Monday, August 17, 2015

Daily Crime Reports As on 17/08/2015 at 17:00 Hrsಅಪಘಾತ ಪ್ರಕರಣ 
  • ಬ್ರಹ್ಮಾವರ: ದಿನಾಂಕ 16/08/2015 ರಂದು 20.15 ಗಂಟೆಗೆ ಉಡುಪಿ ತಾಲೂಕು ಉಪ್ಪೂರು ಗ್ರಾಮದ ಲಕ್ಷ್ಮೀ ಬಾರಿನ ಹತ್ತಿರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪಿರ್ಯಾದಿದಾರರಾದ ಈಶ್ವರ ಸೇರ್ವೆಗಾರ ಇವರು ರಸ್ತೆ ದಾಟಲು ನಿಂತುಕೊಂಡಿರುವಾಗ ಆರೋಪಿ ಗೋಪಾಲಕೃಷ್ಣ ತನ್ನ ಕಾರು ನಂಬ್ರ ಕೆಎ 19 ಸಿ 4746 ನೇ ಯದನ್ನು ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ  ಹೊಡೆದ ಪರಿಣಾಮ ಈಶ್ವರ ಸೇರ್ವೆಗಾರ ರವರು ರಸ್ತೆಗೆ ಬಿದ್ದು ಬಲ ಬದಿಯ ಸೊಂಟ ಹಾಗೂ ಎರಡೂ ಕಾಲುಗಳಿಗೆ ರಕ್ತಗಾಯವಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 162/15 ಕಲಂ: 279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ 
  • ಉಡುಪಿ: ಪಿರ್ಯಾದಿದಾರರಾದ ನರಸಿಂಹ ಕಾಮತ್‌‌ (33) ತಂದೆ ರತ್ನಾಕರ ಕಾಮತ್‌, ವಾಸ: ಕಲ್ಕೂರ್‌ ಕೃಷ್ಣ ಪ್ಲಾಟ್‌ ನಂ 311 ಕಲ್ಸಂಕ ಗುಂಡಿಬೈಲು ರೋಡ್‌ ಉಡುಪಿ ಇವರು ಉಡುಪಿ ಡಯಾನಾ ಸರ್ಕಲ್ ಬಳಿ ಇರುವ  ಎಕ್ಸಿಸ್ ಬ್ರಾಂಚ್ ಮೈನ್ ಬ್ರಾಂಚ್‌ನಲ್ಲಿ ಶಾಖಾ ವ್ಯವಸ್ಥಾಪಕರಾಗಿದ್ದು , ದಿನಾಂಕ 17/08/2015 ರಂದು ಬ್ಯಾಂಕ್ ಹಾಗೂ ಎಟಿಎಮ್‌ನಲ್ಲಿ ಕರ್ತವ್ಯದಲ್ಲಿದ್ದ ಸೆಕ್ಯೂರಿಟಿ ವಾಸು ಟಿ ಪೂಜಾರಿ ರವರು 02:25 ಗಂಟೆಗೆ ಫೋನ್ ಮಾಡಿ ತಿಳಿಸಿದಂತೆ ನರಸಿಂಹ ಕಾಮತ್‌‌ ರವರು ಬಂದು ನೋಡಿದಾಗ 02:15 ಗಂಟೆಗೆ ಬ್ಯಾಂಕಿಗೆ ಹೊಂದಿಕೊಂಡು ಇರುವ ಎಟಿಎಮ್‌ನಲ್ಲಿ ಯಾರೋ ಕಳ್ಳರು ಯಾವುದೋ ಆಯುಧದಿಂದ ಎಟಿಎಮ್‌ ಮೆಷಿನ್‌ನ ಎದುರಿನ ಬಾಗಿಲನ್ನು ಮೀಟಿ ಕಳವು ಮಾಡಲು ಪ್ರಯತ್ನಿಸಿದ್ದಾಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 182/2015 ಕಲಂ: 457, 511 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಸ್ವಾಭಾವಿಕ ಮರಣ ಪ್ರಕರಣಗಳು
  • ಕಾರ್ಕಳ: ದಿನಾಂಕ:16/08/2015 ರಂದು ಅಪರಾಹ್ನ 13:30 ಗಂಟೆಗೆ ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ನಕ್ರೆಯ ಮಂದರಿಕೆ ಮನೆ ಎಂಬಲ್ಲಿ ಶ್ರೀಮತಿ ತೆರೆಜಾ ಡಿ ಸೋಜಾ ಪ್ರಾಯ:65 ವರ್ಷ ಎಂಬುವವರು ಸುಮಾರು 4 ವರ್ಷಗಳಿಂದ ತೀವ್ರ ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದವರು ಮನೆಯಲ್ಲಿಯೇ ಅಸ್ವಸ್ಥಗೊಂಡು ಮಲಗಿದ್ದವರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದು ಪರೀಕ್ಷಿಸಿದ ವೈದ್ಯರು ಶ್ರೀಮತಿ ತೆರೆಜಾ ಡಿಸೋಜಾ ಇವರಿಗೆ ತೀವ್ರ ತರಹದ ಹೃದಯಾಘಾತವಾಗಿರುವುದಾಗಿ ತಿಳಿಸಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿದರೂ ಸಹ ಚಿಕಿತ್ಸೆ ಫಲಕಾರಿಯಾಗದೇ 15:30 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೋಲಿಸ್ ಠಾಣೆ ಯುಡಿಆರ್ ಕ್ರಮಾಂಕ 26/2015 ಕಲಂ: 174 ಸಿ.ಆರ್.ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ರವೀಂದ್ರ (ಪ್ರಾಯ 26 ವರ್ಷ) ಎಂಬವರು ದಿನಾಂಕ: 16/08/2015 ರಂದು ರಾತ್ರಿ 9:00 ಗಂಟೆಯಿಂದ ದಿನಾಂಕ: 17/08/2015 ರಂದು ಬೆಳಿಗ್ಗೆ 06:30 ಗಂಟೆ ನಡುವಿನ ಅವಧಿಯಲ್ಲಿ ಕುಂದಾಪುರ ತಾಲೂಕು ಕರ್ಕುಂಜೆ ಗ್ರಾಮದ ಹಿಲ್ಕೋಡು ಕಟ್ಕೇರ್‌ಮನೆ ಎಂಬಲ್ಲಿ ಯಾವುದೋ ವೈಯಕ್ತಿಕ  ಕಾರಣದಿಂದ  ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೋಲಿಸ್ ಠಾಣೆ ಯುಡಿಆರ್ ಕ್ರಮಾಂಕ 37/2015 ಕಲಂ: 174 ಸಿ.ಆರ್.ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   No comments: