ:341,504,506, 392, 34 ಐಪಿಸಿ, 3(1)(10) SC/ST ACT ಯಂತೆ ಪ್ರಕರಣ ದಾಖಲಾಗಿರುತ್ತದೆ.


ಅಸ್ವಾಭಾವಿಕ ಮರಣ ಪ್ರಕರಣ

  • ಕೋಟ: ಜಯರಾಮ ಪ್ರಾಯ:40 ವರ್ಷ ಎಂಬುವರು ದಿನಾಂಕ:21/08/2015 ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ:22/08/2015 ರ ಬೆಳಿಗ್ಗೆ 02:30 ಗಂಟೆ ಮಧ್ಯಾವಧಿಯಲ್ಲಿ ಉಡುಪಿ ತಾಲೂಕು ವಡ್ಡರ್ಸೆ ಗ್ರಾಮದ ಅವರ ಮನೆಯ ಅಂಗಳದಲ್ಲಿನ ಆವರಣವಿಲ್ಲದ ಬಾವಿಗೆ ಆಕಸ್ಮಿಕವಾಗಿ ಕಾಲುಜಾರಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಠಾಣೆ ಯು.ಡಿ.ಆರ್‌ ನಂಬ್ರ 32/2015 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಗಂಗೊಳ್ಳಿ: ಸುಮಾರು 42 ವರ್ಷ ಪ್ರಾಯದ ಕೃಷ್ಣ ಖಾರ್ವಿ ಎಂಬವರು ಹೊಸಾಡು ಗ್ರಾಮದ ಭಗತ್ ನಗರದಲ್ಲಿ ವಾಸ ಮಾಡಿಕೊಂಡಿದ್ದು, ದಿನಾಂಕ:21/08/2015 ರಂದು ರಾತ್ರಿ 8:00 ಗಂಟೆಗೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕರೆಂಟ್ ಹೋದಾಗ ಸೀಮೆಎಣ್ಣೆ ದೀಪ (ಚಿಮಣಿ) ಉರಿಸಿಕೊಂಡು ಬಾಗಿಲು ಚಿಲಕ ಹಾಕಿ ಮಲಗಿದ್ದು, ಆಕಸ್ಮಿಕವಾಗಿ ಉರಿಯುತ್ತಿದ್ದ ಚಿಮಣಿ ದೀಪ ಮಲಗಿದಲ್ಲಿಯೇ ಬಿದ್ದು, ಬೆಂಕಿ ಹತ್ತಿಕೊಂಡು ತೀವ್ರತರವಾಗಿ  ಸುಟ್ಟ ಗಾಯಗೊಂಡು ಬೊಬ್ಬೆ ಹಾಕುತ್ತಿದ್ದುದನ್ನು ಕೇಳಿ ಅಕ್ಕಪಕ್ಕದವರು ಬಾಗಿಲನ್ನು ದೂಡಿ ಮನೆಯೊಳಗೆ ಬಂದು ಕೃಷ್ಣ ಖಾರ್ವಿರವರನ್ನು ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:22/08/2015 ರಂದು ಬೆಳಿಗ್ಗೆ 10:00 ಗಂಟೆಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಠಾಣೆ ಯು.ಡಿ.ಆರ್‌ ನಂಬ್ರ 12/2015 ಕಲಂ:174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: